Thursday, 25 February 2021

Brief information about India

  MahitiVedike Com       Thursday, 25 February 2021
)ಭಾರತದ ಪ್ರಭಾವಶಾಲಿ ರಾಷ್ಟ್ರವಾಗಿ ವಿಶ್ವಮಾನ್ಯ ಪಡೆದಿದೆ ಎಂದು ಹೇಗೆ ಹೇಳುವಿರಿ. 
ಭಾರತವು ವಿಫುಲ ಜನಸಂಖ್ಯೆ, ಅಪಾರ ಪ್ರಾಕೃತಿಕ ಸಂಪತ್ತು, ಪರಿಣಿತ ಬೌದ್ಧಿಕ ಮತ್ತು ಔದ್ಯೋಗಿಕ ಸಾಮರ್ಥ್ಯ,ಬಲಾಢ್ಯ ಸೈನಿಕ ಬಲ ಮುಂತಾದವುಗಳನ್ನು ಹೊಂದಿದ್ದು, ಪ್ರಭಾವಶಾಲಿ ರಾಷ್ಟ್ರವಾಗಿ ವಿಶ್ವಮಾನ್ಯ ಪಡೆದಿದೆ. ಪ್ರಸ್ತುತ ಜಗತ್ತಿನ ಕೆಲವೇ ರಾಷ್ಟ್ರಗಳು ತಮ್ಮದೇ ಆದ ನಿರ್ಧಿಷ್ಟ ಹಾಗೂ ಉತ್ತಮ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದು ಅವುಗಳಲ್ಲಿ ಭಾರತವು ಒಂದಾಗಿದೆ.

2)ಸಾರ್ವಭೌಮ ರಾಷ್ಟ್ರ ಎಂದರೇನು?
ಯಾವ ರಾಷ್ಟ್ರ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವುದೋ ಅಂತಹ ರಾಷ್ಟ್ರವನ್ನು ಸಾರ್ವಭೌಮರಾಷ್ಟ್ರ ಎನ್ನುವರು.

3)ನಮ್ಮ ವಿದೇಶಾಂಗ ನೀತಿಯನ್ನು ಪ್ರಭಾವಿಸುವ ಅಂಶಗಳನ್ನು ಹೆಸರಿಸಿ.
ನಮ್ಮ ವಿದೇಶಾಂಗ ನೀತಿಯು ಹಲವಾರು ಅಂಶಗಳಿಂದ ಪ್ರಭಾವಿಸಲ್ಪಟ್ಟಿದೆ. ಅವುಗಳೆಂದರೆ ರಾಷ್ಟ್ರೀಯ ಹಿತಾಸಕ್ತಿ, ರಾಜಕೀಯ ಪರಿಸ್ಥಿತಿ, ಆರ್ಥಿಕ ವ್ಯವಸ್ಥೆ, ರಕ್ಷಣಾ ಸಾಮರ್ಥ್ಯ, ಜನಾಭಿಪ್ರಾಯ, ಅಂತರರಾಷ್ಟ್ರೀಯ ಪರಿಸರ ಮುಂತಾದವು.

4)ಅಲಿಪ್ತ ನೀತಿ ಎಂದರೇನು?
ದ್ವಿತೀಯ ಮಹಾಯುದ್ಧದ ಬಳಿಕ ವಿಶ್ವವು ಎರಡು ಶಕ್ತಿ ಬಣಗಳಾಗಿ ವಿಭಾಗವಾಗಿತ್ತು. ಅಮೆರಿಕಾದ ಸಂಯುಕ್ತ ಸಂಸ್ಥಾನದ ನೇತೃತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಸೋವಿಯತ್ ರಷ್ಯಾದ ನೇತೃತ್ವದ ಕಮ್ಯುನಿಸ್ಟ್ ರಾಷ್ಟ್ರಗಳು     ಎಂದು ಎರಡು ಬಣಗಳಾಗಿದ್ದವು. ಈ ಎರಡೂ ಬಣಗಳ ನಡುವೆ ಶೀತಲ ಸಮರ ಪ್ರಾರಂಭವಾಯಿತು. ಇಂತಹ ಸಂದರ್ಭದಲ್ಲಿ ಭಾರತ ಯಾವ ಬಣಕ್ಕೂ ಸೇರದೇ ತಟಸ್ಥವಾಗಿ ಉಳಿಯಿತು. ಈ ತಟಸ್ಥ ನೀತಿಗೆ ಅಲಿಪ್ತ ನೀತಿ ಎನ್ನುವರು.

5)ವಸಾಹತು ಶಾಹಿತ್ವ ಎಂದರೇನು?
ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾದೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದಕ್ಕೆ ವಸಾಹತು ಶಾಹಿತ್ವ ಎನ್ನುವರು.

6)ವರ್ಣಭೇದ ನೀತಿ ಎಂದರೇನು?
ಒಂದು ವರ್ಣದ ಜನಸಮುದಾಯ ಇನ್ನೊಂದು ವರ್ಣದ ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ ಅಥವಾ ವಿರೋಧಿಸುವ ನೀತಿಗೆ ವರ್ಣಭೇದ ನೀತಿ ಎನ್ನುವರು.

7)ನಿಶ್ಶಸ್ತ್ರೀಕರಣ ಎಂದರೇನು?
ಕೆಲವು ನಿರ್ಧಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದಕ್ಕೆ ನಿಶ್ಶಸ್ತ್ರೀಕರಣ ಎನ್ನುವರು 
logoblog

Thanks for reading Brief information about India

Previous
« Prev Post

No comments:

Post a Comment