Wednesday, 24 March 2021

Study of history for exam success

  MahitiVedike Com       Wednesday, 24 March 2021
Subject : history notes 
Subject Language : Kannada
Which Department : all
Place : Karnataka
Announcement Date : 25/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ಇತಿಹಾಸವನ್ನು ಓದುವುದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮಾತ್ರವಲ್ಲ, ಪ್ರಾಚೀನ ಕಾಲದಿಂದ ಹಿಡಿದು ಸ್ವಾತಂತ್ರ್ಯದ ನಂತರ ಹಾಗೂ ಪ್ರಸ್ತುತ ಭಾರತ ಹೇಗೆ ರೂಪುಗೊಂಡಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಅವಶ್ಯಕ. ಇತಿಹಾಸ ಎಲ್ಲಾ ಅನ್ವಯಿಕ ಶಾಸ್ತ್ರಗಳೊಂದಿಗೆ ಕ್ರಮಬದ್ಧವಾಗಿ ಸಂಬಂಧ ಹೊಂದಿದ್ದು, ಆ ವಿಭಾಗಗಳಲ್ಲಿ ಕಾಲಕಾಲಕ್ಕೆ ಜರುಗುವ ಮಹತ್ವದ ಘಟನಾವಳಿಗಳು, ತ್ಯಾಗ ಬಲಿದಾನಗಳು, ಸಾಧನೆಗಳು, ತಿರುವುಗಳು, ಸಂಶೋಧನೆಗಳ ಫಲ ಇವುಗಳೆಲ್ಲವನ್ನೂ ದಾಖಲಿಸುತ್ತದೆ. ಇದು ಕೇವಲ ಚಕ್ರವರ್ತಿ, ರಾಜರು, ರಾಜಕೀಯ ನಾಯಕರ ಕಥೆಯಾಗಿರದೇ, ಆ ಕಾಲಘಟ್ಟದಲ್ಲಿನ ಮಹತ್ತರ ವಿಷಯಗಳಾಗಿದ್ದು, ಕಾಲಾನುಕ್ರಮಣಿಕೆಯಲ್ಲಿ ಹೊಂದಿಸಿಕೊಂಡು, ಪ್ರಸ್ತುತದೊಂದಿಗೆ ತುಲಾನಾತ್ಮಕ ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತ.

ಇತಿಹಾಸದಿಂದ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ 15 ರಿಂದ 20 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ವಿಷಯವನ್ನು ಕ್ರಮಬದ್ಧವಾಗಿ ಓದುವುದರಿಂದ ಉತ್ತಮ ಅಂಕಗಳನ್ನು ಪಡೆಯಬಹುದು.


 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಮುನ್ನ ಪಠ್ಯಕ್ರಮದ ಪ್ರತಿಯನ್ನು ಇಟ್ಟುಕೊಂಡು, ಹಲವಾರು ಬಾರಿ ಓದಿ ಮನನ ಮಾಡಿಕೊಂಡು, ಓದಲು ಬೇಕಾಗುವ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇತಿಹಾಸದ ಮೂಲ ವಿಷಯಗಳಿಗೆ ರಾಜ್ಯ ಸರ್ಕಾರದ 6 ರಿಂದ 12ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳು (ktbs.kar.nic.in ನಲ್ಲಿ ಲಭ್ಯ), ಎರಡು ಮಾಧ್ಯಮಗಳಲ್ಲಿ ಲಭ್ಯವಿದ್ದು, ಇಂಗ್ಲಿಷ್‌ ಮಾಧ್ಯಮದಲ್ಲಿರುವ ಹಳೆಯ ಮತ್ತು ಹೊಸ ರೆಫರೆನ್ಸ್‌ 5 ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಮೂರು-ನಾಲ್ಕು ಬಾರಿ ಓದಬೇಕು. ನಂತರ ಹೆಚ್ಚಿನ ಮತ್ತು ವಿಸ್ತಾರವಾದ ವಿಷಯ ಅಧ್ಯಯನಕ್ಕೆ ರೆಫರೆನ್ಸ್‌ ಪುಸ್ತಕಗಳನ್ನು ಓದಬೇಕು.

l India's Ancient Past - R.S. Sharma

l History & Medieval India- Statistic Satish Chandra

l India's Struggle for Independence - Bipin Chandra

l A Brief History & Modern India - Spectrum

l A concise History of Karnataka- Dr. Surya U. Kamath

ಮೇಲಿನ ಎಲ್ಲಾ ಪುಸ್ತಕಗಳು ಇಂಗ್ಲಿಷ್‌ ಮಾಧ್ಯಮದ ಅಭ್ಯರ್ಥಿಗಳಿಗೆ ಲಭ್ಯ. ಈ ಪುಸ್ತಕಗಳು ಯುಪಿಎಸ್‌ಸಿ ಮಟ್ಟದಲ್ಲಿದ್ದು ಎಲ್ಲಾ ಪರೀಕ್ಷೆಗಳಿಗೂ ಓದಬಹುದು.

ಕನ್ನಡದ ಮಾಧ್ಯಮದಲ್ಲಿ ಈ ಕೆಳಗಿನ ಪುಸ್ತಕಗಳು ಲಭ್ಯ.

l ಕೆಎನ್‌ಎ ರವರ ಪುಸ್ತಕಗಳು

l ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಇತಿಹಾಸ - ಡಾ. ಕೆ. ಸದಾಶಿವ

l ಸಮಗ್ರ ಕರ್ನಾಟಕ ಇತಿಹಾಸ - ಪಾಲಾಕ್ಷ

l ಕರ್ನಾಟಕ ಕೈಗನ್ನಡಿ - ಸೂರ್ಯನಾಥ ಕಾಮತ್

l ಕರ್ನಾಟಕ ಏಕೀಕರಣ ಇತಿಹಾಸ - ಎಚ್‌.ಎಸ್‌.

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಚಿ. ಶಂಕರರಾವ್

l ಸಮಗ್ರ ಸ್ಪರ್ಧಾ ಇತಿಹಾಸ - ಸೋಮಪ್ಪ ಎಸ್. ದುಂಡಿಗೇರಿ

ಇತಿಹಾಸವನ್ನು ಓದುವಾಗ ಕಾಲಾನುಕ್ರಮ (ಕ್ರೊನೊಲಜಿ) ಗಳ ಬಗ್ಗೆ ಪಟ್ಟಿ ಮಾಡಿ. ಅದರಲ್ಲಿ ಇಸವಿ, ರಾಜಮನೆತನ, ಪ್ರಮುಖ ರಾಜರು, ರಾಜ ಲಾಂಛನಗಳು, ಸುಧಾರಣೆಗಳು, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಇತರ ಪ್ರಮುಖ ವಿಷಯಗಳನ್ನು ಕೋಷ್ಠಕ ರೂಪದಲ್ಲಿ ತಯಾರಿಸಿ ಓದುವ ಸ್ಥಳದಲ್ಲಿ ಅಂಟಿಸಿ ಪದೇ ಪದೇ ನೋಡುವುದರಿಂದ ಇಡೀ ಮಾಹಿತಿಯನ್ನು ಕಾಲಾನುಕ್ರಮದಲ್ಲಿ ನೆನಪಿನಲ್ಲಿಟ್ಟುಕೊಳ್ಳಬಹುದು. ಪ್ರಾಚೀನ, ಮಧ್ಯಕಾಲಿನ ಮತ್ತು ಆಧುನಿಕ ಇತಿಹಾಸಗಳ ಬಗ್ಗೆ ವಿವಿಧ ಕೋಷ್ಠಕಗಳನ್ನು ವಿವಿಧ ಬಣ್ಣಗಳಲ್ಲಿ ನೋಡಲು ಮತ್ತು ಓದಲು ಸುಂದರವಾಗಿ ಕಾಣುವಂತೆ ರಚಿಸಿಕೊಳ್ಳಬಹುದು.

ಕೀ ವರ್ಡ್‌ಗಳನ್ನು ಗುರುತಿಸಿ ಗೆರೆಯನ್ನು ಎಳೆದುಕೊಳ್ಳಿ, ಫ್ಲೋ ಚಾರ್ಟ್‌ಗಳನ್ನು ಕೂಡ ತಯಾರಿಸಿ ಮಾಹಿತಿಯನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬಹುದು.

ಪ್ರತಿ ಅಧ್ಯಾಯದ ನಂತರ ಅದಕ್ಕೆ ಸಂಬಂಧಪಟ್ಟಂತೆ ಯಾವ ಪ್ರಶ್ನೆಗಳು ಬರಬಹುದೆಂಬ ಊಹೆಯನ್ನು ಮಾಡಿ, ಅಂತಹ ಪ್ರಶ್ನೆಗಳಿಗೆ ತಯಾರಿ ಮಾಡಿಕೊಳ್ಳಿ. ಪರೀಕ್ಷೆಗೆ ಮುನ್ನ ಪುನರ್‌ಮನನ ಮಾಡಿ, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡುಸುವುದರಿಂದ, ಗುಂಪು ಚರ್ಚೆಯಿಂದ ಅಭ್ಯರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿ, ಯಾವುದೇ ಆಂತಕವಿಲ್ಲದೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಬರೆಯಬಹುದು.

(ನಿರ್ದೇಶಕರು, ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಬೆಂಗಳೂರು)
logoblog

Thanks for reading Study of history for exam success

Previous
« Prev Post

No comments:

Post a Comment