ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:
ಯಾರು ಅರ್ಹರು.?
ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!
ಹೇಗೆ ಆಯ್ಕೆ ಮಾಡುತ್ತಾರೆ.?
ಅರ್ಜಿ ಆಹ್ವಾನಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ / ಆನ್ ಲೈನ್ ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ.
ತರಬೇತಿ ಎಲ್ಲಿ ನೀಡುತ್ತಾರೆ.?
IAS ಗೆ ಚೆನೈ, ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕ ದ ನಗರಗಳಲ್ಲಿ.!! KAS / Banking / IBPS / SSC & Group-C ಪರೀಕ್ಷೆಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.!!
Free Coaching ಎಷ್ಟು ತಿಂಗಳು ಕೊಡ್ತಾರೆ.
IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.
ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?
IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-
Free Coaching ಜೊತೆಗೆ ಶಿಷ್ಯವೇತನ ಕೊಡ್ತಾರಾ.?
ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.
ಪರೀಕ್ಷೆ ಯಾವಾಗ ನಡೆಸುತ್ತಾರೆ.? ಕಳೆದ ವರ್ಷ ಯಾವಾಗ ನಡೆಸಿದ್ದರು.?
ಕಳೆದ ವರ್ಷ 31-10-2021ರಂದು ಪರೀಕ್ಷೆ ನಡೆಸಿದ್ದರು, ಈ ವರ್ಷ ಅಗಸ್ಟ್/ಸೆಪ್ಟೆಂಬರ್ ನಲ್ಲಿ ಅರ್ಜಿ ಆಹ್ವಾನಿಸಿ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ.!!
No comments:
Post a Comment