Friday 16 September 2022

kCET 2022: List of Wrongly Submitted Education Certificate from 'KEA'

  MahitiVedike Com       Friday 16 September 2022

KCET 2022: 'ಕೆಇಎ'ಯಿಂದ ವ್ಯಾಸಂಗ ಪ್ರಮಾಣ ಪತ್ರ ತಪ್ಪಾಗಿ ಸಲ್ಲಿಸಿದವರ ಲಿಸ್ಟ್ ಬಿಡುಗಡೆ
KCET 2022: 'ಕೆಇಎ'ಯಿಂದ ವ್ಯಾಸಂಗ ಪ್ರಮಾಣ ಪತ್ರ ತಪ್ಪಾಗಿ ಸಲ್ಲಿಸಿದವರ ಲಿಸ್ಟ್ ಬಿಡುಗಡೆ
ಕರ್ನಾಟಕ ಪರಿಕ್ಷಾ ಪ್ರಾಧಿಕಾರ 2022ನೇ ಸಾಲಿನ ಸಿಇಟಿ ಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಸಿಇಟಿ ದಾಖಲಾತಿ ಪರಿಶೀಲನೆ ವೇಳೆ ಕೆಲವು ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಅಂತಹ ಅಭ್ಯರ್ಥಿಗಳ ಲಿಸ್ಟ್‌ನ್ನು ಕೆಇಎ ಬಿಡುಗಡೆ ಮಾಡಿದೆ. ಅದಲ್ಲದೆ ಈ ದಾಖಲೆಗಳನ್ನು ಸರಿಯಾಗಿ ಸಲ್ಲಿಸುವಂತೆ ಸಮಯವಕಾಶವನ್ನು ನೀಡಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯನ್ನು ಹೊರಡಿಸಿದ್ದು, ಕೆಲವು ಅಭ್ಯರ್ಥಿಗಳು ಪರಿಶೀಲನೆಗೆ ಒಳಪಡಿಸಿದ ವ್ಯಾಸಂಗ ಪ್ರಮಾಣ ಪತ್ರ ಅಥವಾ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ ಮತ್ತು ಗ್ರಾಮೀಣ ಪ್ರದೇಶ ಪ್ರಮಾಣ ಪತ್ರಗಳಲ್ಲಿ ವ್ಯತ್ಯಾಸವಿದ್ದು, ಅಂತಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸದರಿ ಅಭ್ಯರ್ಥಿಗಳು ಅವಶ್ಯವಿದ್ದಲ್ಲಿ ಪುನಃ ಬಿಇಓ ಕಚೇರಿಯಲ್ಲಿ ಮತ್ತೊಮ್ಮೆ ವ್ಯಾಸಂಗ ಪ್ರಮಾಣ ಪತ್ರ ಅಥವಾ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ ಮತ್ತು ಗ್ರಾಮೀಣ ಪ್ರದೇಶ ಪ್ರಮಾಣ ಪತ್ರಗಳನ್ನು ದಿನಾಂಕ 12-09-2022 ಮತ್ತು 13-09-2022 ರಂದು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದ ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯತ್ಯಾಸಗಳನ್ನು ಅಭ್ಯರ್ಥಿಗಳು ಸರಿಪಡಿಸಿಕೊಳ್ಳುವುದು ಹೇಗೆ?
  • ಅಭ್ಯರ್ಥಿಗಳು ಈ ಮೊದಲು ದಾಖಲೆಗಳನ್ನು ಪರಿಶೀಲಿಸಿದ ಬಿಇಒ ಕಚೇರಿಗೆ ಹೋಗಿ, ಮನವಿ ಪತ್ರವನ್ನು ಸಲ್ಲಿಸಿ.
  • ಬಿಇಒ ಕಚೇರಿಯಿಂದ ಪೋರ್ಟಲ್‌ ಮುಖಾಂತರ ಪ್ರಾಧಿಕಾರಕ್ಕೆ ಅಗತ್ಯ ತಿದ್ದುಪಡಿ ಮಾಡಲು ಕಳಿಸಲಾಗುತ್ತದೆ.
  • ನಂತರ ಅಭ್ಯರ್ಥಿಗಳು ವ್ಯಾಸಂಗ ಮಾಡಿದ ಸರಿಯಾದ ಶಾಲೆಯ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಮಾಡಿಸಬೇಕು.
  • ಒಂದು ವೇಳೆ ವ್ಯಾತ್ಯಾಸವಾಗಿರುವ ಶಾಲೆಯು ಬೇರೆ ಬಿಇಒ ವ್ಯಾಪ್ತಿಗೆ ಒಳಪಟ್ಟಲ್ಲಿ ಸಂಬಂಧಿಸಿದ ಆಯಾ ಬಿಇಒ ಕಚೇರಿಯಲ್ಲಿ ಪರಿಶೀಲನೆ ಮಾಡಬೇಕು.
  • ಇನ್ನೂ ಯುಜಿಸಿಇಟಿ-2022ರ ಅರ್ಜಿ ನಮೂನೆಯಲ್ಲಿ ಅರ್ಹತಾ ಕಂಡಿಕೆ 'ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಮ್‌, ಎನ್ ಮತ್ತು ಓ ಗಳನ್ನು ಕ್ಲೈಮ್‌ ಮಾಡಿರುವ ಅಭ್ಯಥಿಗಳ ದಾಖಲೆ ಪರಿಶೀಲನೆಯನ್ನು ಆಫ್‌ಲೈನ್‌ ಮೂಲಕ ದಿನಾಂಕ 14-09-2022 ರಿಂದ 16-09-2022 ರ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ನಡೆಸಲಾಗುವುದು.
  • ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ಸಮೇತ, ತಮ್ಮ ಅರ್ಹತಾ ಕಂಡಿಕೆಗನುಸಾರವಾಗಿ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಹಾಗೂ ಒಂದು ಸೆಟ್‌ ಜೆರಾಕ್ಸ್ ಪ್ರತಿಗಳನ್ನು ದಾಖಲಾತಿ ಪರಿಶೀಲನೆಗೆ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
  • ಆಫ್‌ಲೈನ್‌ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕ ಮತ್ತು ಶ್ರೇಣಿಯ ವಿವರ
    • 14-09-2022- 1ನೇ ರ್ಯಾಂಕ್ ನಿಂದ 35,000 ನೇ ರ್ಯಾಂಕ್ ವರೆಗೆ.
    • 15-09-2022 - 35,001 ನೇ ರ್ಯಾಂಕ್ ನಿಂದ 1,00,000 ನೇ ರ್ಯಾಂಕ್ ವರೆಗೆ.
    • 16-09-2022 - 1,00,001 ನೇ ರ್ಯಾಂಕ್ ನಿಂದ, ಕೊನೆಯ ರ್ಯಾಂಕ್ ವರೆಗೆ.
    ಈ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು, ದಿನಕ್ಕೆ ಮೂರು ಸೆಷೆನ್‌ನಲ್ಲಿ ಆಫ್‌ಲೈನ್‌ ಮೂಲಕ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ದಾಖಲಾತಿ ಪರಿಶೀಲನೆಗೆ ಹಾಜರಾಗುಂತೆ ಸೂಚನೆ ನೀಡಲಾಗಿದೆ.
  • ವ್ಯಾಸಂಗ ಪ್ರಮಾಣ ಪತ್ರಗಳಲ್ಲಿ ವ್ಯತ್ಯಾಸ ಕಂಡು ಬಂದು ಅಭ್ಯರ್ಥಿಗಳ ಪಟ್ಟಿ ಈ 'ಪಿಡಿಫ್‌'ನಲ್ಲಿದೆ.

logoblog

Thanks for reading kCET 2022: List of Wrongly Submitted Education Certificate from 'KEA'

Previous
« Prev Post

No comments:

Post a Comment