ಪ್ರಚಲಿತ ಘಟನೆಗಳು
ಮಾಜಿ ಗಗನಯಾತ್ರಿ ಬಿಲ್ ನೆಲ್ಸನ್‌ರನ್ನು ನಾಸಾ ಮುಖ್ಯಸ್ಥರನ್ನಾಗಿ ನೇಮಿಸಿದ ಜೋ ಬಿಡೆನ್!
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನೂತನ ಮುಖ್ಯಸ್ಥರನ್ನಾಗಿ ಮಾಜಿ ಗಗನಯಾತ್ರಿ ಬಿಲ್ ನೆಲ್ಸನ್‌ರನ್ನು ನೇಮಿಸಿ, ಅಧ್ಯಕ್ಷ ಜೋ ಬಿಡೆನ್ ಆದೇಶ ಹೊರಡಿಸಿದ್ದಾರೆ.
ಫ್ಲೋರಿಡಾದ ಡೆಮಾಕ್ರೆಟಿಕ್ ಪಕ್ಷದಿಂದ ಮೂರು ಬಾರಿ ಸೆನೆಟರ್ ಆಗಿ ಆಯ್ಕೆಯಾಗಿರುವ ಬಿಲ್ ನೆಲ್ಸನ್, 1986ರಲ್ಲಿ ಬಾಹ್ಯಾಕಾಶ ಪ್ರಯಾಣ ಮಾಡಿದ ಗಗನಯಾತ್ರಿಯೂ ಹೌದು.
1986ರಲ್ಲಿ ನಾಸಾದ ಕೋಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ್ದ ಬಿಲ್ ನೆಲ್ಸನ್, ಪ್ರಸ್ತುತವಾಗಿ ನಾಸಾದ ಸಲಹಾ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಾಸಾ ತನ್ನ ಮಹತ್ವಕಾಂಕ್ಷಿ ಮಾನವಸಹಿತ ಚಂದ್ರಯಾನ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಲ್ ನೆಲ್ಸನ್ ನಾಸಾದ ಮುಖ್ಯಸ್ಥರಾಗುತ್ತಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಒಪ್ಪಿಗೆ ಪಡೆದಿದ್ದ ಚಂದ್ರನತ್ತ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಯನ್ನು ಮುಂದುವರೆಸಲು ಹಾಲಿ ಅಧ್ಯಕ್ಷ ಜೋ ಬಿಡೆನ್ ಕೂಡ ಒಪ್ಪಿಗೆ ನೀಡಿದ್ದಾರೆ.
ಸದ್ಯ ಬಿಲ್ ನೆಲ್ಸನ್ ಅವರನ್ನು ನಾಸಾ ಮುಖ್ಯಸ್ಥರಾಗಿ ನೇಮಿಸಿರುವ ಜೋ ಬಿಡೆನ್ ಆದೇಶಕ್ಕೆ ಯುಎಸ್ ಸೆನೆಟ್ ಅಂಕಿತ ನೀಡಬೇಕಿದ
No comments:
Post a Comment