ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದ್ವಾರಸಮುದ್ರದ ಹೊಯ್ಸಳರ ಮೇಲೆ ಕೇಳಿರುವ ಪ್ರಶ್ನೋತ್ತರಗಳು
1) ಹೊಯ್ಸಳರ ದೇವಾಲಯದ ವಾಸ್ತು ಶಿಲ್ಪದ ವಿಶಿಷ್ಟ ಲಕ್ಷಣ?(KAS-2006)
ನಕ್ಷತ್ರಾಕಾರದ ಗರ್ಭಗುಡಿ
2) ಹೊಯ್ಸಳರ ಆಸ್ಥಾನ ದಲ್ಲಿ ರಚಿತವಾದ ಗದ್ಯಕರ್ಣಾಮೃತ ಎಂಬ ಸಂಸ್ಕೃತ ಗ್ರಂಥವು ಯಾವ ಪ್ರಕಾರಕ್ಕೆ ಸೇರಿದೆ?(KAS-2006)
ಚರಿತ್ರೆ
3) ದಕ್ಷಿಣ ಭಾರತದ ದೊರೆಗಳ ಕಾಲಾನುಕ್ರಮ?KAS-2006)
1) ಕಾಕತೀಯ ತ್ರಿಭುವನಮಲ್ಲ
2) ಹೊಯ್ಸಳ ವಿಷ್ಣುವರ್ಧನ
3) ಕಕತಿಯ ಪ್ರತಾಪರುದ್ರ
4) ಹೊಯ್ಸಳ ಸೋಮೇಶ್ವರ
4) ಗದ್ಯಕರ್ಣಾಮೃತ ಎನ್ನುವುದು ಯಾವ ಅಧ್ಯಯನಕ್ಕೆ ಬಹುಮುಖ್ಯ ಆಕಾರ?(KAS-2010)
ಹೊಯ್ಸಳ- ಪಾಂಡ್ಯ ಸಂಬಂಧಗಳು
5) ಹರಿಶ್ಚಂದ್ರ ಕಾವ್ಯ ಬರೆದ ಕವಿ?(PSI-2014)
ರಾಘವಾಂಕ
6) ಕೂಡಲಸಂಗಮ ಯಾವ ಜಿಲ್ಲೆಯಲ್ಲಿದೆ?(PSI-2002)
ಬಾಗಲಕೋಟೆ
7) ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ?(PSI-2000)
ಶೃಂಗೇರಿ
8) ಬಸವೇಶ್ವರರ ಆಧ್ಯಾತ್ಮಿಕ ಗುರು?(PSI-2000)
ಅಲ್ಲಮಪ್ರಭು
9) ಯಾವ ದಿಗ್ವಿಜಯ ದೊಂದಿಗೆ ಕರ್ನಾಟಕದಲ್ಲಿ ಹೊಯ್ಸಳರ ಅಧಿಪತ್ಯವು ಕೊನೆಗೊಂಡಿತು?(FDA-2005)
ವಿಜಯನಗರದ ದಿಗ್ವಿಜಯ
10) ನೊಳಂಬವಾಡಿ ಗೊಂಡ ಮತ್ತು ತಲಕಾಡುಗೊಂಡ ವಿಶೇಷಣಗಳು ಯಾರ ನಾಣ್ಯದ ಮೇಲೆ ಕಂಡುಬಂದಿವೆ?(FDA-2018)
ಬಿಟ್ಟಿದೇವ/ ವಿಷ್ಣುವರ್ಧನ.
12) ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು--- ಎಂದು ಕರೆಯುತ್ತಿದ್ದರು?(FDA-2019)
ಘಟಿಕಾಲಯಗಳು
13) ಕರ್ನಾಟಕದ ಉಚ್ಚಂಗಿಯು ಯಾರ ರಾಜಧಾನಿಯಾಗಿತ್ತು?(SDA-2006)
ಪಾಂಡ್ಯರು
14) ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದವರು?(SDA-2008)
ಹೊಯ್ಸಳರು
15) ಮೇಲುಕೋಟೆ ಯು ಯಾವ ಸೈದಾಂತಿಕ ತತ್ವದ ಕೇಂದ್ರವಾಗಿದೆ?
ವಿಶಿಷ್ಟಾದ್ವೈತ ಸಿದ್ಧಾಂತ
16) ಹೊಯ್ಸಳ ಸಾಮ್ರಾಜ್ಯದ ಚಿನ್ನೆ?(PC-2006)
ಹುಲಿಯನ್ನು ಕೊಲ್ಲುತ್ತಿರುವ ಸಳನ ದೃಶ್ಯ
17) ಹಳೇಬೀಡಿನ ಹಿಂದಿನ ಹೆಸರು?(PC-2010)
ದ್ವಾರಸಮುದ್ರ
18) ಕರ್ನಾಟಕದಲ್ಲಿ ಬೇಲೂರು ಯಾವುದಕ್ಕೆ ಹೆಸರುವಾಸಿ?(PC-2011)
ದೇವಾಲಯಗಳಿಗೆ
19) ಕರ್ನಾಟಕದ ಯಾವ ದೇವಾಲಯ ನಗರಿಯಲ್ಲಿ ಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವ ಪ್ರತಿವರ್ಷವೂ ನಡೆಯುವತದೆ?(KSRP-2018)
ಮೇಲುಕೋಟೆ
20) ಹೊಯ್ಸಳ ವಂಶದ ಮೊದಲ ಸ್ವತಂತ್ರ ರಾಜ?(KSRTC-2009)
ವಿಷ್ಣುವರ್ಧನ
No comments:
Post a Comment