Saturday 24 September 2022

2017, 18th Grade Gazetted Probationers Final Selection List Released

  MahitiVedike Com       Saturday 24 September 2022
2017, 18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಬಿಡುಗಡೆ

KPSC Gazetted Probationers Final Selection List 2022: ಕೆಪಿಎಸ್‌ಸಿ'ಯು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ 106 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿಂದಂತೆ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಹಾಗೂ ಕಟ್‌ ಆಫ್‌ ಅಂಕಗಳನ್ನು ಬಿಡುಗಡೆ ಮಾಡಿದೆ.


ಕೆಪಿಎಸ್‌ಸಿ'ಯು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದ) 106 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗೂ ಸದರಿ ಹುದ್ದೆಗೆ ಅಂತಿಮ ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಲಾದ ವರ್ಗಾವಾರು ಕಟ್‌ಆಫ್‌ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ https://www.kpsc.kar.nic.in ನಲ್ಲಿ ಅಂತಿಮ ಆಯ್ಕೆಪಟ್ಟಿ, ಕಟ್‌ಆಫ್‌ ಅಂಕಗಳನ್ನು ಚೆಕ್‌ ಮಾಡಬಹುದು.

ಅಂತಿಮ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್, ಹೆಸರು, ಪೂರ್ಣ ವಿಳಾಸ, ಸ್ಪರ್ಧಾತ್ಮಕ ಪರೀಕ್ಷೆ ಅಂಕಗಳನ್ನು ನೀಡಲಾಗಿದೆ.

ಕೆಪಿಎಸ್‌ಸಿ ಕೆಎಎಸ್ ಅಂತಿಮ ಆಯ್ಕೆಪಟ್ಟಿ ಚೆಕ್‌ ಮಾಡುವುದು ಹೇಗೆ?

ಕೆಪಿಎಸ್‌ಸಿ ವೆಬ್‌ಸೈಟ್‌ https://www.kpsc.kar.nic.in/ ಗೆ ಭೇಟಿ ನೀಡಿ.

- ಓಪನ್ ಆದ ಪೇಜ್‌ನಲ್ಲಿ 'ಪಟ್ಟಿಗಳು >>ಆಯ್ಕೆಪಟ್ಟಿ >> ಅಂತಿಮ ಆಯ್ಕೆಪಟ್ಟಿ ಸೆಲೆಕ್ಟ್‌ ಮಾಡಿ ಕ್ಲಿಕ್ ಮಾಡಿ.

ನಂತರ ಓಪನ್ ಆದ ಪೇಜ್‌ನಲ್ಲಿ 'Gazetted Probationers 2017-18' ಎಂದಿರುವ ಲಿಂಕ್ ಕ್ಲಿಕ್ ಮಾಡಿ.

- ಅಂತಿಮ ಆಯ್ಕೆಪಟ್ಟಿ ಪ್ರಕಟವಾಗುತ್ತದೆ. ಚೆಕ್‌ ಮಾಡಿ.

ಡೌನ್‌ಲೋಡ್ ಮಾಡಿಕೊಂಡು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ವರ್ಗಾವಾರು ಆಯ್ಕೆಯಾದ (ಇಲಾಖಾವಾರು) ಕೊನೆ ಅಭ್ಯರ್ಥಿಗಳ ಕಟ್‌ಆಫ್‌ ಅಂಕಗಳನ್ನು ಚೆಕ್‌ ಮಾಡಲು ವೆಬ್‌ಸೈಟ್‌ https://www.kpsc.kar.nic.in/ ಗೆ ಭೇಟಿ ನೀಡಿ, 'ಕಟ್‌-ಆಫ್‌ ಅಂಕಗಳು' ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಓಪನ್ ಆಗುವ ಪುಟದಲ್ಲಿ 'Gazetted Probationers 2017-18' ಎಂದಿರುವ ಲಿಂಕ್ ಕ್ಲಿಕ್ ಮಾಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ.

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 31-01-2020 ರಲ್ಲಿ ಈ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ವರ್ಗಾವಾರು ಮೆರಿಟ್‌ ಆಧಾರದಲ್ಲಿ ಇತ್ತೀಚೆಗೆ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿ ಆಕ್ಷೇಪಣೆ ಆಹ್ವಾನಿಸಿತ್ತು. ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ ಅಂತಿಮ ಆಯ್ಕೆಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

106 ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 94 ಹುದ್ದೆಗಳು, ಹೈದೆರಾಬಾದ್ ಕರ್ನಾಟಕದ 12 ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.


logoblog

Thanks for reading 2017, 18th Grade Gazetted Probationers Final Selection List Released

Previous
« Prev Post

No comments:

Post a Comment