Friday 26 March 2021

iND Vs ENG 2nd ODI: Ben Stokes-Byer Stowe

  MahitiVedike Com       Friday 26 March 2021
Subject : iND Vs ENG 2nd ODI: Ben Stokes-Byer Stowe
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

IND Vs ENG 2nd ODI : ಬೆನ್ ಸ್ಟೋಕ್ಸ-ಬೈರ್ ಸ್ಟೋವ್ ಸಿಡಿಲಬ್ಬರ: ಭಾರತ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್


ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ನೀಡಿದ 337 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 43.3 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಗೆಲುವು ದಾಖಲಿಸಿತು. ಈ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯು 1-1 ರರಿಂದ ಸಮಬಲಗೊಂಡಿದೆ. 

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು.ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ತಂಡದ ಮೊತ್ತ 9 ರನ್​ ಆಗಿದ್ದ ವೇಳೆ ಶಿಖರ್ ಧವನ್ (4) ರೀಸ್ ಟಾಪ್ಲೆಗೆ ವಿಕೆಟ್ ಒಪ್ಪಿಸಿದರೆ, 25 ರನ್​ ಬಾರಿಸಿ ರೋಹಿತ್ ಶರ್ಮಾ ಸ್ಯಾಮ್ ಕರ್ರನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅದರಂತೆ ಎಚ್ಚರಿಕೆಯ ಆಟದೊಂದಿಗೆ ಮುನ್ನುಗ್ಗಿದ ಈ ಜೋಡಿ ರನ್​ ಗತಿಯನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಮೂರನೇ ವಿಕೆಟ್​ಗೆ 121 ರನ್​ಗಳ ಜೊತೆಯಾಟವಾಡಿದರು.

ಈ ನಡುವೆ ವಿರಾಟ್ ಕೊಹ್ಲಿ ಮನಮೋಹಕ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು. ಇದರ ಬೆನ್ನಲ್ಲೇ ರಾಹುಲ್ ಕೂಡ ಹಾಫ್ ಸೆಂಚುರಿ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಕೊಹ್ಲಿ ಆದಿಲ್ ರಶೀದ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಅಷ್ಟರಲ್ಲಾಗಲೇ ಕೊಹ್ಲಿ 79 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 66 ರನ್ ಬಾರಿಸಿ ತಂಡದ ಮೊತ್ತವನ್ನು 32 ಓವರ್​ನಲ್ಲಿ 158ಕ್ಕೆ ತಂದು ನಿಲ್ಲಿಸಿದರು.

ನಾಯಕನ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಎಡಗೈ ದಾಂಡಿಗ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್ ಕೆಎಲ್ ರಾಹುಲ್​ಗೆ ಉತ್ತಮ ಸಾಥ್ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ರನ್​ಗಳಿಕೆಯ ವೇಗವನ್ನು ಹೆಚ್ಚಿಸಿದರು. ಮತ್ತೊಂದೆಡೆ ಅರ್ಧಶತಕದ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಕೆಎಲ್ ರಾಹುಲ್, ಬಿರುಸಿನ ಆಟಕ್ಕೆ ಒತ್ತು ನೀಡಿದರು.

ಅಲ್ಲದೆ 108 ಎಸೆತಗಳಲ್ಲಿ ಐದನೇ ಏಕದಿನ ಶತಕ ಪೂರೈಸಿ ಕೆಎಲ್ ರಾಹುಲ್ ಬ್ಯಾಟ್ ಮೇಲೆಕ್ಕೆತ್ತಿದರು. ಶತಕ ಸಿಡಿಸಿ ಬೆನ್ನಲ್ಲೇ ಬಿಗ್ ಹಿಟ್​ಗೆ ಮುಂದಾದ ಕೆಎಲ್​ಆರ್​ ಟಾಮ್ ಕರ್ರನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. 114 ಎಸೆತಗಳನ್ನು ಎದುರಿಸಿ ಕೆಎಲ್ ರಾಹುಲ್ 2 ಸಿಕ್ಸರ್, 7 ಬೌಂಡರಿಗಳೊಂದಿಗೆ 108 ರನ್​ ಬಾರಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.

ಈ ಹಂತದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸ್ಯಾಮ್ ಕರ್ರನ್ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಖಾತೆ ತೆರೆದರು. ಅಲ್ಲದೆ ಪಂತ್ ಜೊತೆಗೂಡಿ 47ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಈ ವೇಳೆ 40 ಎಸೆತಗಳಲ್ಲಿ 7 ಸಿಡಿಲಬ್ಬರದ ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 77 ರನ್ ಬಾರಿಸಿದ ಪಂತ್ ಟಾಮ್ ಕರ್ರನ್​ಗೆ ವಿಕೆಟ್​ ಒಪ್ಪಿ ತಮ್ಮ ಬಿರುಸಿನ ಇನಿಂಗ್ಸ್​ನ್ನು ಅಂತ್ಯಗೊಳಿಸಿದರು.ಇದಾಗ್ಯೂ ಅಂತಿಮ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 35 ರನ್ ಸಿಡಿಸಿ ಕೊನೆಯ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್​ನಲ್ಲಿ ಕ್ರೀಸ್​ನಲ್ಲಿದ್ದ ಕೃನಾಲ್ ಪಾಂಡ್ಯ 12 ಬಾರಿಸುವ ಮೂಲಕ ತಂಡದ ಮೊತ್ತವನ್ನು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ಕ್ಕೆ ತಂದು ನಿಲ್ಲಿಸಿದರು.

ಈ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಜಾನಿ ಬೈರ್​ಸ್ಟೋವ್ ಹಾಗೂ ಜೇಸನ್ ರಾಯಲ್ ಬಿರುಸಿನ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಟೀಮ್ ಇಂಡಿಯಾ ಬೌಲರುಗಳನ್ನು ದಂಡಿಸಲಾರಂಭಿಸಿದ ಈ ಜೋಡಿ 15 ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿ ತಲುಪಿಸಿದರು. ಅಲ್ಲದೆ ಮೊದಲ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ ಅರ್ಧಶತಕ ಪೂರೈಸಿದ್ದ ಜೇಸನ್ ರಾಯ್ (55) ಅವರು ರೋಹಿತ್ ಶರ್ಮಾ ಮಾಡಿದ ಅದ್ಭುತ ಫೀಲ್ಡಿಂಗ್​​ಗೆ ರನೌಟ್​ ಆಗಿ ಪೆವಿಲಿಯನ್​ ಕಡೆ ಮುಖ ಮಾಡಿದರು.

2ನೇ ವಿಕೆಟ್​ಗೆ ಜೊತೆಯಾದ ಬೆನ್​ ಸ್ಟೋಕ್ಸ್, ಜಾನಿ ಬೈರ್​ಸ್ಟೋವ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಟೀಮ್ ಇಂಡಿಯಾ ಸ್ಪಿನ್ನರ್​ಗಳ ಬೆಂಡೆತ್ತಿದ ಈ ಜೋಡಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಪರಿಣಾಮ 96 ಎಸೆತಗಳಲ್ಲಿ ಜಾನಿ ಬೈರ್​ಸ್ಟೋವ್ ಶತಕವನ್ನು ಪೂರೈಸಿದರು. ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ ಸ್ಟೋಕ್ಸ್ ಕೃನಾಲ್ ಪಾಂಡ್ಯ ಅವರ ಒಂದೇ ಓವರ್​ನಲ್ಲಿ 28 ರನ್​ ಕಲೆಹಾಕಿ ಅಬ್ಬರಿಸಿದರು.

ಕೇವಲ 52 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 99 ರನ್​ ಬಾರಿಸಿದ್ದ ಬೆನ್​ ಸ್ಟೋಕ್ಸ್​ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಜೊತೆಗಾರನ ನಿರ್ಗಮನದ ಬೆನ್ನಲ್ಲೇ 112 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 11 ಬೌಂಡರಿಗಳೊಂದಿಗೆ 124 ರನ್ ಬಾರಿಸಿದ್ದ ಜಾನಿ ಬೈರ್​ಸ್ಟೋವ್ ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ಈ ವೇಳೆ ಕಣಕ್ಕಿಳಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್​ (0) ಅವರನ್ನು ಯಾರ್ಕರ್​ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾಗೆ ನಾಲ್ಕನೇ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಅದಾಗಲೇ ಇಂಗ್ಲೆಂಡ್ ತಂಡ ಗೆಲುವಿನ ಸಮೀಪಕ್ಕೆ ಬಂದು ನಿಂತಿತ್ತು. 37ನೇ ಓವರ್​ನಲ್ಲಿ ತಂಡದ ಮೊತ್ತ 287 ಆಗಿದ್ದ ವೇಳೆ ಜೊತೆಯಾದ ಡೇವಿಡ್ ಮಲಾನ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಎಚ್ಚರಿಕೆ ಆಟಕ್ಕೆ ಒತ್ತು ನೀಡಿದರು.

ಅದರಂತೆ 5ನೇ ವಿಕೆಟ್​ಗೆ 50 ರನ್​ಗಳ ಜೊತೆಯಾಟವಾಡಿದ ಮಲಾನ್ (16) ಹಾಗೂ ಲಿವಿಂಗ್​ಸ್ಟೋನ್ (27) ಜೋಡಿ 43.3 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ ತಂಡವನ್ನು 337 ರನ್​ಗಳ ಗುರಿಮುಟ್ಟಿಸಿದರು. ಈ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಇನ್ನು ಟೀಮ್ ಇಂಡಿಯಾ ಪರ 10 ಓವರ್ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 58 ರನ್​ ನೀಡಿ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಹಾಗೆಯೇ 6 ಓವರ್​ನಲ್ಲಿ 72 ರನ್ ನೀಡಿದ ಕೃನಾಲ್ ಪಾಂಡ್ಯ ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾದರು.
 
logoblog

Thanks for reading iND Vs ENG 2nd ODI: Ben Stokes-Byer Stowe

Previous
« Prev Post

No comments:

Post a Comment