ಕರ್ನಾಟಕದ ಭೂಗೋಳ ಶಾಸ್ತ್ರದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) ಕರ್ನಾಟಕದಲ್ಲಿ ಯಾವ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ?
ದಸರಾ
2) ಕರ್ನಾಟಕದ ರೇಷ್ಮೆ ಪಟ್ಟಣ ಯಾವುದು?
ರಾಮನಗರ
3) "ಸುವರ್ಣ ವಿಧಾನಸೌಧ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ಬೆಳಗಾವಿ
4) ಐತಿಹಾಸಿಕ ಸ್ಥಳ ಆಗಿರುವ "ಐಹೊಳೆ" ಯಾವ ಜಿಲ್ಲೆಯಲ್ಲಿದೆ?
ಬಾಗಲಕೋಟೆ
5) "ಯಾಣ" ಪ್ರವಾಸಿತಾಣವೂ ಯಾವ ಜಿಲ್ಲೆಯಲ್ಲಿದೆ?
ಉತ್ತರ ಕನ್ನಡ
6) ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ?
30+1=31( ಇತ್ತೀಚಿಗೆ ವಿಜಯನಗರ 31ನೇ ಜಿಲ್ಲೆಯಾಗಿದೆ.)
7) ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯದ ಅತಿ ದೊಡ್ಡ ಜಿಲ್ಲೆ?
ಬೆಳಗಾವಿ
8) ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ?
ಮಂಡ್ಯ
9) ಕರ್ನಾಟಕದ ಯಾವ ಪಟ್ಟಣ ನದಿ ತೀರದಲ್ಲಿ ಇಲ್ಲ?
ಮಡಿಕೇರಿ
10) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ಬಾಗಲಕೋಟೆ
11) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಮಾತನಾಡುತ್ತಾರೆ?
ದಕ್ಷಿಣ ಕನ್ನಡ ಮತ್ತು ಉಡುಪಿ
12) ಕರ್ನಾಟಕದ ಉದ್ಯಾನ ನಗರ ಎಂದೆನಿಸಿಕೊಳ್ಳುವ ಊರು?
ಬೆಂಗಳೂರು
13) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾಗಿರುವ "ನಂದಿ ಬೆಟ್ಟ" ಯಾವ ಜಿಲ್ಲೆಯಲ್ಲಿದೆ?
ಚಿಕ್ಕಬಳ್ಳಾಪುರ
14) ಮಲಗಿರುವ ಬುದ್ಧನ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಯಾದಗಿರಿ ಜಿಲ್ಲೆ
15) ಸೈಂಟ್ ಮೇರಿ ಐಲ್ಯಾಂಡ್ ದ್ವೀಪಯು ಯಾವ ಜಿಲ್ಲೆಯಲ್ಲಿದೆ?
ಉಡುಪಿ
ಕರ್ನಾಟಕದ ಅರಣ್ಯ ಗಳ ಮೇಲೆ ಕೇಳಿರುವ ಪ್ರಶ್ನೋತ್ತರಗಳು.
1) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಕಂಡುಬಂದಿದೆ?
ಉತ್ತರ ಕನ್ನಡ ( ಕಡಿಮೆ= "ಬಿಜಾಪುರ")
2) ರಾಣೆಬೆನ್ನೂರಿನಲ್ಲಿ ಯಾವ ವನ್ಯದಾಮ ಇದೆ?
ಕೃಷ್ಣಮೃಗ ವನ್ಯಧಾಮ
3) ಕರ್ನಾಟಕದಲ್ಲಿರುವ ಯಾವ ರಾಷ್ಟ್ರೀಯ ಉದ್ಯಾನ "ಪ್ರಜೆಕ್ಟ ಟೈಗರ್" ಗೆ ಸಂಬಂಧಿಸಿದೆ?
ಬಂಡೀಪುರ ರಾಷ್ಟ್ರೀಯ ಉದ್ಯಾನವನ
4) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ?
ಬೆಂಗಳೂರು
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಯಾವ ಜಿಲ್ಲೆಯಲ್ಲಿದೆ?
ಬಳ್ಳಾರಿ
6) ಬಿಸಿಲೆ ಕಾಡು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಹಾಸನ
7) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
ಚಾಮರಾಜನಗರ
8) ಕರ್ನಾಟಕ ರಾಜ್ಯದಲ್ಲಿ ಜೀವಶಾಸ್ತ್ರೀಯ "ಹಾಟ್-ಸ್ಟಾಟ್" ಎಂದು ಕರೆಸಿಕೊಳ್ಳುವ ಪ್ರದೇಶ?
ಪಶ್ಚಿಮ ಘಟ್ಟಗಳು
ಕರ್ನಾಟಕದ ನದಿ ವ್ಯವಸ್ಥೆ ಮೇಲೆ ಕೇಳಿರುವ ಪ್ರಶ್ನೋತ್ತರಗಳು
1) ಆಲಮಟ್ಟಿ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಕೃಷ್ಣಾ ನದಿ
2) ಕೂಡಗಿ ಶಾಖೋತ್ಪನ್ನ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
ವಿಜಯಪುರ
3) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ "ಕೃಷ್ಣರಾಜಸಾಗರ ಅಣೆಕಟ್ಟು" ಯಾವ ಜಿಲ್ಲೆಯಲ್ಲಿದೆ?
ಮಂಡ್ಯ
4) ಕರ್ನಾಟಕದ ಪ್ರಥಮ ಉಷ್ಣ ವಿದ್ಯುತ್ ಯೋಜನೆ ಆರಂಭಿಸಿದ ಜಿಲ್ಲೆ?
ರಾಯಚೂರು
5) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?
ನೇತ್ರಾವತಿ ನದಿ
6) ಪ್ರಸಿದ್ಧ ಗೋಕಾಕ್ ಜಲಪಾತ ಯಾವ ನದಿಯ ಮೇಲಿದೆ?
ಘಟಪ್ರಭಾ ನದಿ
7) ಬಸವಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
ಕೃಷ್ಣ ನದಿ
8) ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
ಶಿವಮೊಗ್ಗ
9) ಸ್ಟ್ಯಾನ್ಲಿ ಜಲಾಶಯ ಯಾವ ನದಿಗೆ ಸಂಬಂಧಿಸಿದೆ?
ಕಾವೇರಿ ನದಿ
10) ಜೋಗ್ ಫಾಲ್ಸ್ ಯಾವ ನದಿಗೆ ನಿರ್ಮಿಸಿದೆ?
ಶರಾವತಿ
11) ತುಂಗಾ ನದಿಯು ಯಾವ ಜಿಲ್ಲೆಯಲ್ಲಿ ಉಗಮಿಸುತ್ತದೆ?
ಚಿಕ್ಕಮಂಗಳೂರು
12) ಲಿಂಗನಮಕ್ಕಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಶರಾವತಿ
13) ಗೊರೂರು ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ?
ಹಾಸನ್
14) ಕಾರಂಜಿ ಡ್ಯಾಮ್ ಎಲ್ಲಿದೆ?
ಬೀದರ್
15) ಹಿಡಕಲ್ ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಘಟಪ್ರಭಾ
16) ಗೊರೂರು ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
ಹೇಮಾವತಿ
17) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ?
ವಿಜಯಪುರ
No comments:
Post a Comment