*ಸೌರಮಂಡಲದ ಗ್ರಹಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ*,
👇👇👇👇👇
*ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಗ್ರಹಗಳು ಸೂರ್ಯನ ಸುತ್ತಲೂ ಅಂಡಾಕಾರದ ಪಥದಲ್ಲಿ ಗಡಿಯಾರದ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತವೆ*,
*ಸೌರವ್ಯೂಹದಲ್ಲಿ ಈ ಮುಂಚೆ "ಒಂಬತ್ತು" ಗ್ರಹಗಳು ಇದ್ದವು 2006ರಲ್ಲಿ ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಎಂಬ ಗ್ರಹವನ್ನು ತೆಗೆದುಹಾಕಿ, ಈಗ ಪ್ರಸ್ತುತ 8 ಗ್ರಹಗಳಿವೆ*,
*ಎಂಟು ಗ್ರಹಗಳು*
1) *ಬುಧ ಗ್ರಹ*
2) *ಶುಕ್ರ ಗ್ರಹ*,
3) *ಭೂಮಿ ಗ್ರಹ*,
4) *ಮಂಗಳ ಗ್ರಹ,*
5) *ಗುರು ಗ್ರಹ*
6) *ಶನಿ ಗ್ರಹ*,
7) *ಯುರೇನಸ್ ಗ್ರಹ*
8) *ನೆಪ್ಚೂನ್ ಗ್ರಹ*
1} *ಬುಧ ಗ್ರಹ* (Mercury)
*ಸೂರ್ಯನಿಗೆ ಸಮೀಪವಾದ ಗ್ರಹ, ಮತ್ತು ಸೌರಮಂಡಲದಲ್ಲಿ ಅತ್ಯಂತ ಚಿಕ್ಕದಾದ ಗ್ರಹವಾಗಿದೆ*.
*ಸೂರ್ಯನಿಗೆ ಅತಿ ಸಮೀಪ ವಾಗಿರುವ ದಿಂದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹವಾಗಿದೆ*,
*ಬುಧ ಗ್ರಹವು ಕಂದು ಬಣ್ಣದಿಂದ ಕೂಡಿದೆ*,
*ಈ ಗ್ರಹಕ್ಕೆ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಯಾವುದೇ ಉಪಗ್ರಹ ಹೊಂದಿರುವುದಿಲ್ಲ*,
=====================
2} *ಶುಕ್ರ ಗ್ರಹ*(venus)
▪️ *ಈ ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯುತ್ತಾರೆ*,
▪️ *ಸೌರವ್ಯೂಹದಲ್ಲಿ ಪರಿಭ್ರಮಣ( ಸೂರ್ಯನ ಸುತ್ತ) ಅವಧಿಗಿಂತ ಅಕ್ಷ ಭ್ರಮಣದ ( ತನ್ನ ಸುತ್ತ) ಅವಧಿ ಹೆಚ್ಚು ಹೊಂದಿರುವ ಗ್ರಹವಾಗಿದೆ*,
▪️ *ಅತಿ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಮತ್ತು ಸಲ್ಪೂರಿಕ್ ಆಮ್ಲ ಹೊಂದಿರುವುದರಿಂದ ಇದನ್ನು ಹಸಿರುಮನೆಯ ಗ್ರಹ ಎಂದು ಕರೆಯುತ್ತಾರೆ*,
▪️ *ಇದು ಅತ್ಯಂತ ಪ್ರಕಾಶಮಾನವಾದ ಗ್ರಹ, ಮುಂಜಾನೆ ನಕ್ಷತ್ರ, ಬೆಳ್ಳಿಚುಕ್ಕಿ, ಮತ್ತು ರೈತನ ನಕ್ಷತ್ರ ಎಂದು ಕರೆಯುತ್ತಾರೆ*,
▪️ *ಈ ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹ ಗಳಿಲ್ಲ, ಇದನ್ನು ಹಳದಿ ಗ್ರಹ ಎಂದು ಸಹ ಕರೆಯುತ್ತಾರೆ*.
=====================
3} *ಭೂಮಿ*(Earth}
*ಭೂಮಿಯು ಸೂರ್ಯನಿಗೆ ಮೂರನೇ ಸಮೀಪವಾದ ಗ್ರಹವಾಗಿದೆ*,
*ಭೂಮಿ ಅತ್ಯಂತ ಭಾರವಾದ ಗ್ರಹ ಮತ್ತು ಅತಿ ಹೆಚ್ಚು ನೀರನ್ನು ಒಳಗೊಂಡಿರುವುದರಿಂದ ಇದನ್ನು ಜಲಾವೃತ ಗ್ರಹ ಎಂದು ಕರೆಯುತ್ತಾರೆ*,
*ಭೂಮಿಯು ಜೀವರಾಶಿ ಮತ್ತು ವೈವಿಧ್ಯಮಯ ಸಸ್ಯಗಳಿಂದ ಕೂಡಿದ ಸೌರವ್ಯೂಹದ ಸುಂದರ ಗ್ರಹ'ಮತ್ತು ಜೀವಂತ ಗ್ರಹ ಎಂದು ಕರೆಯುತ್ತಾರೆ*,
*ಭೂಮಿಯು ಗಾತ್ರದಲ್ಲಿ 5ನೇ ದೊಡ್ಡ ಗ್ರಹವಾಗಿದ್ದು ನೀಲಿ ಬಣ್ಣದಿಂದ ಕೂಡಿದೆ*,
*ಭೂಮಿಯ ಅಕ್ಷ ಭ್ರಮಣ ಅವಧಿ 23 ಗಂಟೆ 56 ನಿಮಿಷ O.4 ಸೆಕೆಂಡ್ ಇದನ್ನು ನಾಕ್ಷತ್ರಿಕ ದಿನ ಎಂದು ಕರೆಯುತ್ತಾರೆ*,
*ಭೂಮಿಯು ಪರಿಭ್ರಮಣ ಅವಧಿ 365 ದಿನ 5ಘಂಟೆ 48 ನಿಮಿಷ, ಇದನ್ನು ನಾಕ್ಷತ್ರಿಕ ವರ್ಷ ಎಂದು ಕರೆಯುತ್ತಾರೆ*,
*ಭೂಮಿಯ ಒಟ್ಟು70.8% ನೀರು 29.2% ರಷ್ಟು ಭೂ ಭಾಗವಿದೆ*,
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ *ಚಂದ್ರ*
*ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಂಟು ನಿಮಿಷಗಳು ಬೇಕಾಗುತ್ತೆ, ಅದೇ ರೀತಿ ಚಂದ್ರನ ಬೆಳಕು ಭೂಮಿಯನ್ನು ತಲುಪಲು 1.3 ಸೆಕೆಂಡ್ ಬೇಕು*,
=====================
4} *ಮಂಗಳ ಗ್ರಹ* (Mars)
*ಸೂರ್ಯನಿಗೆ 4ನೇ ಸಮೀಪವಾದ ಗ್ರಹವಾಗಿದ್ದು, ಇದು ಹೆಚ್ಚಾಗಿ ಕಬ್ಬಿನ ಆಕ್ಸೈಡ್ ಹೊಂದಿರುವುದರಿಂದ ಇದು ಕೆಂಪುಬಣ್ಣವನ್ನು ಹೊಂದಿದೆ*,
*ಈ ಗ್ರಹಣ ರೋಮನ್ನರ ಯುದ್ಧದೇವತೆ, ಅಂಗಾರಕ, ಕುಜಗ್ರಹ ಎಂದು ಸಹ ಕರೆಯುತ್ತಾರೆ*,
ಮಂಗಳ ಗ್ರಹವು *ಫೋಬೋಸ್* ಮತ್ತು *ಡಿಮೋಸ್* ಎಂಬ ಎರಡು ಉಪಗ್ರಹಗಳನ್ನು ಹೊಂದಿದೆ,
*ಮಂಗಳ ಗ್ರಹದ ಹೊರಮೈ ಹಲವಾರು ಜ್ವಾಲಮುಖಿ ಪರ್ವತಗಳಿಂದ ಕೂಡಿದೆ*.
ಇಸ್ರೋ ಬಾಹ್ಯಾಕಾಶ ಸಂಸ್ಥೆಯು 2013ರಲ್ಲಿ ಮಂಗಳಗ್ರಹಕ್ಕೆ, *ಮಾರ್ಸ್ ಆರ್ಬಿಟಲ್ ಮಿಷನ್* ಎಂಬ ಉಪಗ್ರಹವನ್ನು ಉಡಾಯಿಸಿತು,
=====================
5) *ಗುರು ಗ್ರಹ*
*ಸೂರ್ಯನಿಗೆ 5ನೇ ಸಮೀಪವಾದ ಗ್ರಹ ಮತ್ತು ಸೌರಮಂಡಲದ ಅತ್ಯಂತ ದೊಡ್ಡ ಗ್ರಹ*,
*ಶುಕ್ರಗ್ರಹದ ನಂತರ ಅತಿ ಹೆಚ್ಚು ಪ್ರಜ್ವಲಿಸುವ ಎಡನೇ ಗ್ರಹವಾಗಿದೆ*,
*ಈ ಗುರು ಗ್ರಹ ಸೌರಮಂಡಲದಲ್ಲಿ ಅತಿ ಕಡಿಮೆ ಅಕ್ಷಭ್ರಮಣ ಅವಧಿಯನ್ನು ಹೊಂದಿರುವ ಗ್ರಹ* (9ಘಂಟೆ 50ನಿಮಿಷ )
*ಸೌರವ್ಯೂಹದಲ್ಲಿ ಅತಿ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ*,
ಗುರುಗ್ರಹದ ಪ್ರಮುಖ ಉಪಗ್ರಹಗಳು *ಗ್ಯಾನಿಮೇಡ್*, *ಐಓ*, *ಯುರೋಪ್*, ಮತ್ತು *ಕ್ಯಾಲಿಸ್ಟೊ*, ಇವುಗಳನ್ನು ಗೆಲಿಲಿಯೋ ಗುರುತಿಸುವುದರಿಂದ ಗೆಲಿಲಿಯೋ ಉಪಗ್ರಹಗಳ ಎಂದು ಸಹ ಕರೆಯುತ್ತಾರೆ,
*ಗ್ಯಾನಿಮೇಡ್* ಎಂಬ ಉಪಗ್ರಹವು ಸೌರಮಂಡಲದಲ್ಲಿ ಅತಿದೊಡ್ಡ ಉಪಗ್ರಹವಾಗಿದೆ,
*ಗುರುಗ್ರಹದ ಕೆಲವು ಉಪಗ್ರಹಗಳು ಗುರುಗ್ರಹದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ*.
=====================
6) *ಶನಿ ಗ್ರಹ*(Saturn)
*ಶನಿಗ್ರಹವು ಸೌರಮಂಡಲದಲ್ಲಿ ಎರಡನೇ ದೊಡ್ಡ ಗ್ರಹವಾಗಿದೆ*,
*ಶನಿಗ್ರಹವು ಸುತ್ತಲೂ ಬಳೆಗಳನ್ನು ಹೊಂದಿದೆ*,
*ಶನಿಗ್ರಹವು ಸೌರಮಂಡಲದಲ್ಲಿಯೇ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ*,
ಶನಿಗ್ರಹದ ಪ್ರಮುಖ ಉಪಗ್ರಹ *ಟೈಟಾನ್*
ಶನಿಗ್ರಹವು ಆಕಾಶಕಾಯಗಳಲ್ಲಿ ಉಂಗುರಗಳಿಂದ ಕೂಡಿದೆ, ಈ ಗ್ರಹವು ಉಂಗುರಗಳ ವ್ಯವಸ್ಥೆ ಹೊಂದಿದೆ ಎಂದು (1655ರಲ್ಲಿ )ತಿಳಿಸಿದರು *ಕ್ರಿಶ್ಚಿಯನ್ ಹೇಗೇನ್ಸ್* ಅವರು. ನಂತರ1675ರಲ್ಲಿ *ಕ್ಯಾಸಿನೊ* ಅವರು ಈ ಗ್ರಹದ ಉಂಗುರಗಳು ಬಿಡಿಬಿಡಿಯಾಗಿ ವೆ, ಮತ್ತು ಮಂಜುಗಡ್ಡೆ ಅಂತ ವಸ್ತುಗಳಿಂದ ನಿರ್ಮಾಣವಾಗಿದೆ ಎಂದು ಹೇಳಿದರು,
*ಶನಿ ಗ್ರಹ ಸೌರಮಂಡಲದಲ್ಲಿಯೇ ಅತಿಸುಂದರ ಗ್ರಹವಾಗಿದೆ*,
=====================
7) *ಯುರೇನಸ್ ಗ್ರಹ* (Urenus)
*ಸೂರ್ಯನಿಗೆ 7ನೇ ಸಮೀಪವಾದ ಗ್ರಹ*,
*ಯುರೇನಸ್ ಗ್ರಹ ಶುಕ್ರ ಗ್ರಹ ದಂತೆ ಗಡಿಯಾರ ದಿಕ್ಕಿಗೆ ಚಲಿಸುತ್ತದೆ*,
*ಯುರೇನಸ್ ಗ್ರಹದ ಉಪಗ್ರಹಗಳಿಗೆ ಶೇಕ್ಸ್ಪಿಯರ್ ನ ನಾಟಕದ ಪಾತ್ರದ ಹೆಸರನ್ನು ಈಡಲಾಗಿದೆ*.
*ಈ ಗ್ರಹವು ಗಾಡ ನೀಲಿ ಬಣ್ಣವನ್ನು ಹೊಂದಿದೆ ಕಾರಣ ಮಿಥೇನ್ ಅನಿಲ ಅಧಿಕವಾಗಿದೆ*,
ಯುರೇನಸ್ ಗ್ರಹದ ಪ್ರಮುಖ ಗ್ರಹ *ಟೈಟಾನಿಯಾ*
=====================
8) *ನೆಪ್ಚೂನ್ ಗ್ರಹ*(Neptune)
*ಸೂರ್ಯನಿಗೆ 8ನೇ ಸಮೀಪವಾದ ಗ್ರಹ*,
*ಈ ಗ್ರಹವು ಸೌರಮಂಡಲದಲ್ಲಿಯೇ ಅತ್ಯಂತ ತಂಪಾದ ಗ್ರಹವಾಗಿದೆ*,
*ನೆಪ್ಚೂನ್ ಗ್ರಹವು ಸೌರಮಂಡಲದಲ್ಲಿಯೇ ಅತಿ ಹೆಚ್ಚು ಪರಿಭ್ರಮಣ ಹೊಂದಿರುವ ಗ್ರಹವಾಗಿದೆ*, (165ವರ್ಷ )
*ಸೌರಮಂಡಲದಲ್ಲಿ ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ*,
ನೆಪ್ಚುನ್ ಗ್ರಹದ ಪ್ರಮುಖ ಉಪಗ್ರಹ *ಟ್ರೈಟಾನ್*
=====================
*ವಿಶೇಷ ಅಂಶಗಳು*
*🪐ಗ್ರಹಗಳ ಬಗ್ಗೆ ವಿಶೇಷತೆ*🪐
1) ಸೌರವ್ಯೂಹದಲ್ಲಿ ಅತಿ ತಂಪಾದ ಗ್ರಹ= *ನೆಪ್ಚೂನ್*
2) ಸೌರವ್ಯೂಹದಲ್ಲಿ ಅತಿ ಉಷ್ಣ ಗ್ರಹ= *ಶುಕ್ರ*
3) ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ= *ಗುರು ಗ್ರಹ*
4) ಸೌರವ್ಯೂಹದಲ್ಲಿ ಅತಿ ಚಿಕ್ಕ ಗ್ರಹ= *ಬುಧ*
5) ಅತಿ ಹೆಚ್ಚು ಉಪಗ್ರಹ ಹೊಂದಿರುವ ಗ್ರಹ= *ಗುರು ಗ್ರಹ*
6) ಸೌರವ್ಯೂಹದಲ್ಲಿ ಅತಿದೂರದ ಗ್ರಹ= *ನೆಪ್ಚೂನ್*
7) ಸೌರವ್ಯೂಹದಲ್ಲಿ ಅತಿ ಸಮೀಪದ ಗ್ರಹ= *ಬುಧ*
(ಸೂರ್ಯನಿಗೆ ಸಮೀಪದ ಗ್ರಹ *ಬುಧ*)
8) ಅತಿ ಹೆಚ್ಚು ಪರಿಭ್ರಮಣ ಹೊಂದಿರುವ ಗ್ರಹ= *ನೆಪ್ಚೂನ್*
9) ಅತಿ ಸುಂದರವಾದ ಮತ್ತು ಹೆಚ್ಚು ಬಳೆಗಳನ್ನು ಹೊಂದಿರುವ ಗ್ರಹ= *ಶನಿ ಗ್ರಹ*
10) ಅತಿವೇಗವಾಗಿ ಅಕ್ಷ ಬ್ರಮಿಸುವ ಗ್ರಹ= *ಗುರು ಗ್ರಹ*
11) ಅತಿ ನಿಧಾನವಾಗಿ ಅಕ್ಷರ ಮಿಸುವ ಗ್ರಹ= *ಶುಕ್ರ*
12) ಭೂಮಿಗೆ ಹತ್ತಿರವಿರುವ ಗ್ರಹ= *ಶುಕ್ರ ಗ್ರಹ*
13) ಅತಿ ಹೆಚ್ಚು ಕೃತಕ ಉಪಗ್ರಹ ಹೊಂದಿರುವ ಗ್ರಹ= *ಭೂಮಿ*
14) ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಗ್ರಹ= *ಭೂಮಿ*
15) ಅತಿ ದೊಡ್ಡ ಉಪಗ್ರಹ ಹೊಂದಿರುವ ಗ್ರಹ= *ಗುರು ಗ್ರಹ*
16) ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಉಪಗ್ರಹ ಹೊಂದಿರುವ ಗ್ರಹ= *ಗುರು ಗ್ರಹ*
17) ಅತಿ ಹೆಚ್ಚು ಉಷ್ಣ ಮತ್ತು ಶೀತ ಹೊಂದಿರುವ ಗ್ರಹ= *ಬುಧ*
18) ಅತಿ ಎತ್ತರವಾದ ಅಗ್ನಿಪರ್ವತ ಹೊಂದಿರುವ ಗ್ರಹ *ಮಂಗಳ*
19) ಅತಿ ವೇಗದ ಮಾರುತಗಳನ್ನು ಹೊಂದಿರುವ ಗ್ರಹ= *ಶನಿ*
20) ಇತ್ತೀಚಿಗೆ 2006ರಲ್ಲಿ ಗ್ರಹದ ಸ್ಥಾನವನ್ನು ಕಳೆದುಕೊಂಡ ಗ್ರಹ= *ಪ್ಲೋಟೋ ಗ್ರಹ*
21) ಆರಂಭದಲ್ಲಿ ಜಾರ್ಜ್ ನಕ್ಷತ್ರವೆಂದು ಕರೆದು ಪಟ್ಟ ಗ್ರಹ= *ಯುರೇನೆಸ್*
22) ಬೆಳ್ಳಿಚುಕ್ಕಿ ಮುಂಜಾನೆ ನಕ್ಷತ್ರ ಎಂದು ಕರೆಯಲ್ಪಡುವ ಗ್ರಹ = *ಶುಕ್ರ*
23) ಕೆಂಪು ಗ್ರಹ. ಕುಜ, ಅಂಗಾರಕ, ಎಂದು ಕರೆಯಲ್ಪಡುವ ಗ್ರಹ *ಮಂಗಳ*
24) ಅತಿ ಕಡಿಮೆ ಅಕ್ಷಬ್ರಮನ ಹೊಂದಿರುವ ಗ್ರಹ= *ಗುರು*
25) ಭೂಮಿಯ ಸೋದರಿ ಗ್ರಹ ಎಂದು ಕರೆಯಲ್ಪಡುವ ಗ್ರಹ *ಶುಕ್ರ*
26) ಚಂದ್ರನು *ಉಪ ವರ್ಗಕ್ಕೆ* ಸೇರುತ್ತಾನೆ(PC-2010)
No comments:
Post a Comment