Friday 19 February 2021

Chhatrapati Shivaji Maharaj wishes victory

  MahitiVedike Com       Friday 19 February 2021
 *ಛತ್ರಪತಿ ಶಿವಾಜಿ ಮಹಾರಾಜ್ ರ ಜಯಂತಿಯ ಶುಭಾಶಯಗಳು*
             👇👇👇👇👇
  *ಛತ್ರಪತಿ ಶಿವಾಜಿ ಮಹಾರಾಜ್*[1627-1680]
 *ಮರಾಠ ಸಾಮ್ರಾಜ್ಯ ಸ್ಥಾಪಕರು*,

 *ಜನನ*=AD1627 *ಪುಣೆಯ ಸಮೀಪ ಶಿವನೇರಿದುರ್ಗ*, 

 ತಂದೆ= *ಷಹಜಿ ಬೋಸ್ಲೆ* 
ಇವರು *ಬಿಜಾಪುರ ಸುಲ್ತಾನರಲ್ಲಿ* ಸೈನ್ಯ ಅಧಿಕಾರಿಯಾಗಿದ್ದರು,
 
 ತಾಯಿ= *ಜೀಜಾಬಾಯಿ*

 ಶಿವಾಜಿಯ ರಾಜಕೀಯ ಗುರು/ ಶಸ್ತ್ರಾಸ್ತ್ರ ಕಲಿಸಿದ ಗುರು= *ದಾದಾಜಿಕೊಂಡದೇವ*

 ಆಧ್ಯಾತ್ಮಿಕ ಗುರು= *ಸಮರ್ಥ ರಾಮದಾಸ*

 ಶಿವಾಜಿ ಮೇಲೆ ಪ್ರಭಾವ ಬೀರಿದ ಮಹಾಕಾವ್ಯಗಳು=  *ರಾಮಾಯಣ ಮತ್ತು ಮಹಾಭಾರತ*.

 ಶಿವಾಜಿಯ ಬಿರುದುಗಳು= *"ಛತ್ರಪತಿ", "ಗೋ-ಬ್ರಾಹ್ಮಣ ಪ್ರತಿಫಲಕ", "ಬೆಟ್ಟದ ಇಲಿ"*[ ಇದು ಅವರಂಗಜೇಬ್ ಕೊಟ್ಟಿರುವಂತಹ ಬಿರುದು,]

 ಶಿವಾಜಿಯ ಖಡ್ಗದ ಹೆಸರು= *ಭವಾನಿ*

 ಶಿವಾಜಿಯ ಕುದುರೆ ಹೆಸರು= *ಬಸಂತಿ*

 ಶಿವಾಜಿಯ ಆರಾಧ್ಯ ದೇವರು= *ತುಳಜಾಪುರ ಅಂಬಾಭವಾನಿ*

 ಶಿವಾಜಿಯ ಸೈನ್ಯದ ಹೆಸರು= *ಮಾವಳಿ ಸೈನ್ಯ*

 ಶಿವಾಜಿ ಅನುಸರಿಸುವಂತಹ ಯುದ್ಧ= *ಗೆರಿಲ್ಲಾ ಯುದ್ಧ*[ ಈ ಯುದ್ಧವನ್ನು *ಹಮ್ಮದ್ ನಗರದ ಮಲಿಕ್ ಅಂಬರ್ ನಿಂದ* ಕಲಿತಿದ್ದನ್ನು] FDA-2018)

 ಶಿವಾಜಿಯ ಸ್ನೇಹಿತ= *ತಾನಾಜಿ*{ ಶಿವಾಜಿ ಇವನಿಗೆ *ಸಿಂಹ* ಎಂದು ಕರೆಯುತ್ತಿದ್ದರು, 

  *ಶಿವಾಜಿಯ ಸಾಧನೆಗಳು*

"1646ರಲ್ಲಿ" *ಮಹಮ್ಮದ್ ಆದಿಲ್  ಷಾ ಮೇಲೆ*ದಾಳಿ ಮಾಡಿ ತೋರಣಗಡನ್ನು  ಆಕ್ರಮಿಸಿದ, ಆಕ್ರಮಿಸಿದ ಕೋಟೆಗಳು, *"ಪುರಂದರಗಡ", "ಕೊಂಕಣ", "ಸಿಂಹಗಡ", "ಪ್ರತಾಪ್ ಗಡ್"*, 

"1656ರಲ್ಲಿ" *2ನೇ ಅಲಿ  ಆದಿಲ್ ಷಾಹಿ* ಮೇಲೆ ದಾಳಿ ಮಾಡಿದ, [ ಇವನು ಶಿವಾಜಿಯನ್ನು ಕೊಲ್ಲಲು ತನ್ನ ದೈತ್ಯ ಸೈನ್ಯ ದಂಡಾಧಿಕಾರಿ ಯಾದ *ಅಫ್ಜಲ್ ಖಾನ್* ನನ್ನು ಕಳಿಸಿದ,]

"1659ರಲ್ಲಿ" ಪ್ರತಾಪಗಡ ಬಳಿ  *ವಾಯಿ* ಎಂಬಲ್ಲಿ ಪರಸ್ಪರ ಇಬ್ಬರೂ ಭೇಟಿಯಾದರು{ ಇವರಿಬ್ಬರ ನಡುವೆ ಮಧ್ಯಸ್ತಿಕೆ ವಹಿಸಿ ರುವಂತಹ ವ್ಯಕ್ತಿ *ಕೃಷ್ಣಜಿ ಭಾಸ್ಕರ್ ರಾವ್*}

"1659"ರಲ್ಲಿ ಶಿವಾಜಿಯು ತನ್ನ *ವ್ಯಾಘ್ರನಖ* ದಿಂದ ಅಬ್ಜಲ್ ಖಾನನನ್ನು  ಕೊಲೆಮಾಡಿದ,

"1663"ರಲ್ಲಿ ಔರಂಗಜೇಬನು *ಶಾಯಿಸ್ತಖಾನನನ್ನು* ಕಳುಹಿಸಿದನು, ಶಿವಾಜಿಯು ರಾತ್ರೋರಾತ್ರಿ ಇವನ ಬಿಡಾರದ ಮೇಲೆ ದಾಳಿ ಮಾಡಿ ಸೋಲಿಸಿದನು,

"1665"ರಲ್ಲಿ ಔರಂಗಜೇಬನು ಪುನ: ಹಿಂದು ದೊರೆಯಾದ *ಜೈ ಸಿಂಗ್* ಮತ್ತು *ದುಲೀಪ್ ಖಾನ್* ಶಿವಾಜಿ ಮೇಲೆ ದಾಳಿ ಮಾಡಲು ಕಳುಹಿಸಿದನು, ಶಿವಾಜಿಯು ಮತ್ತು ಜೈಸಿಂಗ್ ನ  ನಡುವೆ *1665 ಜೂನ್22 ರಂದು ಪುರಂದರ ಒಪ್ಪಂದಕ್ಕೆ* ಸಹಿ ಹಾಕಿದರು,

 *ಪುರಂದರ ಒಪ್ಪಂದದ ಕರಾರುಗಳು*
              👇👇👇👇👇
1)"23 ಕೋಟಿಗಳನ್ನು ಮೊಘಲರಿಗೆ ಬಿಟ್ಟುಕೊಡುತ್ತಾನೆ,"
2)"12 ಕೋಟೆಗಳನ್ನು ತನ್ನಲ್ಲಿ ಉಳಿಸಿಕೊಂಡನು," 
3) "ತನ್ನ ಸಮಸ್ತ ಜವಾಬ್ದಾರಿಯನ್ನು ತಾಯಿಯಾದ ಜೀಜಾಬಾಯಿಗೆ  ಒಪ್ಪಿಸಿ ಆಗ್ರಾ ನಗರಕ್ಕೆ  ಬರುವುದು".

 *1666 ಮಾರ್ಚ್16 ರಂದು ಮಗನಾದ ಸಂಭಾಜಿ ಯೊಡನೆ ಆಗ್ರಾ ನಗರಕ್ಕೆ ಹೋದನು*, 

 *1673 ರಲ್ಲಿ ಮಿಠಾಯಿ ಬುಟ್ಟಿಯಲ್ಲಿ  ಕುಳಿತುಕೊಂಡು ಔರಂಗಜೇಬನ ಬಂಧನದಿಂದ ಪಾರಾದನು,*

 *1673ರಲ್ಲಿ ಸಿಂಹಗಡ ಕೋಟೆಯನ್ನು ವಶಪಡಿಸಿಕೊಳ್ಳಲು ಸಂದರ್ಭದಲ್ಲಿ ತನ್ನ ಪ್ರಸಿದ್ಧ ದಳಪತಿ ಮತ್ತು ಆತ್ಮೀಯ ಸ್ನೇಹಿತನಾದ *ತಾನಾಜಿ ಮಾಲ್ಸುರೆ* ನನ್ನು ಕಳೆದುಕೊಂಡನು, ಅದಕ್ಕಾಗಿ ಶಿವಾಜಿಯು *ಕೋಟೆಯನ್ನು ಗೆದ್ದುಕೊಂಡೆ  ಆದರೆ ಸಿಂಹವನ್ನು ಕಳೆದುಕೊಂಡೆ* ಎಂದು ಹೇಳಿದನು, 

 *ಶಿವಾಜಿಯು *ಸಲ್ಹರ್* ಕದನದಲ್ಲಿ ಮೊಘಲರ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದನು, ಇದಕ್ಕಾಗಿ ಔರಂಗಜೇಬನು ಶಿವಾಜಿಗೆ *ರಾಜ* ಎಂದು ಬಿರುದು ಕೊಟ್ಟನು.( *ದಖ್ಖನಿನ್ನ ಹುಣ್ಣು ನನ್ನನ್ನು ನಾಶಮಾಡಿತು* ಎಂದು ಔರಂಗಜೇಬನು ಶಿವಾಜಿಯ ಕುರಿತು ಹೇಳುತ್ತಾನೆ)

 *1674 ಜೂನ್16 ರಂದು ಶಿವಾಜಿಗೆ *ಛತ್ರಪತಿ*{ ರಾಜರ ರಾಜ} ಎಂದು ಬಿರುದಿನೊಂದಿಗೆ *ರಾಯಗಡದಲ್ಲಿ* ಕಿರೀಟಧಾರಣೆ ಆಯ್ತು, 

 ಶಿವಾಜಿಗೆ ಕಿರೀಟಧಾರಣೆ ಮಾಡಿದವರು= *ಘಗಭಟ್ಟರು*

 ಇದೇ ಸಂದರ್ಭದಲ್ಲಿ ಶಿವಾಜಿಗೆ ಕಾಣಿಕೆಯನ್ನು ನೀಡಿದ ಬ್ರಿಟಿಷ್ ರಾಯಭಾರಿ= *"ಆಕ್ಸಿನ್ ಡನ್"*

 ಶಿವಾಜಿಯು"1680"ರಲ್ಲಿ ಮರಣಹೊಂದಿದರು, ಇವರ ಸಮಾಧಿ *ರಾಯಗಡ* ದಲ್ಲಿದೆ.

 *ಶಿವಾಜಿ ಆಡಳಿತ ವ್ಯವಸ್ಥೆ*

 ಶಿವಾಜಿಯು *ಹೈಂದವಿ* ಸಾಮ್ರಾಜ್ಯ ಕಲ್ಪನೆಯನ್ನು ಹೊಂದಿದ್ದ,

 ಶಿವಾಜಿಯ ಆಡಳಿತದಲ್ಲಿ *ಅಷ್ಟ ಪ್ರಧಾನಗಳು* (8 )ಎಂಬ ಮಂತ್ರಿಗಳಿದ್ದರು.

1) ಪೇಶ್ವೆ= *ಪ್ರಧಾನಮಂತ್ರಿ*

2) ಅಮಾತ್ಯ= *ಹಣಕಾಸು ಮಂತ್ರಿ*  [ಮಜುಮ್ ದಾರ್ ]

3) ಮಂತ್ರಿ=  *ಗ್ರಹ ಮಂತ್ರಿ*

4) ಸುಮಂತ= *ವಿದೇಶಾಂಗ ಮಂತ್ರಿ*

5) ಪಂಡಿತ ರಾವ್= *ಪುರೋಹಿತ*

6) ಸೇನಾಪತಿ= *ಸೈನ್ಯದ ಮುಖ್ಯಸ್ಥ*

7) ಸಚಿವ= *ರಾಜ ಪತ್ರ* 
*ವ್ಯವಹಾರ ನೋಡಿಕೊಳ್ಳುವ*

8) ನ್ಯಾಯಾಧೀಶ= *ನಾಗರಿಕ ಮತ್ತು ಸೈನಿಕನ ನ್ಯಾಯಗಳಿಗೆ ಜವಾಬ್ದಾರ*, 

 ಶಿವಾಜಿಗೆ ಇಬ್ಬರು ಗಂಡು ಮಕ್ಕಳು, 
1) *ಸಂಭಾಜಿ*, 
2) *ಸಾಹೋ*/ *ರಾಜಾರಾಮ್* 

 ಶಿವಾಜಿಗೆ 6ಮಂದಿ ಪತ್ನಿಯರು*
1) *ಸೂಯರ ಬಾಯಿ ಮಾಹಿತಿ*, 
2) *ಸಾಯಿಬಾಯಿ ನಿಂಬಾಳ್ಕರ್*, 
 3) *ಕಾಶಿಬಾಯಿ*, 
4) *ಸುಗಣಾಬಾಯಿ*.
5) *ಮಂಜುಳಾ ಬಾಯಿ*, 
7) *ಸಕ್ವರ್  ಬಾಯಿ*.

 "ಶಿವಾಜಿಗೆ ಆರು ಜನ ಹೆಣ್ಣುಮಕ್ಕಳು".
1) *ಸಕ್ಕೂಬಾಯಿ ನಿಂಬಾಳ್ಕರ್*, 
2) *ರಾಣುಬಾಯಿ ಝಾಧವ್*, 
3) *ಅಂಬಿಕಾ ಬಾಯಿಮಹಾದಿಕ*, 
4) *ದೀಪಾ ಬಾಯಿ*,
5) *ಕಮಲಾಬಾಯಿ ಪಾಳ್ಕರ್*.
6) *ರಾಜ ಕುನ್ವರ ಬಾಯಿ*.
logoblog

Thanks for reading Chhatrapati Shivaji Maharaj wishes victory

Previous
« Prev Post

No comments:

Post a Comment