Sunday, 14 February 2021

* Questionnaires heard in various competitive exams on Delhi Sultanate,

  MahitiVedike Com       Sunday, 14 February 2021
 *ದೆಹಲಿ ಸುಲ್ತಾನರ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು,*
                👇👇👇👇👇👇
1) ದೆಹಲಿ ಸುಲ್ತಾನರಲ್ಲಿ ಅತ್ಯಂತ ದೀರ್ಘಾವಧಿಯಲ್ಲಿ ಆಡಳಿತ ಮಾಡಿದ ಮನೆತನ ಯಾವುದು? 
 *ತುಘಲಕ್ ಸಂತತಿ*(94ವರ್ಷ)

2) ದೆಹಲಿ  ಸುಲ್ತಾನರ ಅತ್ಯಂತ ಕಡಿಮೆ ಅವಧಿಗೆ ಆಡಳಿತ ಮಾಡಿದ ಮನೆತನ ಯಾವುದು?
 *ಖಿಲ್ಜಿ ಸಂತತಿ*(30ವರ್ಷ )

3) "ಪಟನ್" ಪಂಗಡಕ್ಕೆ ಸೇರಿರುವ ಮನೆತನ ಯಾವುದು?
 *ಲೂದಿ ಸಂತತಿ*

4) ಗುಲಾಮಿ ಸಂತತಿಯ ಸ್ಥಾಪಕ ಯಾರು? 
 *ಕುತುಬುದ್ದಿನ್ ಐಬಕ್* 

5) "ಲಾಕ್ ಬಕ್ಷ" ಬಿರುದು ಹೊಂದಿರುವ ದೆಹಲಿ ಸುಲ್ತಾನ ಯಾರು? 
 *ಕುತುಬುದ್ದಿನ ಐಬಕ್*

6) "ಕುತುಬಮಿನಾರಕ್ಕೆ" ಅಡಿಪಾಯ ಹಾಕಿದ ದೆಹಲಿ ಸುಲ್ತಾನ ಯಾರು? 
  *ಕುತುಬುದ್ದಿನ್ ಐಬಕ್*

7) ಭಾರತ ದೇಶದ ಪ್ರಥಮ ಮಸೀದಿ ಯಾದ *ಕುವತ್ ಉಲ್ ಇಸ್ಲಾಂ* ಎಂಬ  ಮಸೂದೆಯನ್ನು ಕಟ್ಟಿಸಿದವರು ಯಾರು? 
 *ಕುತುಬುದ್ದಿನ ಐಬಕ್*

 8)ಕುತುಬ್ ಮಿನಾರ್ ಎಲ್ಲಿದೆ? 
  *ದೆಹಲಿ*

9) ಕುತುಬ್ ಮಿನಾರ್ ಅನ್ನು ಯಾವ ಸಂತನ ಸ್ಮರಣಾರ್ಥವಾಗಿ ಕುತುಬುದ್ದಿನ ಐಬಕನು ಅಡಿಪಾಯ ಹಾಕಿದರು..
  *ಕ್ವಾಜಾ ಕುತ್ಬುದ್ದೀನ್ ಭಕ್ತಿಯಾರ್ ಕಾಕಿಯ*

10) ಕುತುಬುದ್ದಿನ್ ಐಬಕ್ ನು ಯಾವ ಆಟ ಆಡುವ ಸಂದರ್ಭದಲ್ಲಿ ಮರಣಹೊಂದಿದ? 
  *ಕ್ರಿ,ಶ1210 ರಲ್ಲಿ ಪೋಲೋ/ ಚೌಗಾನ್ ಆಟ ಆಡುವ ಸಂದರ್ಭದಲ್ಲಿ ಕುದುರೆ ಮೇಲಿಂದ ಬಿದ್ದು ಮರಣ ಹೊಂದಿದ,*, 

 11)ಕುತುಬುದ್ದಿನ ಐಬಕನ ಸಮಾಧಿ ಎಲ್ಲಿದೆ? 
 *ಲಾಹೋರದಲ್ಲಿ ಇದೆ*

 13)ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ ಯಾರು? 
  *ಇಲ್ತಮಶ್*

 13)ಇಲ್ತಮಶ್ ಯಾವ ಪಂಗಡಕ್ಕೆ ಸೇರಿದವನು? 
  *ಇಲ್ಬರಿ ಪಂಗಡಕ್ಕೆ*

 14)ಯಾರ ಆಳ್ವಿಕೆಯಲ್ಲಿ ಮೊಟ್ಟಮೊದಲು ಮಂಗೋಲರು ಕಾಣಿಸಿಕೊಂಡರು? 
 *ಇಲ್ತಮಶ್*

15) ಭಾರತಕ್ಕೆ ಶುದ್ಧ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದ ದೆಹಲಿ ಸುಲ್ತಾನ ಯಾರು? 
 *ಇಲ್ತಮಶ್*

 16)ಇಲ್ತಮಶನು ತನ್ನ ನಾಣ್ಯಗಳ ಮೇಲೆ ಏನೆಂದು ಮುದ್ರಿಸಿದನು? 
  *ಖಲೀಪನ್  ಪ್ರತಿನಿಧಿ* 

 17)"ನಲವತ್ತು ಸರದಾರರ ಒಕ್ಕೂಟ ಚಹಲ್ಗಾನಿ" ಯನ್ನು ನಿರ್ಮಿಸಿದ ದೆಹಲಿ ಸುಲ್ತಾನ ಯಾರು? 
 * ಇಲ್ತಮಶ್*

 18)ಕುತುಬ್ ಮಿನಾರ್ ಕಟ್ಟಡವನ್ನು ಪೂರ್ಣಗೊಳಿಸಿದವರು ಯಾರು? 
  *ಇಲ್ತಮಶ್*

 19)ದೆಹಲಿಯನ್ನಾಳಿದ ಮೊಟ್ಟ ಮೊದಲ ಮಹಿಳೆ ಯಾರು? 
 *ರಜಿಯಾ ಸುಲ್ತಾನ್*

20) ರಜಿಯಾ ಸುಲ್ತಾಳಲು ದೆಹಲಿಯನ್ನು ಎಷ್ಟು ವರ್ಷ ಆಳ್ವಿಕೆ ಮಾಡಿದಳು? 
 *3 ವರ್ಷ 6 ತಿಂಗಳ 6 ದಿವಸ*

 21)ದೆಹಲಿ ಸುಲ್ತಾನರ/ಗುಲಾಮಿ ಸಂತತಿಯ  *ಮರು ಸ್ಥಾಪಕ* ಎಂದು ಯಾರನ್ನು ಕರೆಯುತ್ತಾರೆ? 
  *ಗಿಯಾಸುದ್ದೀನ್ ಬಲ್ಬನ್*

22) ದೆಹಲಿ ಸುಲ್ತಾನರ ಪ್ರಥಮ "ನಾಯಿಬ್"  ಯಾರು? 
  *ಗಿಯಾಸುದ್ದೀನ್ ಬಲ್ಬನ್*( ಸುಲ್ತಾನ್ ಅಸಮರ್ಥ ನಾಗಿದ್ದಾಗ ಅವನ ಕಾರ್ಯವನ್ನು ನಿರ್ವಹಿಸುವ ಅಧಿಕಾರಿ)

 23)"ಸಿಜ್ಡ್" ಮತ್ತು "ಪೈಬೋಸ್" ಎಂಬ ಪದ್ಧತಿಯನ್ನು ಜಾರಿಗೆ ತಂದ ಸುಲ್ತಾನ್ ಯಾರು? 
  *ಗಿಯಾಸುದ್ದೀನ್ ಬಲ್ಬನ್*

 24)"ನಲವತ್ತು ಸರದಾರರ ಒಕ್ಕೋಟ ಚಹಲ್ಗಾನಿ" ಯನ್ನು ರದ್ದು ಪಡಿಸಿದವರು ಯಾರು? 
  *ಗಿಯಾಸುದ್ದೀನ್ ಬಲ್ಬನ್*

 25)ಮೊಟ್ಟಮೊದಲ ಬಾರಿಗೆ ಪರ್ಷಿಯನ್ ಮಾದರಿಯಲ್ಲಿ "ನವರೋಜ್ ಎಂಬ ಉತ್ಸವವನ್ನು" ಜಾರಿಗೆ ತಂದವರು ಯಾರು? 
  *ಗಿಯಸುದ್ದಿನ್ ಬಲ್ಬನ್*

 26)ದೆಹಲಿಯಲ್ಲಿ "ಕೆಂಪು ಅರಮನೆಯನ್ನು" ಕಟ್ಟಿಸಿದವರು ಯಾರು? 
  *ಗಿಯಾಸುದ್ದೀನ್ ಬಲ್ಬನ್*

27) ಕುತುಬ್ ಮಿನಾರ್ ಕಟ್ಟಡವನ್ನು ರಿಪೇರಿ ಮಾಡಿದವರಾರು? 
  *ಗಿಯಾಸುದ್ದೀನ್ ಬಲ್ಬನ್*

 28)ಮೊಟ್ಟಮೊದಲ ಬಾರಿಗೆ ಸೈನಿಕರಿಗೆ "ವೇತನ" ಕೊಡುವ ಪದ್ಧತಿಯನ್ನು ಜಾರಿಗೆ ತಂದ ದೆಹಲಿ ಸುಲ್ತಾನರು? 
  *ಗಿಯಾಸುದ್ದೀನ್ ಬಲ್ಬನ್*

29) ಖಿಲ್ಜಿ ಸಂತತಿಯ ಸ್ಥಾಪಕ ಯಾರು? 
  *ಜಲಾಲ್-ಉದ್-ದೀನ್ ಖಿಲ್ಜಿ*

 30)"ನವ ಮುಸಲ್ಮಾನರು" ಎಂದರೆ ಯಾರು?
 *ಮಂಗೋಲರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಭಾರತದಲ್ಲಿ ಉಳಿದರು ಇವರಿಗೆ ನವ ಮುಸ್ ಮಾಡಲೆಂದು ಕರೆಯುತ್ತಾರೆ*.

31) ತನ್ನ ಸಾಕಿಸಲುಹಿದ ಅಳಿಯನಿಂದಲೆ ಕೊಲೆಯಾದ ದೆಹಲಿ ಸುಲ್ತಾನ ಯಾರು? 
  *ಜಲಾಲ್-ಉದ್-ದೀನ್ ಖಿಲ್ಜಿ*

32) ಯಾರ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಆಡಳಿತ ಮಾಡಿದ ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು? 
  *ಅಲ್ಲಾವುದ್ದೀನ್ ಖಿಲ್ಜಿ*

 33)ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರೇನು? 
  *ಅಲಿಗುರ್ಸಸ್ಸ್*

 34)ಅಲ್ಲಾವುದ್ದೀನ್ ಖಿಲ್ಜಿಗೆ  ಎಲ್ಲಿ ಕಿರೀಟಧಾರಣೆ ಆಯ್ತು? 
  *ದೆಹಲಿಯ ಕೆಂಪು ಅರಮನೆಯಲ್ಲಿ*

35) "ಸಿಕಂದರ್ ಇ ಸಹನಿ"/ ದ್ವಿತೀಯ ಅಲೆಕ್ಸಾಂಡರ್ ಎಂದು ಯಾರನ್ನು ಕರೆಯುತ್ತಾರೆ? 
  *ಅಲ್ಲಾವುದ್ದೀನ್ ಖಿಲ್ಜಿ ಗೆ*

 35)"ಉತ್ತರ ಭಾರತ" ಮತ್ತು "ದಕ್ಷಿಣ ಭಾರತ" ಎಂಬ ದಂಡಯಾತ್ರೆಗಳನ್ನು ಕೈಗೊಂಡ ದೆಹಲಿ ಸುಲ್ತಾನ ಯಾರು? 
  *ಅಲ್ಲಾವುದ್ದೀನ್ ಖಿಲ್ಜಿ* 

 36)ಅಲ್ಲಾವುದ್ದೀನ್ ಖಿಲ್ಜಿಯ ಉತ್ತರ ಭಾರತ ದಂಡ ಯಾತ್ರೆ ಕಾಲಾವಧಿ? 
 *1298-1308*

 37)ಅಲ್ಲಾವುದ್ದೀನ್ ಖಿಲ್ಜಿಯು ಉತ್ತರ ಭಾರತ ದಂಡ ಯಾತ್ರೆಗೆ ದಂಡನಾಯಕನಾಗಿ ಯಾರನ್ನು ನೇಮಿಸಿದನು, 
 *ಜಪಾನ್ ಖಾನ್, ನಸರತ್ ಖಾನ್, ಉಲುಘ ಖಾನ್*

38) ಅಲ್ಲಾವುದ್ದೀನ್ ಖಿಲ್ಜಿಯ "ಉತ್ತರ ಭಾರತ" ದಂಡ ಯಾತ್ರೆಯ  ಮೊದಲ ದಂಡಯಾತ್ರೆ ಯಾವುದು?
 *1298 ಗುಜರಾತ್*

39) "ಮಲ್ಲಿಕಾಪರ್" ನನ್ನು ಯಾವ ದಾಳಿಯ ಸಂದರ್ಭದಲ್ಲಿ ಗುಲಾಮನಾಗಿ ಕರೆಸಿದರು? 
  *ಗುಜರಾತ್ ದಾಳಿಯ*

 40)ಮಲ್ಲಿಕಾಫರನ ಬಿರುದು ಯಾವುದು? 
  *ಹಜಾರ ದಿನಾರ*

   41)ರಾಣಿ ಪದ್ಮಿನಿ ಯಾರ ಹೆಂಡತಿ? 
 *ಚಿತ್ತೋಡದ ರಾಜ ರತನ್ ಸಿಂಗನ ಹೆಂಡತಿ*

 42)ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ಭಾರತ ದಂಡ ಯಾತ್ರೆ ಕಾಲಾವಧಿ? 
 *1307-1311*

43) ಅಲ್ಲಾವುದ್ದೀನ್ ಖಿಲ್ಜಿಯು  ದಕ್ಷಿಣ ಭಾರತ ದಂಡ ಯಾತ್ರೆಗೆ ಯಾರನ್ನು ದಂಡನಾಯಕನಾಗಿ ನೇಮಿಸಿದನು?
  *ಮಲ್ಲಿಕಾಪರ್ ನನ್ನು* 

 44)ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ಭಾರತದ ಮೊದಲ ದಂಡಯಾತ್ರೆ ಯಾವುದು? 
 *1307 ದೇವಗಿರಿಯ ರಾಮಚಂದ್ರನ  ಮೇಲೆ,*

 45)ಕುದುರೆಗಳಿಗೆ ಮುದ್ರೆ ಹಾಕುವ (ದಾಗ ) ಎಂಬ ಪದ್ಧತಿಯನ್ನು ಜಾರಿಗೆ ತಂದವರು ಯಾರು? 
  *ಅಲ್ಲಾವುದ್ದೀನ್ ಖಿಲ್ಜಿ* 

 46)ಸೈನಿಕರ ಮುಖ ಲಕ್ಷಣವನ್ನು ಬರೆದಿರುವ ಪುಸ್ತಕ ಯಾವುದು? 
  *ಹುಲಿಯಾ ಚಾಹರಾ* 

 47)ಅಲ್ಲಾವುದ್ದೀನ್ ಖಿಲ್ಜಿಯ ಪ್ರಮುಖ ಸಾಧನೆ ಯಾವುದು? 
 *ಮಾರುಕಟ್ಟೆ ಸುಧಾರಣೆ*

 48)ಅಲ್ಲಾವುದ್ದೀನ್ ಖಿಲ್ಜಿಯು ಮಾರುಕಟ್ಟೆ ಇಲಾಖೆಯನ್ನು ಏನೆಂದು ಕರೆಯುತ್ತಿದ್ದನು? 
  *ದಿವಾನಿ-ಇ-ರಿಯಾಸತ್*

 49)ಮಾರುಕಟ್ಟೆ ಅಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು? 
  *ಶಹನ್-ಐ-ಮಂಡಿ*

 50)ಅಲ್ಲಾವುದ್ದೀನ್ ಖಿಲ್ಜಿಯು ಹಿಂದುಗಳ ಮೇಲೆ ಹಾಕುವ ಪದ್ಧತಿ ಯಾವುದು? 
 *ಜಿಜಿಯಾ*

51)ಮುಸ್ಲಿಂ ಬಾಂಧವರ ಮೇಲೆ ಹಾಕುವ ಪದ್ಧತಿ? 
  *ಜಕಾತ್*

 52)ಭಾರತದ ಗಿಳಿ ಎಂದು ಕರೆಸಿಕೊಳ್ಳುವ ಅಮೀರ್ ಖುಸ್ರೋ ಯಾರ ಆಸ್ಥಾನದಲ್ಲಿದ್ದರು? 
 *ಅಲ್ಲಾವುದ್ದೀನ್ ಖಿಲ್ಜಿ*

53) "ಅಲಾಯಿ ದರ್ವಾಜ್" ಮತ್ತು "ಅಲಹಿ ಮಿನಾರ್" ಎಂಬ ಕಟ್ಟಡವನ್ನು ದೆಹಲಿಯಲ್ಲಿ ಕಟ್ಟಿಸಿದವರು ಯಾರು? 
 *ಅಲ್ಲಾವುದ್ದೀನ್ ಖಿಲ್ಜಿ*

54) 30ಸಾವಿರ  "ನವ ಮುಸಲ್ಮಾನರನ್ನು" ಒಂದೇ ದಿನದಲ್ಲಿ ಕೊಲೆ ಮಾಡಿದ ದೆಹಲಿ ಸುಲ್ತಾನ ಯಾರು? 
  *ಅಲ್ಲಾವುದ್ದೀನ್ ಖಿಲ್ಜಿ*

 55)ಮಲ್ಲಿಕಾಪರನಿಂದ ವಿಷಪ್ರಾಶನಕ್ಕೆ ಒಳಗಾದ ದೆಹಲಿ ಸುಲ್ತಾನರ? 
  *ಅಲ್ಲಾವುದ್ದೀನ್ ಖಿಲ್ಜಿ*(1316ರಲ್ಲಿ)

 56)ತುಗಲಕ್ ಸಂತತಿಯ ಸ್ಥಾಪಕ ಯಾರು? 
  *ಗಿಯಾಸುದ್ದೀನ್ ತುಘಲಕ್*

57) ರೈತರಿಗೆ "ನೀರಾವರಿ ಸೌಲಭ್ಯವನ್ನು" ಒದಗಿಸಿಕೊಟ್ಟ ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು? 
  *ಗಿಯಾಸುದ್ದೀನ್ ತುಘಲಕ್*

 58)"ತುಘಲಕಾಬಾದ್" ಎಂಬ ನಗರವನ್ನು ನಿರ್ಮಿಸಿದವರು? 
 *ಗಿಯಾಸುದ್ದೀನ್ ತುಘಲಕ್*

 59)ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಮಗನಿಂದಲೇ ಕೊಲೆಯಾದ ವ್ಯಕ್ತಿ ಯಾರು?
  *ಗಿಯಾಸುದ್ದೀನ್ ತುಘಲಕ್* 

 60)ಮಹಮದ್ ಬಿನ್ ತುಘಲಕನ ಮೂಲ ಹೆಸರೇನು? 
  *ಜುನಾ ಖಾನ್*

 61)"ಅರೆಹುಚ್ಚ ಅರಸ" ಮತ್ತು "ಯೋಜನಾಪ ಅರಸ"  ಎಂದು ಯಾರನ್ನು ಕರೆಯುತ್ತಾರೆ? 
 *ಮಹಮ್ಮದ್ ಬಿನ್ ತುಘಲಕ್*

 62)"ದೆಹಲಿಯಿಂದ ದೇವಗಿರಿಗೆ" ರಾಜಧಾನಿಯನ್ನು ವರ್ಗಾಯಿಸಿದ ದೆಹಲಿ ಸುಲ್ತಾನ ಯಾರು? 
 *ಮಹಮ್ಮದ್ ಬಿನ್ ತುಘಲಕ್*

 63)"ದೆಹಲಿಯಲ್ಲಿ ದೀಪವನ್ನು ಹಿಡಿದುಕೊಂಡು ಅಡ್ಡಾಡಿದರು ಒಂದು ಬೆಕ್ಕು ನಾಯಿ ಸುಳಿವು  ಇರಲಿಲ್ಲ" ಎಂದು ಹೇಳಿದವರು ಯಾರು? 
  *ಜಿಯೋ ದಿನ ಬರ್ನಿ* 

 64)"ಹಣಗಾರರ ರಾಜ" ಎಂದು ಯಾರನ್ನು ಕರೆಯುತ್ತಾರೆ? 
 *ಮಹಮ್ಮದ್ ಬಿನ್ ತುಘಲಕ್*
 (ಕರೆದವರು ಅಡ್ವರ್ಡ್ ಥಾಮಸ್)

 *ಮಹಮದ್ ಬಿನ್ ತುಘಲಕನು ಜೈನ ಮುನಿ ಪ್ರಭು ಸೂರಿ ಜೊತೆ ವಿಚಾರವಿನಿಮಯ ಮಾಡಿದನು*

65)" ವೈಪರೀತ್ಯಗಳ ಸಮ್ಮಿಶ್ರಣ ದೊರೆಯೆಂದು" ಯಾರನ್ನು ಕರೆಯುತ್ತಾರೆ? 
 *ಮಹಮ್ಮದ್ ಬಿನ್ ತುಘಲಕ್*

66)" ಹಿಂದೂ ತಾಯಿಯ ಮಗನಾಗಿದ್ದರೂ ಹಿಂದೂ ವಿರೋಧ ನೀತಿಯನ್ನು ಅನುಸರಿಸಿದ" ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು? 
  *ಫಿರೋಜ್ ಷಾ ತುಘಲಕ್*

 67)"ಅತಿ ಹೆಚ್ಚು ಗುಲಾಮರನ್ನು" ಹೊಂದಿದ್ದ ದೆಹಲಿ ಸುಲ್ತಾನ ಯಾರು? 
 *ಫಿರೋಜ್ ಷಾ ತುಘಲಕ್*( ಒಂದು ಲಕ್ಷದ ಎಂಬತ್ತು ಸಾವಿರ ಗುಲಾಮರು)

 68)"ನಗರಗಳ ನಿರ್ಮಾಪಕ" ರಾಜ ಎಂದು ಯಾರನ್ನು ಕರೆಯುತ್ತಾರೆ? 
  *ಫಿರೋಜ್ ಷಾ ತುಘಲಕ್*

 69)ಭಾರತೀಯ ಮುಸ್ಲಿ0 ರನ್ನು ಆಡಳಿತದಲ್ಲಿ ನೇಮಿಸಿಕೊಂಡ ಮೊದಲ ಬೇರೆ ಸುಲ್ತಾನ ಯಾರು?
  *ಫಿರೋಜ್ ಷಾ  ತುಘಲಕ್*

 70)"ಕಾಲುವೆಗಳ ನಿರ್ಮಾಪಕ ರಾಜ" ಎಂದು ಯಾರನ್ನು ಕರಿತಾರೆ?
  *ಫಿರೋಜ ಷಾ ತುಘಲಕ್*

 71)ನಾಣ್ಯಗಳ ಮೇಲೆ "ಸುಲ್ತಾನ್ ಸುಲ್ತಾನ್ ಬಲಗೈ" ಎಂದು ಮುದ್ರಿಸಿದ ದೆಹಲಿ ಸುಲ್ತಾನ ಯಾರು? 
 *ಫಿರೋಜ್ ಷಾ ತುಘಲಕ್*

72) "ತನ್ನ ಆತ್ಮಚರಿತ್ರೆಯನ್ನು  ತಾನೆ "ಬರೆದುಕೊಂಡ ಮೊಟ್ಟಮೊದಲ ದೆಹಲಿ ಸುಲ್ತಾನ ಯಾರು?
  *ಫಿರೋಜ್ ಷಾ ತುಘಲಕ್*
( "ಪತ್ವತ್-ಐ-ಫಿರೋಜ್ ಷಾಹಿ")

 73)ಇಡೀ ವಿಶ್ವವನ್ನೇ "ಮುಸ್ಲಿಂ ರಾಷ್ಟ್ರವನ್ನಾಗಿ" ಸಬೇಕೆಂದು ಹೇಳಿದವರು ಯಾರು? 
  *ತೈಮೂರ್*

74)"1ಲಕ್ಷ  ಹಿಂದುಗಳನ್ನು ಕೊಲೆ" ಮಾಡಿದವರಾರು? 
  *ತೈಮೂರ್*

74) ಮಧ್ಯಯುಗಿನ ಭಾರತ ಇತಿಹಾಸದಲ್ಲಿ ದೆಹಲಿಯನ್ನು ಆಳಿದ ಹಏಕೈಕ ಹಿಂದು ವ್ಯಕ್ತಿ? 
  *ಹೇಮು*

75) ಮಧ್ಯಯುಗಿನ ಭಾರತ ಇತಿಹಾಸದಲ್ಲಿ "ಒಂದೇ ದಿನ ದೆಹಲಿ ಸಿಂಹಾಸನ" ಏರಿದ ಏಕೈಕ ವ್ಯಕ್ತಿ? 
  *ಜಲಗಾರ ನಿಜಾಮ*

logoblog

Thanks for reading * Questionnaires heard in various competitive exams on Delhi Sultanate,

Previous
« Prev Post

No comments:

Post a Comment