Tuesday, 13 September 2022

Crop damage compensation will soon be credited to these farmers: Bommai

  MahitiVedike Com       Tuesday, 13 September 2022
ಬೆಳೆ ಹಾನಿ ಪರಿಹಾರ ಶೀಘ್ರದಲ್ಲೇ ಈ ರೈತರ ಖಾತೆಗೆ ಬರಲಿದೆ: ಬೊಮ್ಮಾಯಿ

ಪ್ರೀಯ ರೈತರೇ ಪ್ರಕೃತಿಯ ವಿಕೋಪದ ಕಾರಣದಿಂದ ರೈತರು ಈಗಾಗಲೇ ಸಾಕಷ್ಟು ಬೆಳೆಗಳನ್ನು ನಾಶಪಡಿಸಿಕೊಂಡಿದ್ದಾರೆ, ಅದರಂತೆ ಸರ್ಕಾರವು ಕೂಡ ರೈತರಿಗೆ ಹಾನಿಯಾಗದಂತೆ ಹಾಗೂ ರೈತರ ಕಷ್ಟಗಳಿಗೆ ಪರಿಹಾರ ನೀಡಲು ಸರ್ಕಾರವು ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಜುಲೈ ಮತ್ತು ಅಗಸ್ಟ್ ಮೊದಲನೇ ವಾರದಲ್ಲಿ ಆದ ಬೆಳೆ ನಾಶದ ಪರಿಹಾರ ಪಾವತಿಗೆ ಕಂದಾಯ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸರ್ಕಾರವು ಈಗ ಬೆಳೆಹಾನಿ ಬಗ್ಗೆ ಸಂಪೂರ್ಣ ಸರ್ವೆ ನಡೆಸಿದ್ದು ರೈತರ ಹಿತದೃಷ್ಟಿಯಿಂದ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತೀದೆ. ರೈತರ ಖಾತೆಗೆ ಸೆಪ್ಟೆಂಬರ್ 12 ಕ್ಕೆ ಪರಿಹಾರ ಹಣ ಬಿಡುಗಡೆಯಾಗಲಿದೆ. ಹಾಗೂ ಸಂಪೂರ್ಣ ಸರ್ವೆ ಮಾಡಿದ ಮಾಹಿತಿ ಬೆಳೆ ಹಾನಿ ಸಮೀಕ್ಷೆ ಪೋರ್ಟಲ್ಲಿಗೆ ಎಂಟ್ರಿ ಆಗುತ್ತಿದೆ. ಜಂಟಿ ಸರ್ವೆ ಆಗಿದ್ದು ಈಗಾಗಲೇ 50% ಎಂಟ್ರಿ ಆಗಿದೆ. ಕಳೆದ ಬಾರಿ ಪರಿಹಾರ ಕೊಟ್ಟಿದ್ದೇವೆ ಸರಿಯಾಗಿ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಖಂಡಿತವಾಗಿ ರಾಜ್ಯದ ರೈತರಿಗೆ ನಿರಾಸೆ ಆಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಕಾರ್ಯ ನಡೆಸಿದೆ.

ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ರಾಜ್ಯದಲ್ಲಿರುವ ರೈತರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಮುಖ್ಯವಾಗಿ ಹೇಳಬೇಕೆಂದರೆ ದಾವಣಗೆರೆಯಲ್ಲಿ 16,000 ಹೆಕ್ಟರ್ ಹಾನಿಯಾಗಿದೆ. 8,000 ಹೆಕ್ಟರ್ ಎಂಟ್ರಿ ಆಗಿದೆ ಶೀಘ್ರದಲ್ಲಿ ಎಲ್ಲರಿಗೂ ಪರಿಹಾರ ನೀಡಲು ಸರ್ಕಾರ ಮುಂದಾಗಲಿದೆ ಎಂದು ಭರವಸೆ ನೀಡಿದರು. ಬೆಳೆ ಹಾನಿ ಪರಿಹಾರ ಒಂದು ತಿಂಗಳೊಳಗೆ ನೀಡುತ್ತಿದ್ದು 2,000 ಕೋಟಿ ರೂಗಳಿಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವ ಕೆಲಸ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಎಲ್ಲಿ ಮನೆಗಳಿಗೆ ನೀರು ನುಗ್ಗಿದೆಯೋ ಅವರಿಗೆ ಹತ್ತು ಸಾವಿರ ಪರಿಹಾರ ಹಾಗೂ ಹದಿನೈದು ದಿನಕ್ಕೆ ಆಗುವಷ್ಟು ಫುಡ್ ಕಿಟ್ ಕೊಡಲು ಸೂಚಿಸಲಾಗಿದೆ.

ಪರಿಹಾರ ಹಣದ ಬಗ್ಗೆ ಹೇಳಬೇಕೆಂದರೆ ಮಳೆ ಹಾನಿಗೆ ಒಳಗಾದ ರೈತರಿಗೆ ಒಣ ಬೇಸಾಯಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿ 13600 ರೂಪಾಯಿ, ನೀರಾವರಿ ಬೆಳೆಗಳಿಗೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿ 25,000 ರೂಪಾಯಿ, ತೋಟಗಾರಿಕಾ ಬೆಳೆಗಳಿಗೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿ 28000 ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. ಇದನ್ನು ಕಂದಾಯ ಇಲಾಖೆ ಮೂಲಕ ಸರ್ವೇ ಮಾಡಿದ ನಂತರ ಹಾನಿಗೊಳಗಾದ ಪ್ರತಿಶತ ಮೇಲೆ ಹಣವನ್ನು ವಿತರಣೆ ಮಾಡಲಾಗುತ್ತದೆ. ಹಣವನ್ನು ನೇರವಾಗಿ ರೈತರ ಖಾತೆಗೆ ಮಾಡಲಾಗುತ್ತದೆ.

ಸರ್ಕಾರವು ಬಹಳ ಚುರುಕಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಆದ ಬೆಳೆನಾಶದ ಬಗ್ಗೆ ಕೂಡಲೇ ಜಂಟಿ ಸರ್ವೆಯನ್ನು ಮಾಡಿ ದಾಖಲೆಗಳನ್ನು ಅಪಲೋಡ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಕಳೆದ 3 ದಿನದಿಂದ ಆಗಿರುವ ಹಾನಿಯ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರದ ಎರಡುಪಟ್ಟು ಹೆಚ್ಚಿಸಿ ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಒಣಬೇಸಾಯಕ್ಕೆ 13,600 ರೂ, ತೋಟಗಾರಿಕೆ ಬೆಳೆಗೆ 28,000 ರೂ. ನೀರಾವರಿಗೆ 25,000 ರೂ. ಪರಿಹಾರ ನೀಡಲಾಗುತ್ತಿದೆ. ಈ ರೀತಿ ಪರಿಹಾರ ಹಣದ ವಾಡಿಕೆ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಇದನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.


logoblog

Thanks for reading Crop damage compensation will soon be credited to these farmers: Bommai

Previous
« Prev Post

No comments:

Post a Comment