Friday 5 February 2021

A brief account of the Vijayanagara Empire

  MahitiVedike Com       Friday 5 February 2021

 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*

 ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)

 ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ*

ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ)

 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ*

ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020) 

 ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು  ಸೋದರ= *ಹರಿಹರ ಬುಕ್ಕ. ಮಾರಪ್ಪ. ಮುದ್ದಪ್ಪ. ಮತ್ತು ಕಂಪನ*

 ಈ ಐವರ ಸಹೋದರರ ತಂದೆ= *ಸಂಗಮ*

 ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು*
(DAR-2020)

 ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ*

 ಹಂಪಿಯ ಬಳಿ ಹರಿಯುವ  ನದಿ= *ತುಂಗಭದ್ರ ನದಿ*

 ವಿಜಯನಗರದ ಕುಲದೇವರು= *ವಿರುಪಾಕ್ಷ*

 ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ*

 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*

 ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*

 ಸಂಗಮ ವಂಶದ ಮೊದಲ ದೊರೆ= *ಹರಿಹರ*

 ಹರಿಹರಣ ರಾಜಧಾನಿ= *ಆನೆಗೊಂದಿ*

 ಒಂದನೇ ಬುಕ್ಕರಾಯನ ಇನ್ನೊಂದು  ಹೆಸರು= *ತ್ರಯಂಬಕ ರಾಯ*

 "ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*

 ಗಂಗಾದೇವಿ *ಒಂದನೇ ಬುಕ್ಕರಾಯನನ್ನು* "ಕರ್ನಾಟಕ ಕುಲ ಕೀರ್ತಿ" ಎಂದು ವರ್ಣಿಸಿದ್ದಾಳೆ.

 ಬುಕ್ಕರಾಯನ ಸೈನಿಕ ಸಾಧನೆಗಳನ್ನು ತಿಳಿಸುವ ಗ್ರಂಥ= *ಮಧುರಾವಿಜಯಂ*
 (ಈ ಗ್ರಂಥವನ್ನು ಬರೆದವರು ಬುಕ್ಕರಾಯನ ಪತ್ನಿ *ಗಂಗಾಂಬಿಕೆ*)

 ವೇದಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ವಿಜಯನಗರ ಅರಸ= *ಎರಡನೇ ಹರಿಹರ*

 ಸಂಗಮ ವಂಶದ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧ ಅರಸ= *ಎರಡನೇ ದೇವರಾಯ*

 ಎರಡನೇ ದೇವರಾಯ ಅಧಿಕಾರಕ್ಕೆ ಬಂದ ವರ್ಷ= *1424*

 ಎರಡನೇ ದೇವರಾಯನಿಗೆ ಇದ್ದ ಇನ್ನೊಂದು ಹೆಸರು= *ಪ್ರೌಢದೇವರಾಯ*

 ಎರಡನೇ ದೇವರಾಯನಿಗೆ ಇದ್ದರು ಬಿರುದು= *ಗಜಬೇಂಟೆಕಾರ*

 ಮುಸ್ಲಿಮರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ವಿಜಯನಗರದ ಅರಸ= *ಎರಡನೇ ದೇವರಾಯ*

 ಕೇರಳ ಶ್ರೀಲಂಕಾ ಅರಸರಿಂದ  ಕಪ್ಪು ಕಾಣಿಕೆ ವಸೂಲು ಮಾಡಿದ ಪ್ರೌಢದೇವರಾಯನ ಸೇನಾಧಿಪತಿ= *ಲಕ್ಷ್ಮಣ ದಂಡೇಶ*

 ಪ್ರೌಢ ದೇವರಾಯನ ಆಸ್ಥಾನಕ್ಕೆ ಭೇಟಿನೀಡಿದ ಪರ್ಶಿಯಾದ ರಾಯಭಾರಿ= *ಅಬ್ದುಲ್ ರಜಾಕ್*

 ತನ್ನ ರಾಜಧಾನಿಯಲ್ಲಿ ಮಸೀದಿ ನಿರ್ಮಿಸಿದ ವಿಜಯನಗರ ಅರಸ= *ಎರಡನೇ ದೇವರಾಯ*

 ಎರಡನೇ ದೇವರಾಯನ ಆಸ್ಥಾನದಲ್ಲಿದ್ದ ಪ್ರಮುಖ ಕವಿಗಳು= *ಶ್ರೀನಾಥ, ಡಿಂಡಿಮ. ಚಾಮರಸ, ಕುಮಾರವ್ಯಾಸ, ಲಕ್ಷ್ಮಣ ದಂಡೇಶ*

 ಎರಡನೇ ದೇವರಾಯನ ಕಾಲಕ್ಕೆ ಪುನರ್ಜೀವನ ಕಂಡ ಧರ್ಮ= *ವೀರಶೈವ ಧರ್ಮ*

 ಎರಡನೇ ದೇವರಾಯ ಮರಣ ಹೊಂದಿದ ವರ್ಷ= *1446*

 "ದಕ್ಷಿಣ ಸಮುದ್ರಾಪತಿ" ಎಂಬ ಬಿರುದು ಹೊಂದಿದ್ದ ಎರಡನೇ ದೇವರಾಯನ ಸೇನಾಧಿಪತಿ= *ಲಕ್ಷ್ಮಣ ದಂಡೇಶ*

 "ಮಹಾನಾಟಕ ಸುಧಾನಿಧಿ" ಎಂಬ ಕೃತಿಯನ್ನು ರಚಿಸಿದ ಅರಸು= *ಪ್ರೌಢದೇವರಾಯ*

 ಸಂಗಮ ವಂಶದ ಆಳ್ವಿಕೆಯನ್ನು ಕೊನೆಗೊಳಿಸಿದ ವಿಜಯನಗರ ರಾಜವಂಶ= *ಸಾಳ್ವ ವಂಶ*

 ಸಾಳುವ ವಂಶ ಸ್ಥಾಪನೆ= *1485-1503*

 ಸಾಳುವ ಎಂದರೆ= *ಗರುಡ ಎಂಬರ್ಥವಿದೆ*

 ಸಾಳುವ ವಂಶದ ಪ್ರಮುಖ ಅರಸರು= *ನರಸಿಂಹ, ತಿಮ್ಮ. ಎರಡನೇ ನರಸಿಂಹ*

 ತುಳುವ ಮನೆತನ= *1503-1565*

ತುಳುವ ಮನೆತನ ಸ್ಥಾಪಿಸಿದವರು= *ವೀರ ನರಸಿಂಹ*

 ತುಳುವ ವಂಶದ ಪ್ರಸಿದ್ಧ ದೊರೆ= *ಶ್ರೀಕೃಷ್ಣದೇವರಾಯ*

 ಶ್ರೀ ಕೃಷ್ಣದೇವರಾಯ ಅಧಿಕಾರಕ್ಕೆ ಬಂದ ವರ್ಷ= *1509*

 ಶ್ರೀಕೃಷ್ಣದೇವರಾಯನೊಂದಿಗೆ  ಹೋರಾಡಿ ಪ್ರಾಣ ಕಳೆದುಕೊಂಡ ಬಿಜಾಪುರ ಸುಲ್ತಾನ= *ಯೂಸುಫ್ ಆದಿಲ್ ಶಾ*(1510ರಲ್ಲಿ )

 ಶ್ರೀಕೃಷ್ಣದೇವರಾಯ ನಿಂದ ಸೋತ ಉಮ್ಮತ್ತೂರಿನ ಪಾಳೆಗಾರ= *ಗಂಗರಾಜ*
( ಇವನಿಂದ ವಶಪಡಿಸಿಕೊಂಡ ಕೋಟೆ *ಶಿವನಸಮುದ್ರದ  ಕೋಟೆ*)

 ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಗಳನ್ನು ಗೆದ್ದ ಶ್ರೀಕೃಷ್ಣದೇವರಾಯ ಅವುಗಳನ್ನು *ಕೆಂಪೇಗೌಡನಿಗೆ ವಹಿಸಿದನು*

 ಗೋಲ್ಕೊಂಡದ ಕುತುಬ್ ಶಾನನ್ನು ಸೋಲಿಸಿ ಕಪ್ಪು ವಸೂಲು ಮಾಡಿದ ಕೃಷ್ಣದೇವರಾಯನ ಸೇನಾನಿ= *ತಿಮ್ಮರಸ*

 ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ಸಹಾಯ ನೀಡಿದ ವಿಜಯನಗರ ಅರಸ= *ಶ್ರೀಕೃಷ್ಣದೇವರಾಯ*

 ಕಲ್ಲಿಕೋಟೆ ಗೆಲ್ಲಲು ಪೋರ್ಚುಗೀಸರಿಗೆ ನೆರವಾದ ಅರಸ = *ಶ್ರೀಕೃಷ್ಣದೇವರಾಯ*

 ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರ ಅರಸ  *ಶ್ರೀಕೃಷ್ಣದೇವರಾಯ*

 ರಾಯಚೂರು ಕದನದಲ್ಲಿ(1520) ಕೃಷ್ಣದೇವರಾಯನಿಂದ ಸೋತ ಸುಲ್ತಾನ= *ಬಿಜಾಪುರದ ಇಸ್ಮೈಲ್ ಷಾ*

 ಶ್ರೀ ಕೃಷ್ಣದೇವರಾಯ ಉದಯಗಿರಿ ಕೋಟೆ ಗೆದ್ದ  ವರ್ಷ= *1513*

 ಕಳಿಂಗದ ರಾಜಧಾನಿ ಕಟಕ್ ನ್ನು ಗೆದ್ದ ವರ್ಷ= *1518*

 ಕೃಷ್ಣದೇವರಾಯನಿಂದ ಸೋತ ಒರಿಸ್ಸಾದ ಗಜಪತಿ= *ಪ್ರತಾಪರುದ್ರ*
( ಕೃಷ್ಣದೇವರಾಯನು ಪ್ರತಾಪ ರುದ್ರನ ಮಗಳನ್ನು ಮದುವೆಯಾದನು)

 ದಕ್ಷಿಣದ ಚೋಳ ಪಾಂಡ್ಯರನ್ನು ಸೋಲಿಸಿದ ಕೃಷ್ಣದೇವರಾಯನ ಸೇನಾಧಿಪತಿ= *ವಿಜಯಪ್ಪ*

 ಕೃಷ್ಣದೇವರಾಯನಿಂದ ಸೋತ ಬಹುಮನಿ ರಾಜ್ಯದ ಪ್ರಧಾನಿ= *ಕಾಸಿಂ ಬರಿದ*

 ಅಷ್ಟದಿಗ್ಗಜರು ಎಂಬ ಎಂಟು ಜನರಿಗೆ ಆಶ್ರಯ ನೀಡಿದ ದೊರೆ= *ಶ್ರೀಕೃಷ್ಣದೇವರಾಯ*

 ಭಕ್ತಿ ಸಂತರಾದ *ವಲ್ಲಭಾಚಾರ್ಯ ಮತ್ತು ಚೈತನ್ಯ* ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿದರು.

 ಅಮುಕ್ತಮೌಲ್ಯ ಎಂಬ "ತೆಲುಗು" ಕೃತಿಯನ್ನು ಬರೆದವರು= *ಶ್ರೀಕೃಷ್ಣದೇವರಾಯ*

 "ಜಾಂಬವತಿ ಕಲ್ಯಾಣ" ಎಂಬ ಸಂಸ್ಕೃತ ನಾಟಕವನ್ನು ಬರೆದವರು= *ಶ್ರೀಕೃಷ್ಣದೇವರಾಯ*

 "ಕನ್ನಡ ರಾಜ್ಯ ರಮಾರಮಣಿ"  ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ= *ಶ್ರೀಕೃಷ್ಣದೇವರಾಯ*

 ಕೃಷ್ಣದೇವರಾಯರ ಗುರುಗಳಾಗಿದ್ದವರು= *ವ್ಯಾಸರಾಯರು*

 "ಆಂಧ್ರ ಕವಿ ಪಿತಾಮಹ" ಎಂಬ ಬಿರುದು ಹೊಂದಿದ ತೆಲುಗು ಕವಿ= *ಅಲ್ಲಸಾನಿ ಪೆದ್ದಣ್ಣ*

 ವಿಜಯನಗರ ಸಾಮ್ರಾಜ್ಯ ಕಾಲದ ಕುಮಾರವ್ಯಾಸನೆಂದು ಹೆಸರಾದ ಕವಿ= *ನಂದಿ ತಿಮ್ಮಣ್ಣ*

 ಕುಮಾರರಾಮನ ಕಥೆಯನ್ನು ಬರೆದವರು= *ನಂಜುಂಡ ಕವಿ*

 ಶ್ರೀಕೃಷ್ಣದೇವರಾಯನು ತನ್ನ ಉದಯಗಿರಿ ವಿಜಯದ ನೆನಪಿಗಾಗಿ ನಿರ್ಮಿಸಿದ ದೇವಾಲಯ= *ಕೃಷ್ಣಸ್ವಾಮಿ ದೇವಾಲಯ*

 ತುಳುವ ವಂಶದ ಕೊನೆಯ ದೊರೆ= *ಸದಾಶಿವರಾಯ*

 ರಾಮರಾಯ ವಿಜಯನಗರದ ದೊರೆಯಾಗಿ ನೇರ ಆಳ್ವಿಕೆ ಪ್ರಾರಂಭವಾಗಿದ್ದು= *1551- 1565*

 ವಿಜಯನಗರದ ಪತನಕ್ಕೆ ಕಾರಣವಾದ ಯುದ್ಧ= *ತಾಳಿಕೋಟಿ ಯುದ್ಧ*( ರಕ್ಕಸತಂಗಡಿ ಯುದ್ಧ)(1565 ಜನವರಿ 23 ಮಂಗಳವಾರ ದಂದು  ನಡೆಯಿತು)

 ರಾಮರಾಯನ ಯಾವ ನೀತಿ ತಾಳಿಕೋಟೆ ಯುದ್ಧಕ್ಕೆ ಪ್ರಮುಖ ಕಾರಣವಾಯಿತು= *ವಿದೇಶಾಂಗ ನೀತಿ*

  *ತಾಳಿಕೋಟೆ ಯುದ್ಧದ* ಬಗ್ಗೆ ಸಂಕ್ಷಿಪ್ತ ಮಾಹಿತಿ

 ವಿಜಯನಗರ ಸಾಮ್ರಾಜ್ಯದಿಂದ ಭಾಗವಹಿಸಿದವರು, 

1) *ಅಳಿಯ ರಾಮರಾಯ,* 
2) *ತಿರುಮಲರಾಯ*, 
3) *ವೆಂಕಟಾದ್ರಿ*

 ವಿಜಯನಗರ ಸಾಮ್ರಾಜ್ಯ ವಿರುದ್ಧ ನಾಲ್ಕು "ಷಾಹಿ  ಮನೆತನಗಳು"

1) *ಬಿಜಾಪುರದ ಒಂದನೇ ಅಲಿ ಆದಿಲ್ ಷಾ*

2) *ಅಹಮದ್ ನಗರದ ಉಸೇನ್ ನಿಜಂಷಾಹಿ*

3) *ಗೋಲ್ಕೊಂಡದ ಇಬ್ರಾಹಿಂ ಕುತುಬ ಶಾಹಿ*

4) *ಬೀದರ್ ನ ಆಲಿ ಬರಿದ ಶಾಹಿ*.

 ತಾಳಿಕೋಟಿ ಕದನದಲ್ಲಿ ಭಾಗವಹಿಸಿದ ರಾಜಮನೆತನ
*ಬಿರಾರ್ ನ್ ಇಮಾದ ಶಾಹಿ*( ತುಘಲಕ ಖಾನ್)

 ಅರವೀಡು ಮನೆತನ= *1542-1646*
 ಸ್ಥಾಪಕ= *ತಿರುಮಲರಾಯ*
 ರಾಜಧಾನಿಗಳು= *ಪೆನುಗೊಂಡ, ಚಂದ್ರಗಿರಿ, ವೆಲ್ಲೂರು,* 

ವಿಜಯನಗರದ ಕೊನೆಯ ಅರಸ= *ಮೂರನೇ ಶ್ರೀ ರಂಗರಾಯ*

 ಮೂರನೇ ಶ್ರೀರಂಗರಾಯನಿಗೆ ಆಶ್ರಯ ನೀಡಿದ ಕೆಳದಿ ಅರಸ= *ಶಿವಪ್ಪ ನಾಯಕ*

ವಿಜಯನಗರ ದೊರೆಗಳ ಕಾಲದಲ್ಲಿ ವಸೂಲಿ ಮಾಡುತ್ತಿದ್ದ ಕಂದಾಯ ಪ್ರಮಾಣ= *1/6 ಭಾಗ*

 ವಿಜಯನಗರ ಅರಸರು ಆಚರಿಸುತ್ತಿದ್ದ ಪ್ರಮುಖ ಹಬ್ಬಗಳು= *ಹೋಳಿ, ದೀಪಾವಳಿ ಮಹಾನವಮಿ,*

 ಹಂಪಿಯ ಮಹಾನವಮಿ ದಿಬ್ಬವನ್ನು ನಿರ್ಮಿಸಿದ ರಾಜ್ಯ= *ಶ್ರೀಕೃಷ್ಣದೇವರಾಯ*

 ವಿಜಯನಗರ ದೊರೆಗಳ ಕಾಲದಲ್ಲಿ ವಜ್ರ ಮುಂತಾದ ಅಮೂಲ್ಯ ರತ್ನಗಳು ಅಂತರಾಷ್ಟ್ರೀಯ ಮರಾಟ ಕೇಂದ್ರವಾಗಿದ್ದ ಸ್ಥಳ= *ರಾಜಧಾನಿ ವಿಜಯನಗರ*

ವಿಜಯನಗರ ದೊರೆಗಳ ಕಾಲದಲ್ಲಿದ್ದ ಪ್ರಮುಖ ಬಂಗಾರದ ನಾಣ್ಯ= *ವರಹ*

 ವಿಜಯನಗರದ ಪ್ರಮುಖ ರೇವುಪಟ್ಟಣಗಳು= *ಭಟ್ಕಳ ಹೊನ್ನವರ್ ಮಂಗಳೂರು*, 

 ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಎಂಬ ಕೃತಿ ರಚಿಸಿದ ವಿದ್ಯಾರಣ್ಯರ ಸಹೋದರ= *ಸಾಯಣಾಚಾರ್ಯ*( ಕೆಲವೊಂದು ಅಥರ್ಸ್ ಬುಕ್ಕಿನಲ್ಲಿ ವಿದ್ಯಾರಣ್ಯ ಗುರುಗಳೇ ರಚಿಸಿದ್ದಾರೆ ಎಂದು ಕೊಡಲಾಗಿದೆ, )

 ಶೈವರ ಅಜಂತಾ ಎಂದು ಹೆಸರಾಗಿದ್ದ ಸ್ಥಳ= *ಲೇಪಾಕ್ಷಿ*

 ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪ ಎಂದು ವರ್ಣಿಸಲ್ಪಡುವ ವಾಸ್ತುಶಿಲ್ಪ= *ವಿಜಯನಗರದ ವಾಸ್ತುಶಿಲ್ಪ*

 ವಿದ್ಯಾರಣ್ಯರಿಂದ ರಚಿತವಾದ ಸಂಗೀತಕ್ಕೆ ಸಂಬಂಧಿಸಿದ ಕೃತಿ= *ಸಂಗೀತ ಸಾರ*

 ಕರ್ನಾಟಕ ಸಂಗೀತ ಪಿತಾಮಹ= *ಪುರಂದರದಾಸರು*

 ವಿಜಯನಗರ ಮತ್ತು ಷಾಹಿ  ರಾಜ್ಯ ನಡುವಿನ ದ್ವೇಷಕ್ಕೆ ಕಾರಣ= *ಧರ್ಮ. ರಾಯಚೂರು ದೋ ಅಬ್ ಪಡೆಯುವ ಪ್ರಯತ್ನ*

1567ರಲ್ಲಿ ಹಂಪಿಗೆ ಭೇಟಿ ನೀಡಿದ ಇಟಲಿಯ ಪ್ರವಾಸಿ= *ಫ್ರೆಡರಿಕ್ ಸಿಜರ್*

 *ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರು*

1) "ನಿಕೋಲೋ ಕೊಂಟಿ"= *ಒಂದನೇ ದೇವರಾಯನ ಆಸ್ಥಾನಕ್ಕೆ 1421 ರಲ್ಲಿ ಭೇಟಿ ನೀಡಿದನು.*

2) "ಅಬ್ದುಲ್ ರಜಾಕ್"= ಇವನು *ಪರ್ಷಿಯಾದ ರಾಯಭಾರಿಯಾಗಿ* *"ಎರಡನೇ ದೇವರಾಯನ"* ಆಸ್ಥಾನಕ್ಕೆ ಬಂದನು, "ಇವನು ಈ ಭೂಮಿಯ ಮೇಲೆ ವಿಜಯನಗರ ದಂತಹ ನಗರದ ಬಗ್ಗೆ *ಕಣ್ಣುಗಳು ನೋಡಿಲ್ಲ ಹಾಗೂ ಕಿವಿಗಳು ಕೇಳಿಲ್ಲ, ನಗರವು ಏಳುಸುತ್ತಿನಕೋಟೆ ಯಿಂದ ಸುತ್ತುವರೆದಿದೆ ಎಂದು ವರ್ಣಿಸಿದ್ದಾನೆ,* 

3) ನಿಕಿಟಿನ್= *ಇವನು ರಷ್ಯಾದ ಪ್ರವಾಸಿ ಯಾಗಿದ್ದು ಬಹುಮನಿ ರಾಜಕ್ಕೆ ಬೇಟಿ ನೀಡಿದ*, 

4) ದೊರೆಟ್ ಬಾರ್ಬೋಸಾ= *ಇವನು ಪೋರ್ಚುಗೀಸರ ವಾಸಿಯಾಗಿದ್ದು, 1514 ರಲ್ಲಿ ವಿಜಯನಗರಕ್ಕೆ ಬಂದಿದ್ದು, ಹಂಪಿಯು ಮಾರುಕಟ್ಟೆಗಳು, ಮುತ್ತು ವಜ್ರ ರೇಷ್ಮೆ ಮುಂತಾದ ವಸ್ತುಗಳ ಮಾರಾಟದ ಕೇಂದ್ರಗಳಾಗಿವೆ ಎಂದನು*, 

5) ಡೋಮಿಂಗೋ ಪಯಾಸ್= *ಪೋರ್ಚುಗೀಸ್ ಪ್ರವಾಸಿ1520 ರಲ್ಲಿ ಕೃಷ್ಣದೇವರಾಯನ ಹೊಸತನಕ್ಕೆ ಬಂಧನು*

6) ಸೀಜರ್ ಪೆಡ್ರಿಕ್= *ಇಟಲಿಯ ಪ್ರವಾಸಿಗ*

7) *ನ್ಯೂನೀಚ್* = ಪೋರ್ಚುಗಲ್ ದೇಶ, ಇವನು *ಅಚ್ಚುತರಾಯ ಆಸ್ಥಾನಕ್ಕೆ 1535 ರಂದು ಭೇಟಿ ನೀಡಿದನು*, 

 *ವಿಜಯನಗರ ಕಾಲದ ಸಾಹಿತ್ಯ*

 *ಸಂಸ್ಕೃತ*
1) ಗಂಗಾದೇವಿ= *ವೀರ ಕಂಪರ್ ಆಯ ಚರಿತಂ, ಅಥವಾ ಮಧುರಾವಿಜಯಂ*

2) ವಿದ್ಯಾರಣ್ಯ= *ರಾಜ ಕಾಲನಿರ್ಣಯ*

3) ಶ್ರೀಕೃಷ್ಣದೇವರಾಯ= *ಜಾಂಬವತಿ ಕಲ್ಯಾಣ, ಉಷ ಪರಿನಯಂ,*

*ಕನ್ನಡ*
1) ಕುಮಾರವ್ಯಾಸ= ಕರ್ನಾಟಕ *ಕಥಾಮಂಜರಿ. ಅಥವಾ ಗದುಗಿನ ಭಾರತ*

2) ನಂಜುಂಡ ಕವಿ= *ಕುಮಾರರಾಮನ ಕಥೆ*

3) ಕನಕದಾಸ= ಮೋಹನತರಂಗಿಣಿ. *ನಳ ಚರಿತೆ, ಹರಿಭಕ್ತಿಸಾರ, ರಾಮಧ್ಯಾನ ಚರಿತ,*

4) ಪುರಂದರದಾಸರು= *ಕೀರ್ತನೆಗಳು* 

5) ರತ್ನಾಕರವರ್ಣಿ= *ಭರತೇಶವೈಭವ*

6) ಭೀಮಕವಿ= *ಬಸವಪುರಾಣ*

7) ನರಹರಿ= *ತೊರೆವ ರಾಮಾಯಣ*

8) ವಿರೂಪಾಕ್ಷ ಪಂಡಿತ= *ಚೆನ್ನಬಸವ ಪುರಾಣ*

 *ತೆಲುಗು*
1) ಕೃಷ್ಣದೇವರಾಯ= *ಅಮುಕ್ತಮೌಲ್ಯ*

2) ಅಲ್ಲಸನಿ ಪೆದ್ದನ್ನ= *ಮನುಚರಿತಮು*( ಇವನಿಗೆ ಆಂಧ್ರ ಕವಿತಾ ಪಿತಾಮಹ ಎಂದು ಕರೆಯುತ್ತಾರೆ)

3) ಶ್ರೀನಾಥ= *ಕಾಶಿ ಕಂದ*
=====================


 
logoblog

Thanks for reading A brief account of the Vijayanagara Empire

Previous
« Prev Post

No comments:

Post a Comment