Saturday, 27 March 2021

BBMP Budget 2021: No tax burden, here are the highlights

  MahitiVedike Com       Saturday, 27 March 2021
Subject : BBMP Budget 2021: No tax burden, here are the highlights
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ಬಿಬಿಎಂಪಿ ಬಜೆಟ್ 2021: ತೆರಿಗೆ ಭಾರ ಇಲ್ಲ, ಇಲ್ಲಿವೆ ಮುಖ್ಯಾಂಶಗಳು

ಬೆಂಗಳೂರು: ಬಿಬಿಎಂಪಿಯು 2021-22ನೇ ಸಾಲಿಗೆ ₹9287.81 ಕೋಟಿ ವೆಚ್ಚದ ಬಜೆಟ್ ಮಂಡಿಸಿದೆ.

ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಶನಿವಾರ ಬಜೆಟ್ ಮಂಡಿಸಿದರು.

ಒಟ್ಟು ₹9287.81 ಕೋಟಿ ಆದಾಯ ನಿರೀಕ್ಷಿಸಿ ಹಾಗೂ ₹9286.86 ಕೋಟಿ ವೆಚ್ಚ ನಿರೀಕ್ಷಿಸಿ ಆಯವ್ಯಯ ಮಂಡಿಸಿದರು.

ಬಜೆಟ್‌ ಮುಖ್ಯಾಂಶಗಳು...

 ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ.

ವಲಯಗಳು, ವಿಧಾನಸಭಾ ಕ್ಷೇತ್ರ ಗಾಗೂ ವಾರ್ಡ್‌ಗಳ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ₹2000 ಕೋಟಿ ಹಂಚಿಕೆ ಮಾಡಲಾಗಿದೆ‌.

ಆಸ್ತಿ ತೆರಿಗೆ ಸಂಗ್ರಹ ಉತ್ತೇಜನಕ್ಕೆ ಆಯಾ ವಾರ್ಡ್‌ನಲ್ಲಿ ಸಂಗ್ರಹವಾಗುವ ಶೇ 1ರಷ್ಟು ಅನುದಾನ ಅದೇ ವಾರ್ಡ್‌ಗೆ ಮೀಸಲು

 ಕಸದ ರಾಶಿ ಕಂಡುಬಾರದ ವಾರ್ಡ್‌ಗೆ ₹50 ಲಕ್ಷ ಪ್ರೋತ್ಸಾಹಧನ

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತರ ಅಭಿವೃದ್ಧಿಗೆ ₹1000 ಕೋಟಿ ಮೀಸಲು

 ಕೋವಿಡ್ ನಿಯಂತ್ರಣ ವೆಚ್ಚ ಭರಿಸಲು ಸರ್ಕಾರ ₹300 ಕೋಟಿ ನೀಡಿದೆ.

ಪಾಲಿಕೆ ₹ 90 ಭರಿಸಿದೆ.

ಇ- ಆಸ್ತಿ ತಂತ್ರಾಂಶವನ್ನು ಎಲ್ಲ ವಾರ್ಡ್ಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

 ಬೀದಿನಾಯಿ ಹಾವಳಿ ತಡೆಗೆ ₹5 ಕೋಟಿ ಮೀಸಲು

ಆಸ್ತಿಗೆ ಸಂಬಂಧಿಸಿ ಬಿ- ಖಾತಾ ನಿರ್ವಹಣೆ ರದ್ದು ಪಡಿಸಿ ಎ-ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ

ಒಂಟಿ ಮನೆ ಯೋಜನೆ ಹೊಸ ಫಲಾನುಭವಿ ಆಯ್ಕೆ ಇಲ್ಲ

 ವೈದ್ಯಕೀಯ ವೆಚ್ಚ ಮರುಪಾವತಿಗೆ ₹25 ಕೋಟಿ

ಪಾದಚಾರಿ ಮಾರ್ಗ ದುರಸ್ತಿಗೆ ಪ್ರತಿ ವಾರ್ಡ್‌ಗೆ ₹20 ಲಕ್ಷ

ಉದ್ಯಾನ ನಿರ್ವಹಣೆಗೆ ಹಾಗೂ ಪರಿಸರ ನಿರ್ವಹಣೆಗೆ ₹214 ಕೋಟಿ

 ಅರಣ್ಯ ಇಲಾಖೆಗೆ ₹39 ಕೋಟಿ


 ಹಸಿರು ಸೂಚ್ಯಂಕ ಹೆಚ್ಚಳ 10 ಲಕ್ಷ ಸಸಿ ನೆಡುವ ಗುರಿ

 ರಾಜಕಾಲುವೆ ಹೂಳೆತ್ತಿ ನಿರ್ವಹಣೆಗೆ ₹60 ಕೋಟಿ

 ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ ₹31 ಕೋಟಿ

 ಕೆರೆ ದತ್ತು ಯೋಜನೆ ಜಾರಿ

 330 ಆಸನವಿರುವಂತೆ ಕೌನ್ಸಿಲ್ ಸಭಾಂಗಣ ಮೇಲ್ದರ್ಜೆಗೆ ಏರಿಸಲು ₹10 ಕೋಟಿ

 ಈ ವರ್ಷ 10 ಸಾವಿರ ಬೀದಿ ದೀಪ ಅಳವಡಿಕೆ

 ಆರ್ಥಿಕ ಸಂಕಷ್ಟ ಇರುವುದರಿಂದ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೆರೆ ವಿಭಾಗ ಹೊರತಾಗಿ ಬೇರಾವುದೇ ವಿಭಾಗಕ್ಕೆ ಹೊಸ ಕಾರ್ಯಕ್ರಮ ಇಲ್ಲ.
logoblog

Thanks for reading BBMP Budget 2021: No tax burden, here are the highlights

Previous
« Prev Post

No comments:

Post a Comment