Subject : history notes
Subject Language : Kannada
Which Department : all
Place : Karnataka
Announcement Date : 19/03/2021
Subject Format : PDF/JPJ
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
"ಭಾರತಕ್ಕೆ ಯುರೋಪಿಯನ್ನರ ಆಗಮನ "ಮತ್ತು "ಗಾಂಧಿ ಯುಗದ" ಅಧ್ಯಯನದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) ಭಾರತಕ್ಕೆ ಬಂದ ಯುರೋಪಿಯನ್ನರ ಸರಿಯಾದ ಕ್ರಮ?
ಪೋರ್ಚುಗೀಸ್, ಡಚ್ಚರು, ಬ್ರಿಟಿಷರು, ಫ್ರೆಂಚರು
2) ಪೋರ್ಚುಗೀಸರು ಯಾರಿಂದ ಗೋವಾ ಪಡೆದುಕೊಂಡರು?
ಆದಿಲ್ ಷಾಹಿಗಳಿಂದ
3) ಭಾರತ ದೇಶಕ್ಕೆ ಮೊದಲ ಹೊಸ ಸಮುದ್ರ ಮಾರ್ಗವನ್ನು ಕಂಡು ಹಿಡಿದವರು ಯಾರು?
ಪೋರ್ಚುಗೀಸರು
4) ವಾಸ್ಕೋಡಿಗಾಮ ಸಂಬಂಧಿಸಿರುವುದು?
ಪೋರ್ಚುಗಲ್ ನಾವಿಕ
5) ಭಾರತದೊಡನೆ ವ್ಯಾಪಾರವನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ ದೇಶ ಯಾವುದು?
ಪೋರ್ಚುಗಲ್
6) ಇಸ್ತಾನಬುಲ್ ಇದರ ಮೊದಲ ಹೆಸರು?
ಕಾನ್ಸ್ಟಾಂಟಿನೋಪಲ್
7) ಬ್ರಿಟಿಷ್ ಕಂಪನಿಗಳಿಗೆ ಯಾವ ಯುದ್ಧ ಭೂ ತೆರಿಗೆಯನ್ನು ವಸೂಲಿ ಮಾಡುವ ಅವಕಾಶ ಮಾಡಿಕೊಟ್ಟಿತು?
ಬಕ್ಸರ್ ಕದನ
8) ಭಾರತದಲ್ಲಿ ಪೋರ್ಚುಗೀಸರು ಪ್ರಥಮ ಕೋಟೆಯನ್ನು ನಿರ್ಮಿಸಿದ ಸ್ಥಳ ಯಾವುದು?
ಕೊಚ್ಚಿ
9) ಪ್ಲಾಸಿ ಕದನ ನಡೆದ ವರ್ಷ?
1757
10) ದಕ್ಷಿಣ ಭಾರತದಲ್ಲಿ ಬ್ರಿಟಿಷರು ಅವರ ಮೊದಲ ಕಾರ್ಖಾನೆಯನ್ನು ತೆರೆದಿದ್ದು ಎಲ್ಲಿ?
ಮಚಲೀಪಟ್ಟಣಂ
11) ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿಯನ್ನು ಪ್ರಾರಂಭಿಸಿದವರು?
ಡಚ್ಚರು
12) ಈಸ್ಟ್ ಇಂಡಿಯಾ ಕಂಪನಿಯ ಮೊದಲ ಗುರಿ?
ವಸಾಹತು ಸ್ಥಾಪನೆ
13) 1764ರಲ್ಲಿ ಬಕ್ಸರ್ ಕದನ ದಲ್ಲಿ ಬ್ರಿಟಿಷರನ್ನು ಎದುರಿಸಿದವರು?
ಮಿರ್ ಕಾಶಿಮ್
14) ಬ್ರಿಟಿಷರು ಭಾರತದಲ್ಲಿ ಕಟ್ಟಿದ ಕೋಟೆ ಯಾವುದು?
ಫೋರ್ಟ್ ಸೇಂಟ್ ಜಾರ್ಜ್ ಕೋಟೆ
15) ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಕೊನೆಯ ವಿದೇಶಿಯರು ಯಾರು?
ಫ್ರೆಂಚರು
16) ಇಷ್ಟು ಇಂಡಿಯಾ ಕಂಪನಿಯು ಯಾರ ಆಳ್ವಿಕೆಯ ಅವಧಿಯಲ್ಲಿ ಸ್ಥಾಪನೆಯಾಯಿತು?
ಅಕ್ಬರ್
17) ವಾಂಡಿವಾಷ್ ಯುದ್ಧ ಯಾರ ಯಾರ ನಡುವೆ ನಡೆಯಿತು?
ಬ್ರಿಟಿಷರು ಮತ್ತು ಫ್ರೆಂಚರು
18) ಇಷ್ಟು ಇಂಡಿಯಾ ಕಂಪನಿಯನ್ನು ವಾಣಿಜ್ಯ ಕಂಪನಿಯಿಂದ ಒಂದು ಪ್ರಾದೇಶಿಕ ಆಡಳಿತ ಶಕ್ತಿಯನ್ನು ಬೆಳೆಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
ರಾಬರ್ಟ್ ಕ್ಲೈವ್
19) ಭಾರತಕ್ಕೆ ಪೋರ್ಚುಗೀಸರು ಬಂದಾಗ ಅವರು ಎದುರಿಸಿದ ವಿದೇಶಿ ವರ್ತಕ ಪ್ರತಿಸ್ಪರ್ಧಿಗಳು ಯಾರು?
ಅರಬ್ಬರು
20) ಭಾರತದಲ್ಲಿ ಡಚ್ಚರ ತಮ್ಮ ಮೊದಲ ಕೈಗಾರಿಕೆ ಸ್ಥಾಪಿಸಿದ್ದು?
ಪುಲಿಕಾಟ್
21) ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಯುದ್ಧ ಯಾವುದು?
ಪ್ಲಾಸಿ
22) ಡಚ್ ಈಸ್ಟ್ ಇಂಡಿಯಾ ಕಂಪನಿ 1602 ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ ಯಾವುದು?
ಮಚಲಿಪಟ್ಟಣ
23) ಪೆನ್ಸಿಲ್ ನ್ನು ಭಾರತಕ್ಕೆ ಪರಿಚಯಿಸಿದವರು ಯಾರು?
ಇಂಗ್ಲಿಷರು
24) ಕ್ರಿಶ್ಚಿಯನ್ನರನ್ನು ಹಾಗೂ ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ಘೋಷಿಸಿದವರು ಯಾರು?
ಪೋರ್ಚುಗೀಸರು
25) ಜಗತ್ತಿನ ಇತಿಹಾಸದಲ್ಲಿ "ವಾಸ್ಕೋಡಗಾಮ ಯುಗ" ಎಂಬ ಪರಿಕಲ್ಪನೆಯನ್ನು ನೀಡಿದವರು?
ಕೆ.ಎಂ ಪನಿಕರ್
26) ಯಾವ ಯುರೋಪಿಯನ್ ಮೊಟ್ಟಮೊದಲಿಗೆ ಭೂಪ್ರದೇಶಗಳನ್ನು ಪಡೆಯುವುದಕ್ಕಾಗಿ ಭಾರತದ ರಾಜರುಗಳು ಆಂತರಿಕ ಜಗಳಗಳಲ್ಲಿ ತಲೆ ಹಾಕುವ ದೋರಣೆಯನ್ನು ಪ್ರಾರಂಭಿಸಿದನು?
ಡೂಪ್ಲೆ
27) 18ನೇ ಶತಮಾನದ ಮಧ್ಯಭಾಗದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದಿಂದ ಮಾಡುತ್ತಿದ್ದ ಮುಖ್ಯ ರಫ್ತುಗಳು ಯಾವವು?
ಹತ್ತಿ. ರೇಷ್ಮೆ. ಸಾಲ್ಟ ಪಿಟ್ರೆ ಮತ್ತು ಒಪಿಯಂ
28) ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆ ಸ್ಥಾಪಿಸಿದವರು ಯಾರು?
ಅಲ್ಬುಕರ್ಕ್
29) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಮುಚ್ಚಲ್ಪಟ್ಟಿತ್ತು?
1784
30) ಬ್ರಿಟನ್ನಿನ ಮಹಾರಾಣಿ ವಿಕ್ಟೋರಿಯ ಗದ್ದುಗೆಗೇರಿದ ವರ್ಷ?
1837
ಗಾಂಧಿಯುಗದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) ಬಾರ್ಡೋಲಿ ಸತ್ಯಾಗ್ರಹದ ನಾಯಕರು ಯಾರು?
ಸರ್ದಾರ್ ವಲ್ಲಭಾಯಿ ಪಟೇಲ್
2) ಯಾವ ಬ್ರಿಟನ್ ಪ್ರಧಾನಿ ಭಾರತಕ್ಕೆ ಕ್ರಿಪ್ಸ್ ಮಿಷನ್ ಅನ್ನು ಕಳಿಸಿದನು?
ವಿನ್ಸ್ಟನ್ ಚರ್ಚಿಲ್
3) ಅಸಹಕಾರ ಚಳುವಳಿಯನ್ನು ನಿಲ್ಲಿಸುವುದಕ್ಕೆ ಯಾವ ಘಟನೆ ಕಾರಣವಾಗಿದೆ?
ಚೌರಿಚೌರಾ ಘಟನೆ
4) ಗಣೇಶ್ ಸಾವರ್ಕರ್ ಪ್ರಾರಂಭಿಸಿದ ಸೊಸೈಟಿ ಯಾವುದು?
ಅಭಿನವ ಭಾರತ ಸೊಸೈಟಿ
5) ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಯಾವ ಪತ್ರಿಕೆಯನ್ನು ಪ್ರಕಟಿಸಿದರು?
ಇಂಡಿಯನ್ ಒಪಿನಿಯನ್
6) ಮಾಡು ಇಲ್ಲವೇ ಮಡಿ ಘೋಷಣೆ ಕೊಟ್ಟವರು ಯಾರು?
ಮಹಾತ್ಮ ಗಾಂಧೀಜಿ
7) ಮಹಾತ್ಮ ಗಾಂಧೀಜಿ ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹ?
ಚಂಪಾರಣ್ಯ
8) ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಭಾರತೀಯ ಗೌರ್ನರ್ ಜನರಲ್ ಯಾರು?
ಸಿ ರಾಜಗೋಪಾಲಚಾರಿ
9) ಮಹಾತ್ಮ ಗಾಂಧೀಜಿ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮೊದಲ ಬಾರಿ ಉಪವಾಸ ಸತ್ಯಾಗ್ರಹ ಮಾಡಿದರು?
ಅಹಮದಾಬಾದಿನ ಗಿರಣಿ ಕಾರ್ಮಿಕರ ಮುಷ್ಕರ
10) ಮಹಾತ್ಮ ಗಾಂಧೀಜಿಯವರಿಗೆ ಮಹಾತ್ಮ ಎಂಬ ಬಿರುದು ನೀಡಿದವರು?
ರವೀಂದ್ರನಾಥ್ ಟ್ಯಾಗೋರ್
11) ಮಹಾತ್ಮ ಗಾಂಧೀಜಿ ಅವರ ರಾಜಕೀಯ ಗುರು?
ಗೋಪಾಲಕೃಷ್ಣ ಗೋಖಲೆ
12) ಮೂರು ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದವರು?
ಡಾಕ್ಟರ್ ಬಿಆರ್ ಅಂಬೇಡ್ಕರ್
13) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು ಯಾರು?
ಮೊಮ್ಮದ್ ಅಲಿ ಜಿನ್ನ
14) ಯಾವ ಕಾಯ್ದೆ ವಿರುದ್ಧವಾಗಿ 1919 ರಲ್ಲಿ ಗಾಂಧೀಜಿ ಅವರು ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದರು?
ರೌಲತ್ ಕಾಯ್ದೆಯ ವಿರುದ್ಧ
15) ಸ್ವರಾಜ್ಯ ಪಕ್ಷದ ಸ್ಥಾಪಕರು ಯಾರು?
ಸಿಆರ್ ದಾಸ್ ಮತ್ತು ಮೋತಿಲಾಲ್ ನೆಹರು
16) ಖಿಲಾಫತ್ ಚಳುವಳಿಯ ನಾಯಕರು ಯಾರು?
ಅಲಿ ಸಹೋದರರು
No comments:
Post a Comment