Thursday 25 March 2021

Brief information on the state of Tamil Nadu,

  MahitiVedike Com       Thursday 25 March 2021


ತಮಿಳುನಾಡು ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ,

 
ರಾಜ್ಯವಾಗಿ ರಚನೆಯಾದ ವರ್ಷ= 1956

 ರಾಜ್ಯಧಾನಿ= ಚೆನ್ನೈ

 ವಿಧಾನಸಭೆ= 234

 ತಮಿಳುನಾಡು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ= ಎಡಪ್ಪಾಡಿ.ಕೆ. ಪಳನಿಸ್ವಾಮಿ

 ತಮಿಳುನಾಡು ರಾಜ್ಯದ ಪ್ರಸ್ತುತ ರಾಜ್ಯಪಾಲರು= ಬನ್ವರಿಲಾಲ್ ಪುರೋಹಿತ್

 ತಮಿಳುನಾಡು ರಾಜ್ಯದ ಹಬ್ಬ= ಪೊಂಗಲ್

ಭಾರತದ ಕ್ಷಿಪಣಿ ಮನುಷ್ಯ ಎಂದು ಹೆಸರುವಾಸಿಯಾಗಿರುವ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ತಮಿಳುನಾಡು ರಾಜ್ಯದವರು,

 ಭಾರತದ "ಹಸಿರು ಕ್ರಾಂತಿಯ ಪಿತಾಮಹ"  ಡಾಕ್ಟರ್ ಎಂ.ಎಸ್ ಸ್ವಾಮಿನಾಥ ತಮಿಳುನಾಡು ರಾಜ್ಯದವರು,  

 ಕರ್ನಾಟಕ ಸಂಗೀತದ ತ್ರಿಮೂರ್ತಿಗಳು= ತ್ಯಾಗರಾಜು, ಮುತ್ತುಸ್ವಾಮಿ ದೀಕ್ಷಿತ್, ಶಾಮಾಶಾಸ್ತ್ರಿ, ಎಲ್ಲರೂ ತಮಿಳುನಾಡು ರಾಜ್ಯದವರು

 ತಮಿಳುನಾಡು ರಾಜ್ಯದಲ್ಲಿ ಕಲ್ಪಕಂ ಅಣು ವಿದ್ಯುತ್ ಸ್ಥಾವರ ಇದೆ, 

 ತಮಿಳುನಾಡು ರಾಜಧಾನಿ ಕೊಂಡoಕುಳಂ ಅನು ವಿದ್ಯುತ್ ಸ್ಥಾವರ ಇದ್ದು ಇದಕ್ಕೆ ರಷ್ಯಾ ದೇಶವು ಯುರೋನಿಯಂ ಸರಬರಾಜು ಮಾಡುತ್ತದೆ

 ತಮಿಳುನಾಡು ರಾಜ್ಯದಲ್ಲಿರುವ ನೈವೆಲಿಯಲಿ, ಅತಿ ಹೆಚ್ಚು ಕಲ್ಲಿದ್ದಲಿನ ವಿಧವಾದ ಲಿಗ್ನೈಟ್ ದೊರೆಯುತ್ತದೆ, 

 ತಮಿಳುನಾಡು ರಾಜಧಾನಿ ವಾಂಡಿವಾಷ್ ಎಂಬ ಯುದ್ಧಭೂಮಿ ಇದೆ. ವಾಂಡಿವಾಸ್ ಕದನವು 1760 ಜನವರಿ 22ರಂದು ಬ್ರಿಟಿಷರು ಮತ್ತು ಫ್ರೆಂಚರ ನಡುವೆ ನಡೆಯಿತು

 ತಮಿಳುನಾಡು ರಾಜ್ಯದ ಕೊಡೆಕೆನಾಲ್ ಎಂಬ ಸ್ಥಳದಲ್ಲಿ ಮದರ್ ತೆರಿಸ ಮಹಿಳಾ ವಿಶ್ವವಿದ್ಯಾಲಯ ಇದೆ

 ತಮಿಳುನಾಡು ರಾಜ್ಯದಲ್ಲಿರುವ ನೀಲಗಿರಿ ಬೆಟ್ಟಗಳಲ್ಲಿ ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಂಧಿಸುತ್ತವೆ

 ತಮಿಳುನಾಡು ರಾಜ್ಯದಲ್ಲಿರುವ ನೀಲಗಿರಿ ಬೆಟ್ಟಗಳಲ್ಲಿ ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಂಧಿಸುವ ಏಕೈಕ ರಾಜ್ಯವಾಗಿದೆ, 

 ತಮಿಳುನಾಡು ರಾಜ್ಯದಲ್ಲಿ kallanal Dam/Grand Dam  ಅನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ, 

 ತಮಿಳುನಾಡು ರಾಜ್ಯದಲ್ಲಿ ಕಾವೇರಿನದಿಗೆ ಮೆಟ್ಟೂರು ಅನೇಕಟ್ಟು ನಿರ್ಮಿಸಲಾಗಿದೆ

 ತಮಿಳುನಾಡು ರಾಜ್ಯದಲ್ಲಿ ಕಾವೇರಿ ನದಿಗೆ ಕಾವೇರಿಪಟ್ಟಣಂ ಡ್ಯಾಂ ನಿರ್ಮಿಸಲಾಗಿದೆ

 ತಮಿಳುನಾಡು ರಾಜ್ಯದಲ್ಲಿ ಕಾವೇರಿ ನದಿಗೆ ಸ್ಟ್ಯಾನ್ಲಿ ಜಲಾಶಯ ನೇಮಿಸಲಾಗಿದೆ

 ಭಾರತದ ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿ ತಮಿಳನಾಡು ರಾಜ್ಯದಲ್ಲಿದೆ, 

 ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ರಾಕ್  ಮೆಮೋರಿಯಲ್ ಪ್ರತಿಮೆಯಿದೆ

 ತಮಿಳುನಾಡು ರಾಜ್ಯದ ಪ್ರಮುಖ ಬಂದರುಗಳು
1) ಚೆನ್ನೈ ಬಂದರು
2) ಟುಟಿ ಕೊರಿಯನ್ ಬಂದರು= ಇಲ್ಲಿ ಮುತ್ತಿನ ಮೀನುಗಾರಿಕೆ ನಡೆಯುತ್ತದೆ ಮತ್ತು ಈ ಬಂದರಿನಲ್ಲಿ ರಾಸಾಯನಿಕ ಗೊಬ್ಬರ ಅತಿ ಹೆಚ್ಚು ರಫ್ತಾಗುತ್ತದೆ,

3) ಎನ್ನೋರು ಬಂದರು=
ಕೆ ಕಾಮರಾಜ್ ಬಂದರು ಎಂದು ನಾಮಕರಣ ಮಾಡಲಾಗಿದೆ,

 ತಮಿಳುನಾಡು ರಾಜ್ಯದಲ್ಲಿ ಮೀನಾಬಾಕಂ ಅಂತರಾಷ್ಟ್ರೀಯ ವಿಮಾನನಿಲ್ದಾಣವಿದೆ, 

 ತಮಿಳುನಾಡು ರಾಜ್ಯದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನವನ ಇದೆ, 

 ತಮಿಳುನಾಡು ರಾಜ್ಯದ ಕೊಡೈಕೆನಲ್ ಎಂಬ ಸ್ಥಳದಲ್ಲಿ ಭೂಕಂಪನ ಮಾಪನ ಕೇಂದ್ರ ಇದೆ, 

 ಕರ್ನಾಟಕದ  ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು 1956 ಕ್ಕಿಂತ ಮೊದಲು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದವು

 ತಮಿಳುನಾಡು ರಾಜ್ಯದಲ್ಲಿ ಶಿವಕಾಶಿ ಪಟಾಕಿ ತಯಾರಿಕೆ ಘಟಕ ಇದೆ,

 ತಮಿಳುನಾಡು ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆ ಅತ್ಯಂತ ಪ್ರಸಿದ್ಧವಾಗಿದೆ,

 ತಮಿಳುನಾಡು ರಾಜ್ಯದಲ್ಲಿ ಕುಂದಾ ಜಲವಿದ್ಯುತ್ ಉತ್ಪಾದನೆ ಕೇಂದ್ರವಿದೆ,  

 ತಮಿಳುನಾಡು ರಾಜ್ಯದಲ್ಲಿ ಪಳನಿ ಬೆಟ್ಟಗಳು ಮತ್ತು ನೀಲಗಿರಿ ಬೆಟ್ಟಗಳು ಕಂಡುಬರುತ್ತವೆ, 

 ತಮಿಳುನಾಡು ರಾಜ್ಯದಲ್ಲಿ ನೀಲಗಿರಿ ಬೆಟ್ಟಗಳಲ್ಲಿ ತೋಡ ಬುಡಕಟ್ಟು ಜನಾಂಗ ಕಂಡುಬರುತವೇ

 ಭಾರತದಲ್ಲಿ ಅತಿ ಹೆಚ್ಚು ಪವನ್ ವಿದ್ಯುತ್ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯಲ್ಲಿ ಉತ್ಪಾದನೆಯಾಗುತ್ತದೆ,

 ತಮಿಳುನಾಡು ರಾಜ್ಯದ ತಂಜಾವೂರಿನಲ್ಲಿ ಒಂದನೆಯ ರಾಜರಾಜ ಚೋಳ ಕಟ್ಟಿಸಿದ ಬೃಹದೇಶ್ವರ ದೇವಾಲಯ, ಈ ದೇವಾಲಯ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ,

 ತಮಿಳುನಾಡು ರಾಜ್ಯದ ಮಹಾಬಲಿಪುರಂ ಎಂಬ ನಗರವನ್ನು ಪಲ್ಲವರ ಅರಸ ಒಂದನೆಯ ನರಸಿಂಹವರ್ಮ ನಿರ್ಮಿಸಿದ

 ತಮಿಳುನಾಡು ರಾಜ್ಯದಲ್ಲಿ ಚೋಳರ ಗ್ರಾಮಾಡಳಿತ ಬಗ್ಗೆ ತಿಳಿಸುವ ಉತ್ತರ ಮೇರೂರು ಶಾಸನ ಇದೆ, ಈ ಉತ್ತರಮೇರೂರ್ ಶಾಸನವು ಒಂದನೇ ಪರಂತನಿಗೆ  ಸಂಬಂಧಿಸಿದೆ.
logoblog

Thanks for reading Brief information on the state of Tamil Nadu,

Previous
« Prev Post

No comments:

Post a Comment