ಲೋಹ ದ ಅಧ್ಯಾಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳು"
1) _ಬೆಳ್ಳಿಯ ವಸ್ತುಗಳನ್ನು ಗಾಳಿಗೆ ತೆರೆದಿಟ್ಟರೆ ಕೆಲಕಾಲದ ನಂತರ ಕಪ್ಪಾಗಿ ಕಾಣಲು ಕಾರಣ ಗಾಳಿಯೊಂದಿಗೆ ಬೆಳ್ಳಿ ವರ್ತಿಸಿ ಈ ಕೆಳಗಿನ ಯಾವ ಸಂಯುಕ್ತದ ಕವಚ ಉಂಟಾಗಿದೆ?_
ಸಿಲ್ವರ್ ಸಲ್ಫೈಡ್
2) _ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಾಗ ಅಥವಾ ಯಂತ್ರದ ಬಿಡಿಭಾಗಗಳನ್ನು ಜೋಡಿಸಲು ಬಳಸುವ ಕ್ರಿಯೆ?_
ಥರ್ಮಿಟ್ ಕ್ರಿಯೆ (Thermit reaction)
3) _ಕಬ್ಬಿಣವು ತುಕ್ಕು ಹಿಡಿಯುವುದನ್ನು ತಡೆಯಲು ಗಾಲ್ವಿನೀಕರಣ ವಿಧಾನದಲ್ಲಿ ಕಬ್ಬಿನ ಅಥವಾ ಉಕ್ಕಿನ ಮೇಲ್ಪದರಕ್ಕೆ ಈ ಕೆಳಗಿನ ಯಾವ ಲೋಹದ ಪದರವನ್ನು ಲೇಪಿಸಿರುತ್ತಾರೆ?_
ಸತು(Zinc)
4) _ದ್ರವರೂಪದ ಲೋಹಗಳು?_
ಪಾದರಸ ಮತ್ತು ಗ್ಯಾಲಿಯಮ್
5) _ಲೋಹಗಳು ದುರ್ಬಲ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ_ ?
ಜಲಜನಕ
6) _ಅಮಾಲ್ಗಮ್ ನ್ನು ತಯಾರಿಸಲು ಲೋಹದೊಂದಿಗೆ ಈ ಕೆಳಗಿನ ಯಾವ ಲೋಹ ಬೆರೆಸುತ್ತಾರೆ?_
ಪಾದರಸ
7) _ಭೂಮಿಯ ಮೇಲ್ಪದರದ ಮೇಲೆ ಹೇರಳವಾಗಿ ದೊರೆಯುವ ಲೋಹ?_
ಅಲ್ಯುಮಿನಿಯಂ
8) _ಸೀಮೆಎಣ್ಣೆಯಲ್ಲಿ ಶೇಖರಿಸಿಡುವ ಲೋಹಗಳು_ ?
ಸೋಡಿಯಂ ಮತ್ತು ಪೊಟ್ಯಾಷಿಯಂ
9) _ಬಹುತೇಕ ಲೋಹಗಳು ನೈಟ್ರಿಕ್ ಆಮ್ಲದೊಂದಿಗೆ ವರ್ತಿಸುತ್ತದೆ ಆದರೆ ಈ ಕೆಳಗಿನ ಲೋಹದೊಂದಿಗೆ ವರ್ತಿಸುವುದಿಲ್ಲ?_
ಚಿನ್ನ
10) _ದ್ರವರಾಜ( ಅಕ್ವೇರಿಜಿಯಾ)ವು ಈ ಕೆಳಗಿನ ಯಾವುದರ ಮಿಶ್ರಣವಾಗಿದೆ?_
1:3ರ ಅನುಪಾತದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲದ ಮಿಶ್ರಣ
11) _ಶುದ್ಧ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುವ ಎರಡು ಲೋಹಗಳು_ ?
ಚಿನ್ನ ಮತ್ತು ಬೆಳ್ಳಿ
12) _ಯಾವ ಕಾರಣಕ್ಕಾಗಿ ಲೋಹವಾದ ಪಾದರಸವನ್ನು ಕಬ್ಬಿಣದ ಮಡಿಕೇಯಲ್ಲಿ ಸಂಗ್ರಹಿಸಿಡುತ್ತಾರೆ_ ?
ಕಬ್ಬಿಣವು ಪಾದರಸ ದೊಂದಿಗೆ ವರ್ತಿಸಿ ಅಮಾಲ್ಗಮ್ ಆಗೋದಿಲ್ಲ
13) " _ಮಿನಿಮಾಟ" ರೋಗವು ಈ ಕೆಳಗಿನ ಯಾವ ಲೋಹದ ಅಥವಾ ಕಲುಷಿತ ಆಹಾರದ ಮೂಲಕ ಮಾನವನ ದೇಹ ಸೇರಿದಾಗ ಬರುತ್ತದೆ?_
ಪಾದರಸ
14) " _ಮೂರ್ಖರ ಚಿನ್ನ" ಎಂದು ಕರೆಯಲ್ಪಡುವುದು?_
ಐರನ್ ಪೈರೇಟ್
15) _ರಕ್ತ ವರ್ಣಕ ಹಿಮೋಗ್ಲೋಬಿನ್ ನಲ್ಲಿರುವ ಲೋಹ?_
ಕಬ್ಬಿನ
16) _ಸಸ್ಯದಲ್ಲಿರುವ ಕ್ಲೋರೋಪ್ಲಾಸ್ಟ್ ನಲ್ಲಿರುವ ಲೋಹ?_
ಮೆಗ್ನೀಷಿಯಂ
17) " _ಕ್ವಿಕ್ ಸಿಲ್ವರ್" ಎಂದು ಕರೆಯಲ್ಪಡುವ ಲೋಹ?_
ಪಾದರಸ
18) _ವಿದ್ಯುತ್ ಬಲ್ಬ್ ಇನಲ್ಲಿ ಟಂಗಸ್ಟನ್ ಲೋಹ ಬಳಸಲು ಪ್ರಮುಖ ಕಾರಣ?_
ಟಂಗಸ್ಟನ್ ಅತಿಹೆಚ್ಚಿನ ದ್ರವದ ಬಿಂದು ಹೊಂದಿದ್ದು ಹೆಚ್ಚಿನ ವಿದ್ಯುತ್ ರೋಧ ಶಕ್ತಿಯನ್ನು ಹೊಂದಿದೆ
19) _ಬೆಳ್ಳಿ ಪಾದರಸದ ಅಮಾಲ್ಗಮ್ ಅನ್ನು ಈ ಕೆಳಗಿನ ಸಂದರ್ಭದಲ್ಲಿ ಬಳಸುತ್ತಾರೆ_ ?
ದಂತು ಕುಳಿಯನ್ನು ತುಂಬಲು
20) _ಕೃತಕ ಮಳೆಬರಿಸಲು ಯಾವ ರಾಸಾಯನಿಕ ಬಳಸಲಾಗುವುದು?_
ಸಿಲ್ವರ್ ಐಯೋಡೈಡ್
21) _ಅಡುಗೆ ಸೋಡಾದ ರಾಸಾಯನಿಕ ಹೆಸರು_ ?
ಸೋಡಿಯಂ ಬೈ ಕಾರ್ಬೊನೇಟ್
22) _ಕೃತಕ ಇಸ್ಕಾನ್ ತಯಾರಿಸಲು ಬಳಸುವ ಮಿಶ್ರಲೋಹ?_
ಅಲ್ನಿಕೋ
23) _ಸೋಡಿಯಂ ಬೈ ಕಾರ್ಬೊನೇಟ್ ನ್ನು ಆಹಾರದ ಮೂಲಕ ಸೇವನೆ ಮಾಡುವುದರಿಂದ ಯಾವ ಅನಿಲ ಬಿಡುಗಡೆಯಾಗುತ್ತದೆ_ ?
ಇಂಗಾಲ ಡೈ ಆಕ್ಸೈಡ್
24) _ತಾಮ್ರದ ಒಂದಿಗೆ ತವರನ್ನು ಸೇರಿಸಿದಾಗ ಪಡೆಯಬಹುದಾದ ಮಿಶ್ರ ಯಾವುದು_ ?
ಕಂಚು
No comments:
Post a Comment