Monday, 15 March 2021

A brief account of the Vijayanagara Empire

  MahitiVedike Com       Monday, 15 March 2021


ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= 1336 (KSRP-2020)

 ವಿಜಯನಗರ ಸಾಮ್ರಾಜ್ಯ ರಾಜಧಾನಿ= ಹಂಪಿ

 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= ಆನೆಗೊಂದಿ ( ನಂತರ ಹಂಪಿ)

 ವಿಜಯನಗರ ಸಾಮ್ರಾಜ್ಯದ ಲಾಂಛನ= ಎಡಮುಖ ವರಹ

ಹಂಪಿಯು ತುಂಗಭದ್ರಾನದಿ ದಡದಮೇಲಿದೆ (PC-2020) 

 ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು  ಸೋದರ= ಹರಿಹರ ಬುಕ್ಕ. ಮಾರಪ್ಪ. ಮುದ್ದಪ್ಪ. ಮತ್ತು ಕಂಪನ

 ಈ ಐವರ ಸಹೋದರರ ತಂದೆ= ಸಂಗಮ

 ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= ವಿದ್ಯಾರಣ್ಯ ಗುರುಗಳು
(DAR-2020)

 ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= ರಾಜ ಕಾಲನಿರ್ಣಯ

 ಹಂಪಿಯ ಬಳಿ ಹರಿಯುವ  ನದಿ= 
ತುಂಗಭದ್ರ ನದಿ

 ವಿಜಯನಗರದ ಕುಲದೇವರು= ವಿರುಪಾಕ್ಷ

 ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= ಕನ್ನಡ

 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= ಸಂಗಮ, ಸಾಳುವ, ತುಳುವ, ಮತ್ತು ಅರವಿಡು

 ಸಂಗಮ ವಂಶ ಆಳ್ವಿಕೆಯ ಅವಧಿ= 
1336-1485

 ಸಂಗಮ ವಂಶದ ಮೊದಲ ದೊರೆ= ಹರಿಹರ

 ಹರಿಹರಣ ರಾಜಧಾನಿ= ಆನೆಗೊಂದಿ

 ಒಂದನೇ ಬುಕ್ಕರಾಯನ ಇನ್ನೊಂದು  ಹೆಸರು= ತ್ರಯಂಬಕ ರಾಯ

 "ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= ಒಂದನೇ ಬುಕ್ಕರಾಯ

 ಗಂಗಾದೇವಿ ಒಂದನೇ ಬುಕ್ಕರಾಯನನ್ನು "ಕರ್ನಾಟಕ ಕುಲ ಕೀರ್ತಿ" ಎಂದು ವರ್ಣಿಸಿದ್ದಾಳೆ.

 ಬುಕ್ಕರಾಯನ ಸೈನಿಕ ಸಾಧನೆಗಳನ್ನು ತಿಳಿಸುವ ಗ್ರಂಥ= ಮಧುರಾವಿಜಯಂ
 (ಈ ಗ್ರಂಥವನ್ನು ಬರೆದವರು ಬುಕ್ಕರಾಯನ ಪತ್ನಿ ಗಂಗಾಂಬಿಕೆ)

 ವೇದಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ವಿಜಯನಗರ ಅರಸ= ಎರಡನೇ ಹರಿಹರ

 ಸಂಗಮ ವಂಶದ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧ ಅರಸ= ಎರಡನೇ ದೇವರಾಯ

 ಎರಡನೇ ದೇವರಾಯ ಅಧಿಕಾರಕ್ಕೆ ಬಂದ ವರ್ಷ= 1424

 ಎರಡನೇ ದೇವರಾಯನಿಗೆ ಇದ್ದ ಇನ್ನೊಂದು ಹೆಸರು= ಪ್ರೌಢದೇವರಾಯ

 ಎರಡನೇ ದೇವರಾಯನಿಗೆ ಇದ್ದರು ಬಿರುದು= ಗಜಬೇಂಟೆಕಾರ

 ಮುಸ್ಲಿಮರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ವಿಜಯನಗರದ ಅರಸ= ಎರಡನೇ ದೇವರಾಯ

 ಕೇರಳ ಶ್ರೀಲಂಕಾ ಅರಸರಿಂದ  ಕಪ್ಪು ಕಾಣಿಕೆ ವಸೂಲು ಮಾಡಿದ ಪ್ರೌಢದೇವರಾಯನ ಸೇನಾಧಿಪತಿ= ಲಕ್ಷ್ಮಣ ದಂಡೇಶ

 ಪ್ರೌಢ ದೇವರಾಯನ ಆಸ್ಥಾನಕ್ಕೆ ಭೇಟಿನೀಡಿದ ಪರ್ಶಿಯಾದ ರಾಯಭಾರಿ= ಅಬ್ದುಲ್ ರಜಾಕ್

 ತನ್ನ ರಾಜಧಾನಿಯಲ್ಲಿ ಮಸೀದಿ ನಿರ್ಮಿಸಿದ ವಿಜಯನಗರ ಅರಸ= ಎರಡನೇ ದೇವರಾಯ

 ಎರಡನೇ ದೇವರಾಯನ ಆಸ್ಥಾನದಲ್ಲಿದ್ದ ಪ್ರಮುಖ ಕವಿಗಳು= ಶ್ರೀನಾಥ, ಡಿಂಡಿಮ. ಚಾಮರಸ, ಕುಮಾರವ್ಯಾಸ, ಲಕ್ಷ್ಮಣ ದಂಡೇಶ

 ಎರಡನೇ ದೇವರಾಯನ ಕಾಲಕ್ಕೆ ಪುನರ್ಜೀವನ ಕಂಡ ಧರ್ಮ= ವೀರಶೈವ ಧರ್ಮ

 ಎರಡನೇ ದೇವರಾಯ ಮರಣ ಹೊಂದಿದ ವರ್ಷ= 1446

 "ದಕ್ಷಿಣ ಸಮುದ್ರಾಪತಿ" ಎಂಬ ಬಿರುದು ಹೊಂದಿದ್ದ ಎರಡನೇ ದೇವರಾಯನ ಸೇನಾಧಿಪತಿ= ಲಕ್ಷ್ಮಣ ದಂಡೇಶ

 "ಮಹಾನಾಟಕ ಸುಧಾನಿಧಿ" ಎಂಬ ಕೃತಿಯನ್ನು ರಚಿಸಿದ ಅರಸು= ಪ್ರೌಢದೇವರಾಯ

 ಸಂಗಮ ವಂಶದ ಆಳ್ವಿಕೆಯನ್ನು ಕೊನೆಗೊಳಿಸಿದ ವಿಜಯನಗರ ರಾಜವಂಶ= ಸಾಳ್ವ ವಂಶ

 ಸಾಳುವ ವಂಶ ಸ್ಥಾಪನೆ= 1485-1503

 ಸಾಳುವ ಎಂದರೆ=
ಗರುಡ ಎಂಬರ್ಥವಿದೆ

 ಸಾಳುವ ವಂಶದ ಪ್ರಮುಖ ಅರಸರು= ನರಸಿಂಹ, ತಿಮ್ಮ. ಎರಡನೇ ನರಸಿಂಹ

 ತುಳುವ ಮನೆತನ= 1503-1565

 ತುಳುವ ಮನೆತನ ಸ್ಥಾಪಿಸಿದವರು= ವೀರ ನರಸಿಂಹ

 ತುಳುವ ವಂಶದ ಪ್ರಸಿದ್ಧ ದೊರೆ= ಶ್ರೀಕೃಷ್ಣದೇವರಾಯ

 ಶ್ರೀ ಕೃಷ್ಣದೇವರಾಯ ಅಧಿಕಾರಕ್ಕೆ ಬಂದ ವರ್ಷ= 1509

 ಶ್ರೀಕೃಷ್ಣದೇವರಾಯನೊಂದಿಗೆ  ಹೋರಾಡಿ ಪ್ರಾಣ ಕಳೆದುಕೊಂಡ ಬಿಜಾಪುರ ಸುಲ್ತಾನ= ಯೂಸುಫ್ ಆದಿಲ್ ಶಾ (1510ರಲ್ಲಿ )

 ಶ್ರೀಕೃಷ್ಣದೇವರಾಯ ನಿಂದ ಸೋತ ಉಮ್ಮತ್ತೂರಿನ ಪಾಳೆಗಾರ= ಗಂಗರಾಜ
( ಇವನಿಂದ ವಶಪಡಿಸಿಕೊಂಡ ಕೋಟೆ ಶಿವನಸಮುದ್ರದ  ಕೋಟೆ)

 ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಗಳನ್ನು ಗೆದ್ದ ಶ್ರೀಕೃಷ್ಣದೇವರಾಯ ಅವುಗಳನ್ನು ಕೆಂಪೇಗೌಡನಿಗೆ ವಹಿಸಿದನು

 ಗೋಲ್ಕೊಂಡದ ಕುತುಬ್ ಶಾನನ್ನು ಸೋಲಿಸಿ ಕಪ್ಪು ವಸೂಲು ಮಾಡಿದ ಕೃಷ್ಣದೇವರಾಯನ ಸೇನಾನಿ= ತಿಮ್ಮರಸ

 ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ಸಹಾಯ ನೀಡಿದ ವಿಜಯನಗರ ಅರಸ= ಶ್ರೀಕೃಷ್ಣದೇವರಾಯ

 ಕಲ್ಲಿಕೋಟೆ ಗೆಲ್ಲಲು ಪೋರ್ಚುಗೀಸರಿಗೆ ನೆರವಾದ ಅರಸ = ಶ್ರೀಕೃಷ್ಣದೇವರಾಯ

 ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರ ಅರಸ  ಶ್ರೀಕೃಷ್ಣದೇವರಾಯ

 ರಾಯಚೂರು ಕದನದಲ್ಲಿ(1520) ಕೃಷ್ಣದೇವರಾಯನಿಂದ ಸೋತ ಸುಲ್ತಾನ=
 ಬಿಜಾಪುರದ ಇಸ್ಮೈಲ್ ಷಾ

 ಶ್ರೀ ಕೃಷ್ಣದೇವರಾಯ ಉದಯಗಿರಿ ಕೋಟೆ ಗೆದ್ದ  ವರ್ಷ= 1513

 ಕಳಿಂಗದ ರಾಜಧಾನಿ ಕಟಕ್ ನ್ನು ಗೆದ್ದ ವರ್ಷ= 1518

 ಕೃಷ್ಣದೇವರಾಯನಿಂದ ಸೋತ ಒರಿಸ್ಸಾದ ಗಜಪತಿ= ಪ್ರತಾಪರುದ್ರ
( ಕೃಷ್ಣದೇವರಾಯನು ಪ್ರತಾಪ ರುದ್ರನ ಮಗಳನ್ನು ಮದುವೆಯಾದನು)

 ದಕ್ಷಿಣದ ಚೋಳ ಪಾಂಡ್ಯರನ್ನು ಸೋಲಿಸಿದ ಕೃಷ್ಣದೇವರಾಯನ ಸೇನಾಧಿಪತಿ= ವಿಜಯಪ್ಪ

 ಕೃಷ್ಣದೇವರಾಯನಿಂದ ಸೋತ ಬಹುಮನಿ ರಾಜ್ಯದ ಪ್ರಧಾನಿ=
ಕಾಸಿಂ ಬರಿದ

 ಅಷ್ಟದಿಗ್ಗಜರು ಎಂಬ ಎಂಟು ಜನರಿಗೆ ಆಶ್ರಯ ನೀಡಿದ ದೊರೆ= ಶ್ರೀಕೃಷ್ಣದೇವರಾಯ

 ಭಕ್ತಿ ಸಂತರಾದ ವಲ್ಲಭಾಚಾರ್ಯ ಮತ್ತು ಚೈತನ್ಯ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿದರು.

 ಅಮುಕ್ತಮೌಲ್ಯ ಎಂಬ "ತೆಲುಗು" ಕೃತಿಯನ್ನು ಬರೆದವರು= ಶ್ರೀಕೃಷ್ಣದೇವರಾಯ

 "ಜಾಂಬವತಿ ಕಲ್ಯಾಣ" ಎಂಬ ಸಂಸ್ಕೃತ ನಾಟಕವನ್ನು ಬರೆದವರು= ಶ್ರೀಕೃಷ್ಣದೇವರಾಯ

 "ಕನ್ನಡ ರಾಜ್ಯ ರಮಾರಮಣಿ"  ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ= ಶ್ರೀಕೃಷ್ಣದೇವರಾಯ

 ಕೃಷ್ಣದೇವರಾಯರ ಗುರುಗಳಾಗಿದ್ದವರು= ವ್ಯಾಸರಾಯರು

 "ಆಂಧ್ರ ಕವಿ ಪಿತಾಮಹ" ಎಂಬ ಬಿರುದು ಹೊಂದಿದ ತೆಲುಗು ಕವಿ= ಅಲ್ಲಸಾನಿ ಪೆದ್ದಣ್ಣ
logoblog

Thanks for reading A brief account of the Vijayanagara Empire

Previous
« Prev Post

No comments:

Post a Comment