LIC ಪಾಲಿಸಿದಾರರಿಗೆ ಸಿಹಿಸುದ್ದಿ! ಆ ಶುಲ್ಕದಲ್ಲಿ ಭಾರೀ ರಿಯಾಯಿತಿ, ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ದೇಶದ ಮುಂಚೂಣಿಯಲ್ಲಿರುವ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ. ಪ್ರೀಮಿಯಂ ಪಾವತಿಸದ ಕಾರಣ ಸ್ಥಗಿತಗೊಂಡಿದ್ದ ಪಾಲಿಸಿಯ ನವೀಕರಣದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದ ಮುಂಚೂಣಿಯಲ್ಲಿರುವ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ. ಪ್ರೀಮಿಯಂ ಪಾವತಿಸದ ಕಾರಣ ಸ್ಥಗಿತಗೊಂಡಿದ್ದ ಪಾಲಿಸಿಯ ನವೀಕರಣದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಯಾ ಪಾಲಿಸಿಗಳನ್ನು ನವೀಕರಿಸಲು ಅವಕಾಶವನ್ನು ಒದಗಿಸುತ್ತಿದೆ ಎಂದು ಎಲ್ಐಸಿ ಬಹಿರಂಗಪಡಿಸಿದೆ. (ಸಾಂಕೇತಿಕ ಚಿತ್ರ)
ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು LIC ಸೂಚಿಸಿದೆ. ಇದಕ್ಕಾಗಿ ವಿಶೇಷ ಆಂದೋಲನ ನಡೆಸುತ್ತಿದೆ ಎಂದು ಎಲ್‌ಐಸಿ ತಿಳಿಸಿದೆ. ಈ ವಿಶೇಷ ಡ್ರೈವ್ ಆಗಸ್ಟ್ 17 ರಿಂದ ಅಕ್ಟೋಬರ್ 21 ರವರೆಗೆ ಲಭ್ಯವಿರುತ್ತದೆ. (ಸಾಂಕೇತಿಕ ಚಿತ್ರ)
ವಿಶೇಷ ಪುನರುಜ್ಜೀವನ ಅಭಿಯಾನ'ದಲ್ಲಿ, ಎಲ್ಲಾ ನಾನ್-ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್ (ಯುಲಿಪ್) ಪಾಲಿಸಿಗಳನ್ನು ರಿಯಾಯಿತಿ ವಿಳಂಬ ಶುಲ್ಕದಲ್ಲಿ ಮುಂದುವರಿಸಬಹುದು ಎಂದು ಎಲ್ಐಸಿ ಈ ಸಂದರ್ಭದಲ್ಲಿ ಬಹಿರಂಗಪಡಿಸಿದೆ. (ಸಾಂಕೇತಿಕ ಚಿತ್ರ)
ಪ್ರೀಮಿಯಂ ಮೊತ್ತವನ್ನು ಪಾವತಿಸದ ದಿನಾಂಕದಿಂದ ಐದು ವರ್ಷಗಳೊಳಗೆ ಪಾಲಿಸಿಗಳನ್ನು ನವೀಕರಿಸಬಹುದು ಎಂದು ಅದು ಹೇಳಿದೆ. (ಸಾಂಕೇತಿಕ ಚಿತ್ರ)
No comments:
Post a Comment