Thursday, 11 March 2021

The Badami Chalukyas and the Pallavi of Kanchi

  MahitiVedike Com       Thursday, 11 March 2021


ಬಾದಾಮಿ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು


ಬಾದಾಮಿಯ ಚಾಳುಕ್ಯರು (ಸಾಶ. 540 - 753)

 ಸಾ.ಶ. 6ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಮಹಾನ್ ಶಕ್ತಿಶಾಲಿ ರಾಜರುಗಳು ಆಳಿದರು.

 ಅವರೇ ಬಾದಾಮಿಯ ಚಾಳುಕ್ಯರು. 

ಕರ್ನಾಟಕದಲ್ಲಿ ತಮ್ಮ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿ ಸುಮಾರು ಎರಡು ಶತಮಾನಗಳ ಕಾಲ ಅವಿಚ್ಛಿನ್ನವಾಗಿ, ಅಪಾರ ವೈಭವದಿಂದ ರಾಜ್ಯಭಾರ ಮಾಡಿದರು.

ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಚಾಳುಕ್ಯ ರಾಜ ಮನೆತನವು ಭಾರತದ ಪ್ರಬಲ ರಾಜಮನೆತನಗಳಲ್ಲೊಂದು.

 ಚಾಳುಕ್ಯರ ಆಳ್ವಿಕೆ ಆರನೆಯ ಶತಮಾನದಿಂದ ಆರಂಭಗೊಂಡು ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಕೊನೆಗೊಂಡಿತು.

 ರಾಜಾ ಜಯಸಿಂಹನು ಈ ವಂಶದ ಸಂಸ್ಥಾಪಕನು. ಈ ರಾಜವಂಶದ ಅತ್ಯಂತ ಶಕ್ತಿಶಾಲಿ ಮತ್ತು ಹೆಸರಾಂತ ಚಕ್ರವರ್ತಿಯೆಂದರೆ ಇಮ್ಮಡಿ ಪುಲಿಕೇಶಿ.

 ಗಂಗರು, ಕದಂಬರು ಮತ್ತು ಅಳುಪರನ್ನು ಗೆದ್ದು, ಈತನು ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದನು. ದಕ್ಷಿಣ ದಖ್ಖನ್ನಿನಲ್ಲಿ ಪಲ್ಲವರು ತಮ್ಮ ವೈಭವ ಕಾಲದಲ್ಲಿದ್ದರು.

 ದೊರೆ ಮಹೇಂದ್ರವರ್ಮನು ಪುಲಿಕೇಶಿಯ ಪರಮಾಧಿಕಾರತ್ವವನ್ನು ಒಪ್ಪಿಕೊಳ್ಳದ ಕಾರಣ ಪುಲಿಕೇಶಿಯು ಆತನನ್ನು ಸೋಲಿಸಿದನು.

 ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ, ದಕ್ಷಿಣಾ ಪಥೇಶ್ವರ ತ್ರಿಸಾಗರಗಳಿಂದಾವೃತವಾದ ಪ್ರದೇಶದ ಅಧಿಪತಿ’ ಎಂಬ ಬಿರುದಾಂಕಿತನಾದನು. ಇಮ್ಮಡಿ ಪುಲಿಕೇಶಿಗೆ ತನ್ನ ಚಕ್ರಾಧಿಪತ್ಯವೆಲ್ಲವನ್ನೂ ಒಂದೇ ಕೇಂದ್ರದಿಂದ ಆಳಲು ಸಾಧ್ಯವಾಗಲಿಲ್ಲ.

 ಆದುದರಿಂದ ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನನ್ನು ವೆಂಗಿ ಮತ್ತು ಜಯಸಿಂಹನನ್ನು ಗುಜರಾತ್ ಪ್ರಾಂತ್ಯದ ಅಧಿಕಾರಿಗಳನ್ನಾಗಿ ನೇಮಿಸಿದನು. ಮುಂದಿನ ವರ್ಷಗಳಲ್ಲಿ ಇದು ವೆಂಗಿಯ ಚಾಳುಕ್ಯರು ಎನ್ನುವ ಹೆಸರಿನಲ್ಲಿ ಸುಮಾರು ಐದು ಶತಮಾನಗಳ ಕಾಲ ರಾಜ್ಯಭಾರ ನಡೆಸಿತು.

 ಹ್ಯೂಯೆನ್ತ್ಸಾಂಗನು ಚಾಳುಕ್ಯ ರಾಜಧಾನಿಗೆ ಭೇಟಿ ನೀಡಿದ್ದನು. ಇಮ್ಮಡಿ ಪುಲಿಕೇಶಿ ಮತ್ತು ಚಾಳುಕ್ಯ ರಾಜ್ಯದ ಬಗ್ಗೆ ವಿವರಣೆಗಳನ್ನು ನೀಡಿದ್ದಾನೆ. ದೊರೆಯು ನ್ಯಾಯವಾದಿ ಹಾಗೂ ಕರುಣಾಳುವಾಗಿದ್ದನು.

 ಸೈನ್ಯವು ಶಿಸ್ತಿನಿಂದ ಕೂಡಿದ್ದು, ಸೈನಿಕರು ಮರಣಕ್ಕೆ ಹೆದರದೆ ಮೈಮರೆತು ಕಾದಾಡುವ ಯೋಧರಾಗಿದ್ದರು. ಪ್ರಜೆಗಳು ಸತ್ಯಪ್ರಿಯರಾಗಿದ್ದರು.

 ಸಂತೋಷಚಿತ್ತರು, ಸ್ವಾಭಿಮಾನಿಗಳು, ಸಂಪದ್ಭರಿತರೂ, ಗೌರವ ಪ್ರಿಯರು ಮತ್ತು ರಾಜನಿಷ್ಠರಾಗಿದ್ದರು.

 ರಾಜನಲ್ಲಿ ಅತ್ಯಂತ ಗೌರವ, ಅಂತೆಯೇ ರಾಜನಿಗೆ ಪ್ರಜೆಗಳಲ್ಲಿ ಅಪಾರ ಪ್ರೀತಿ ಇದ್ದಿತು ಎಂದು ಬರೆದಿದ್ದಾನೆ.

 ವಿದೇಶಿ ದೊರೆಗಳೊಂದಿಗೂ ಕೂಡ ಸ್ನೇಹಮಯ ಸಂಬಂಧಗಳನ್ನು ಈತನು ಹೊಂದಿದ್ದನು. ಪರ್ಶಿಯನ್ ದೊರೆಯಾದ ಇಮ್ಮಡಿ ಖುಸ್ರುವಿನೊಡನೆ ರಾಯಭಾರಿ ಸಂಬಂಧಗಳನ್ನು ಹೊಂದಿದ್ದನೆಂದು ಅರಬ್ ಇತಿಹಾಸಕಾರರು ತಿಳಿಸುತ್ತಾರೆ.

 ಕೆಲವು ವರ್ಷಗಳ ನಂತರ ತನ್ನ ತಂದೆಯಾದ ಮಹೇಂದ್ರವರ್ಮನಿಗೆ ಉಂಟಾದ ಸೋಲಿಗೆ ಪಲ್ಲವರ ದೊರೆಯಾದ ಪ್ರಥಮ ನರಸಿಂಹವರ್ಮನು ಚಾಳುಕ್ಯರ ಮೇಲೆ ಸೇಡು ತೀರಿಸಿಕೊಂಡನು.

 ಚಾಳುಕ್ಯ ರಾಜ್ಯವನ್ನು ಆಕ್ರಮಿಸಿ ವಾತಾಪಿಯನ್ನು ವಶಪಡಿಸಿಕೊಂಡನು. ಚಾಲುಕ್ಯರ ಕಡೆಯ ದೊರೆ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರು ಈ ಸಾಮ್ರಾಜ್ಯವನ್ನು ಆಕ್ರಮಿಸಿದರು.

ಚಾಳುಕ್ಯರ ಕೊಡುಗೆಗಳು

 ಕನ್ನಡ ನಾಡು, ನುಡಿ, ಸಂಸ್ಕøತಿಗಳನ್ನು ಬೆಳೆಸಿ,ಪೋಷಿಸಿ, ರಕ್ಷಿಸಿ, ಧರ್ಮ, ಸಾಹಿತ್ಯ, ಕಲೆ, ವಾಸ್ತುಶಿಲ್ಪದಲ್ಲಿ ಅಗಾಧ ಕೊಡುಗೆ ನೀಡಿದವರು.

 ಈ ದೇಶಕ್ಕೆ ‘ಕರ್ನಾಟಕ’ ಎಂಬ ಹೆಸರು ಕೊಟ್ಟವರು ಇವರೇ. ಕರ್ನಾಟಕ ಚರಿತ್ರೆಯಲ್ಲಿ ಬಾದಾಮಿ ಚಾಳುಕ್ಯರ ಆಳ್ವಿಕೆ ಅತ್ಯಂತ ಶ್ರೇಷ್ಠವೂ ವೈಭವಯುಕ್ತವೂ ಆದ ಒಂದು ಯುಗ.

ಈ ಯುಗವು ಸೈನಿಕ ಕ್ಷೇತ್ರದಲ್ಲಿ ಅಲ್ಲದೆ ಕಲೆ ಮತ್ತು ಸಾಹಿತ್ಯ ರಂಗಗಳಲ್ಲಿಯೂ ಹಾಗೆಯೇ ಗಮನಾರ್ಹವಾದುದು. ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದರು.

 ರಾಜ ಸಕ್ರಿಯವಾಗಿ ಆಡಳಿತದಲ್ಲಿ ಭಾಗವಹಿಸುತ್ತಿದ್ದನು. ರಾಜ್ಯವನ್ನು ವಿಷಯ (ಜಿಲ್ಲೆ) ಎಂಬುದಾಗಿ ವಿಂಗಡಿಸಿ ವಿಷಯಾಧಿಪತಿಯು ನೋಡಿಕೊಳ್ಳುತ್ತಿದ್ದನು.

 ಗ್ರಾಮವು ಆಡಳಿತ ಘಟಕಗಳಲ್ಲಿ ಅತ್ಯಂತ ಚಿಕ್ಕದು. ಗ್ರಾಮ ಮುಖ್ಯಸ್ಥರು ಲೆಕ್ಕಪತ್ರಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದರು.

 ಚಾಳುಕ್ಯರು ಶೈವ, ವೈಷ್ಣವ, ಜೈನ ಮುಂತಾದ ಎಲ್ಲ ಪಂಥಗಳ ಸಂಪ್ರದಾಯಗಳನ್ನು ಪೆÇ್ರೀತ್ಸಾಹಿಸಿದರು. ಜೈನ ದೇವಾಲಯಗಳ ನಿರ್ಮಾಣಕ್ಕೆ ಇವರು ಪೆÇ್ರೀತ್ಸಾಹ ನೀಡಿದರು. ಬೌದ್ಧ ವಿಹಾರಗಳೂ ಕೂಡ ಪ್ರೋತ್ಸಾಹಸಲ್ಪಟ್ಟವು.

ಬಾದಾಮಿಯ ಚಾಳುಕ್ಯರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಹಾಗೂ ಸಂಸ್ಕøತ ಭಾಷೆಗಳು ಚೆನ್ನಾಗಿ ಬೆಳೆದವು. ಕನ್ನಡವು ಅವರ ದೇಶ ಭಾಷೆಯಾಗಿತ್ತು.

ಈ ಕಾಲದ ಕಾವ್ಯದಲ್ಲಿ ತ್ರಿಪದಿ ಶೈಲಿಯು ಬೆಳವಣಿಗೆಯಾಯಿತು. ಕನ್ನಡದಲ್ಲಿ ಕೃತಿಗಳು ಇಲ್ಲವಾದರೂ ಅನೇಕ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ.

 ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿರುವುದು ಕಂಡುಬರುತ್ತದೆ. 

 ಈ ಕಾಲದ ಸಂಸ್ಕøತ ವಿದ್ವಾಂಸರುಗಳೆಂದರೆ ರವಿಕೀರ್ತಿ, ವಿಜ್ಜಿಕ ಮತ್ತು ಅಕಳಂಕರು. ಎರಡನೇ ಪುಲಿಕೇಶಿಯ ಸೊಸೆಯಾದ ವಿಜ್ಜಿಕ ಎಂಬ ಕವಿಯತ್ರಿಯು ಬರೆದ ‘ಕೌಮುದೀಮಹೋತ್ಸವ’, ಶಿವಭಟ್ಟಾರಕನ ‘ಹರ ಪಾರ್ವತೀಯ’ ಮುಖ್ಯವಾದ ಸಂಸ್ಕøತ ನಾಟಕಗಳಾಗಿವೆ.

 ಬಾದಾಮಿಯ ಚಾಳುಕ್ಯರು ಮಹಾನ್ ನಿರ್ಮಾಪಕರು ಹಾಗೂ ಕಲಾ ಪ್ರೇಮಿಗಳೂ ಆಗಿದ್ದರು. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಸೊಗಸಾದ ಅತ್ಯುತ್ಕøಷ್ಟವಾದ ದೇವಾಲಯಗಳನ್ನು ನಿರ್ಮಿಸಿದರು.

 ಇವರು ‘ಚಾಳುಕ್ಯ ಶೈಲಿ’ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಭಾರತೀಯ ವಾಸ್ತುಶಿಲ್ಪದಲ್ಲಿ ಪ್ರಾರಂಭಿಸಿದರು. ಬಾದಾಮಿಯಲ್ಲಿರುವ ಶಿಲೆಯಲ್ಲಿ ಕೊರೆದ ಗುಹಾಂತರ ದೇವಾಲಯಗಳನ್ನು ಇವರು ನಿರ್ಮಿಸಿದರು.

 ಅನೇಕ ಕಲಾವಿದರು ಮತ್ತು ಶಿಲ್ಪಕಾರರಿಗೆ ಇವರು ಪ್ರೋತ್ಸಾಹ ನೀಡಿದರು. ಚಾಳುಕ್ಯ ಶೈಲಿಯ ಅತ್ಯುತ್ತಮ ದೇವಾಲಯಗಳು ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿವೆ.

 ದೇವಾಲಯ ವಾಸ್ತುಶಿಲ್ಪದ ತೊಟ್ಟಿಲುಗಳಲ್ಲಿ ಐಹೊಳೆಯು ಒಂದಾಗಿದೆ. ದೇವಾಲಯ ವಾಸ್ತುಶಿಲ್ಪದ ಕ್ರಮಸರಣಿಯ ವಿಕಾಸದಲ್ಲಿನ ಪ್ರಯೋಗಗಳನ್ನು ಇಲ್ಲಿ ನಡೆಸಲಾಯಿತು.

 ಈ ಶೈಲಿಯು ಪಟ್ಟದಕಲ್ಲಿನಲ್ಲಿ ಸಂಪೂರ್ಣ ವಿಕಾಸ ಹೊಂದಿತು. ಅಂತೆಯೇ ಅಲ್ಲಿ ಲೋಕೇಶ್ವರ (ವಿರೂಪಾಕ್ಷ) ಮತ್ತು ತ್ರೆ ೈಲೋಕೇಶ್ವರ (ಮಲ್ಲಿಕಾರ್ಜುನ) ಮುಂತಾದ ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು.

 ಬಾದಾಮಿಯ ಗುಹೆಗಳಲ್ಲಿರುವ ವಿಷ್ಣು, ವರಾಹ, ಹರಿಹರ, ಅರ್ಧನಾರೀಶ್ವರರ ಎತ್ತರದ ವಿಗ್ರಹಗಳು ಚಾಳುಕ್ಯರ ಕಲಾತ್ಮಕ ಸಾಧನೆಯ ಅತ್ಯುತ್ತಮ ಕುರುಹುಗಳಾಗಿವೆ.

 ಚಿತ್ರಕಲೆಗೂ ಇಲ್ಲಿ ಪ್ರೋತ್ಸಾಹ ಸಿಕ್ಕಿತು. ಈ ಕಾಲದ ಅಜಂತ ಕಲೆಯು ಲೋಕ ವಿಖ್ಯಾತವಾದುದು.

ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪ
1. ನಾಗರ ಶೈಲಿ

2. ವೇಸರ ಶೈಲಿ

3.ದ್ರಾವಿಡ್ ಶೈಲಿ

 ನಾಗರಶೈಲಿ ಉತ್ತರದಲ್ಲೂ, ವೇಸರ ಶೈಲಿಕರ್ನಾಟಕದಲ್ಲೂ,ದ್ರಾವಿಡ ಶೈಲಿ ದಕ್ಷಿಣದಲ್ಲೂ ಹೆಚ್ಚು ಪ್ರಚಲಿತವಾಗಿದ್ದವು. ದ್ರಾವಿಡಶೈಲಿಗೆ ಚೋಳರ ಮತ್ತು ಪಲ್ಲವರ ದೇವಾಲಯಗಳನ್ನುಉದಾಹರಿಸಬಹುದು. ಹಾಗೂ ಓರಿಸ್ಸಾದ ಭುವನೇಶದೇವಾಲಯ ಪುರಿಯ ಜಗನ್ನಾಥ ದೇವಾಲಯವುನಾಗರಶೈಲಿಯಲ್ಲಿದೆ.

 ಉತ್ತರದ ನಾಗರಶೈಲಿ ಮತ್ತು ದಕ್ಷಿಣದದ್ರಾವಿಡ ಶೈಲಿಗಳು ಕಲೆಯ ವೇಸರ ಶೈಲಿ ರೂಪುಗೊಂಡಿತು,ಇದು ಚಾಲುಕ್ಯರ ಕಾಲದಲ್ಲಿ ಹುಟ್ಟಿತು. ನಂತರ ಹೊಯ್ಸಳರಕಾಲದಲ್ಲಿ ಈ ಶೈಲಿ ಉನ್ನತ ಶಿಖರಕ್ಕೆ ಮುಟ್ಟಿತು.

 ಇದನ್ನು ಇತಿಹಾಸಕಾರರಾದ ಪರ್ಸಿಬ್ರೌನ್ ಭಾರತೀಯ ದೇಗುಲಗಳತೊಟ್ಟಿಲು ಎಂದು ಕರೆದಿದ್ದಾರೆ. ಬಾದಾಮಿಯ ಚಾಲುಕ್ಯರು,ಬಿಜಾಪುರ ಜಿಲ್ಲೆಯಲ್ಲಿ ಕೆಲವು ದೇವಾಲಯಗಳನ್ನುನಿರ್ಮಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು.

o ಬಾದಾಮಿಯಲ್ಲಿ ಗುಹಾಂತರ ದೇವಾಲಯ

o ಪಟ್ಟದಕಲ್ಲಿನಲ್ಲಿ ಶಿವ-ವಿಷ್ಣು (ಲಡಖಾನ್) ದೇವಾಲಯ (ನಾಗರಶೈಲಿಯಲ್ಲಿದೆ)

o ವಿರೂಪಾಕ್ಷ ಅಥವಾ ಲೋಕೇಶ್ವರದೇವಾಲಯ(ದ್ರಾವಿಡಶೈಲಿ)

o ಐಹೊಳೆಯಲ್ಲಿ ದುರ್ಗಾದೇವಾಲಯ ಇತ್ಯಾದಿ.

ಕಂಚಿಯ ಪಲ್ಲವರು (ಸಾ.ಶ. 350 - 895)

 ಪಲ್ಲವರು ತಮಿಳುನಾಡಿನ ಪ್ರಪ್ರಥಮ ರಾಜರುಗಳು. ದಕ್ಷಿಣ ಭಾರತವನ್ನು ಆಳಿದ ವಂಶಗಳಲ್ಲಿ ಇವರಿಗೆ ವಿಶೇಷ ಸ್ಥಾನವಿದೆ. ಸಾ.ಶ. 4ನೇ ಶತಮಾನದಿಂದ ಸಾ.ಶ. 9ನೇ ಶತಮಾನದವರೆಗೆ ಆಳಿದರು.

 ಪ್ರಾರಂಭದಲ್ಲಿ ಇವರು ಶಾತವಾಹನರ ಅಧಿಕಾರಿಗಳಾಗಿದ್ದರು. ಶಾತವಾಹನ ರಾಜ್ಯವು ಅವನತಿಯಾದಾಗ ಪಲ್ಲವರು ತಮ್ಮನ್ನು ತಾವೇ ಸ್ಥಳೀಯ ರಾಜರುಗಳೆಂದು ಘೋಷಿಸಿಕೊಂಡರು.

 ಶಿವಸ್ಕಂದವರ್ಮನು ಈ ಸಂತತಿಯ ಮೊದಲ ದೊರೆಯಾಗಿದ್ದನು.

 ಪಲ್ಲವರು ಮತ್ತು ಕದಂಬರು ನಿರಂತರ ಶತ್ರುತ್ವ ಹೊಂದಿದ್ದರು. ಆನಂತರ ಚಾಲುಕ್ಯ ವಂಶದ ಇಮ್ಮಡಿ ಪುಲಿಕೇಶಿಯು ಪಲ್ಲವರ ಮಹೇಂದ್ರವರ್ಮನನ್ನು ಸೋಲಿಸಿದನು.

 ಮುಂದೆ ಬಂದ ಪ್ರಥಮ ನರಸಿಂಹವರ್ಮನು ಪಲ್ಲವ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನು.

 ತನಗೆ ಚಾಲುಕ್ಯರ ಮೇಲಿದ್ದ ಸೇಡನ್ನು ತೀರಿಸಿಕೊಂಡು ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ವಾತಾಪಿಯನ್ನು ವಶಪಡಿಸಿಕೊಂಡನು. ಇದರಿಂದ ಈತನು ‘ಮಹಾಮಲ್ಲ’ ಮತ್ತು ‘ವಾತಾಪಿಕೊಂಡ’ ಎಂಬ ಬಿರುದುಗಳನ್ನು ಹೊಂದಿದ್ದನು.

 ಈತನ ಆಳ್ವಿಕೆಯ ಕಾಲದಲ್ಲಿ ಹ್ಯೂಯೆನ್ತ್ಸಾಂಗನು ಕಂಚಿಯನ್ನು ದರ್ಶಿಸಿದ್ದನು. ಕಂಚಿ ಬಳಿಯಲ್ಲಿನ ಸಮುದ್ರ ತೀರದಲ್ಲಿ ನರಸಿಂಹವರ್ಮನು ಒಂದು ನಗರವನ್ನು ನಿರ್ಮಿಸಿ, ಅದಕ್ಕೆ ‘ಮಹಾಬಲಿಪುರಂ’ ಎಂಬ ಹೆಸರನ್ನು ಇಟ್ಟನು.

 ಅನೇಕ ಏಕಶಿಲಾ ದೇವಾಲಯಗಳು ಈತನಿಂದ ನಿರ್ಮಾಣವಾದವು. ಅಪರಾಜಿತ ಪಲ್ಲವನ ಆಳ್ವಿಕೆಯ ಕಾಲದಲ್ಲಿ ಪಲ್ಲವ ಸಾಮ್ರಾಜ್ಯ ಚೋಳರ ಆದಿತ್ಯನಿಂದ ಕೊನೆಗೊಂಡಿತು.

ಪಲ್ಲವರ ಕೊಡುಗೆಗಳು

ತಮಿಳುನಾಡಿನಲ್ಲಿ ಆಡಳಿತವನ್ನು ವ್ಯವಸ್ಥೆಗೊಳಿಸಿದ್ದರು. ಸಾಹಿತ್ಯ, ಧರ್ಮ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಶಿಕ್ಷಣಗಳಲ್ಲಿ ಇವರ ಕಾಣಿಕೆಯು ಗಮನಾರ್ಹವಾದುದು.

 ವಾತಾಪಿಯಲ್ಲಿ ಚಾಲುಕ್ಯರೂ, ಕಂಚಿಯಲ್ಲಿ ಪಲ್ಲವರೂ ಆಳುತ್ತಿದ್ದ ಕಾಲವೇ ದಕ್ಷಿಣದಲ್ಲಿ ವೀರಯುಗ. ಇವರ ರಾಜ್ಯವು ಸದೃಢ, ಸುವ್ಯಸ್ಥಿತವಾಗಿದ್ದು, ಮಂತ್ರಿ ಮತ್ತು ಪ್ರಾಂತಾಧಿಕಾರಿಗಳಿದ್ದರು.

 ರಾಜ್ಯವನ್ನು ಮಂಡಲ, ನಾಡು, ಗ್ರಾಮಗಳಾಗಿ ವಿಭಾಗಿಸಿದ್ದರು. ಗ್ರಾಮಸಭೆಯು ಗ್ರಾಮದ ಸಮಸ್ಯೆಗಳನ್ನು ಗಮನಿಸುತ್ತಿದ್ದಿತು.

 ಗ್ರಾಮಭೋಜಕ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದನು. ಪಲ್ಲವರು ಸಂಸ್ಕøತ ಮತ್ತು ತಮಿಳು ಭಾಷೆಗಳೆರಡಕ್ಕೂ ಪ್ರೋತ್ಸಾಹ ನೀಡಿದರು.

 ಕಂಚಿಯು ಸಂಸ್ಕøತ ಸಾಹಿತ್ಯದ ಕೇಂದ್ರವಾಗಿತ್ತು. ಪಲ್ಲವರ ಆಸ್ಥಾನದಲ್ಲಿದ್ದ ಕವಿಗಳು ಭಾರವಿ (ಕಿರಾತಾರ್ಜುನೀಯ) ಹಾಗೂ ದಂಡಿ (ದಶಕುಮಾರ ಚರಿತ). ರಾಜ ಮಹೇಂದ್ರವರ್ಮನು ಸ್ವತಃ ‘ಮತ್ತ್ ವಿಲಾಸ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಹಾಗೂ ‘ಭಗವದುಜ್ಜುಕ’ ಗ್ರಂಥವನ್ನು ರಚಿಸಿದ್ದಾನೆ.

 ಪಲ್ಲವರು ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದರು. ಮೊದಲು ಪಲ್ಲವ ದೊರೆಗಳು ಬೌದ್ಧಮತೀಯರಾಗಿದ್ದರು. ನಳಂದ ವಿಶ್ವವಿದ್ಯಾನಿಲಯದ ಮಹಾನ್ ವಿದ್ವಾಂಸ ಧರ್ಮಪಾಲನು ಕಂಚಿಯಲ್ಲಿ ಜನಿಸಿದವನು.

 ಮಹೇಂದ್ರವರ್ಮನು ಜೈನ ಮತಾವಲಂಬಿಯಾದುದರಿಂದ ನಾಡಿನಲ್ಲಿ ಅನೇಕ ಜೈನರಿದ್ದರು. ಈ ಯುಗವು ಭಕ್ತಿ ಚಳುವಳಿಯ ಉದಯವನ್ನು ಕಂಡಿತು.

 ವೈದಿಕ ಧರ್ಮದ ಪುನರುಜ್ಜೀವನಕ್ಕೂ ಸಹಾಯ ಮಾಡಿತು. ತಮಿಳಿನಲ್ಲಿ ಶ್ಲೋಕಗಳು ರಚನೆಯಾದವು. ಇದೇ ತಮಿಳು ಸಾಹಿತ್ಯದ ನಿಧಿಯಾಗಿದೆ.

 ಪಲ್ಲವರು ಕಲೆ ಮತ್ತು ವಾಸ್ತುಶಿಲ್ಪದ ಪ್ರೇಮಿಗಳಾಗಿದ್ದರು. ತಮ್ಮ ರಾಜ್ಯದಲ್ಲಿ ಇವರು ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಈ ದೇವಾಲಯಗಳಲ್ಲಿ ಅತ್ಯುತ್ತಮ ಕಲಾಕೌಶಲತೆಯನ್ನು ಕಾಣಬಹುದು.

 ಪಲ್ಲವರ ವಾಸ್ತುಶಿಲ್ಪವನ್ನು ಕಲ್ಲಿನಲ್ಲಿ ಕೊರೆದು ಮಾಡಿದ ದೇವಾಲಯಗಳು ಮತ್ತು ರಚನಾ ವಿನ್ಯಾಸದ ದೇವಾಲಯಗಳು ಎಂಬುದಾಗಿ ವಿಂಗಡಿಸಬಹುದು.

 ಮಹಾಬಲಿಪುರದಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿದ ಅನೇಕ ದೇವಾಲಯಗಳನ್ನು ಕಾಣಬಹುದು. ಏಕಶಿಲೆಗಳಲ್ಲಿ ಅದ್ಭುತ ವಿಗ್ರಹಗಳನ್ನು ಕೆತ್ತಿ, ಬಿಡಿಸಲಾಗಿದೆ.

 ಇವುಗಳು ಮಹಾಭಾರತದ ಹಾಗೂ ಭಾಗವತದ ಕಥೆಗಳನ್ನು ಹೊಂದಿವೆ. ಇಲ್ಲಿನ ಪಂಚ ರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯಗಳಾಗಿವೆ.

ಅರ್ಜುನನ ತಪಸ್ಸು’ ಎನ್ನುವ ಕೆತ್ತನೆ ದೃಶ್ಯವು ಅತ್ಯುತ್ತಮ ಕಲಾಕೃತಿಯಾಗಿದೆ. ಕಂಚಿಯಲ್ಲಿನ ಕೈಲಾಸನಾಥ, ಏಕಾಂಬರನಾಥ ಮತ್ತು ವೈಕುಂಠ ಪೆರುಮಾಳರ ದೇವಾಲಯಗಳು, ಮಹಾಬಲಿಪುರದ ಕಡಲದಂಡೆಯ ದೇವಾಲಯ ಪ್ರಾಚೀನ ಭಾರತ ವಾಸ್ತುಶಿಲ್ಪದ ಅತ್ಯುತ್ತಮ ನಿದರ್ಶನಗಳಾಗಿವೆ.

 ದೇವಾಲಯಗಳು ಧಾರ್ಮಿಕ ಹಾಗೂ ಕಲಾತ್ಮಕ ಚಟುವಟಿಕೆಗಳ ಕೇಂದ್ರಗಳಾದವು. ದೇವಾಲಯದ ಅಂಗಳಗಳಲ್ಲಿ ಸಂಜೆ ಸಮಯದಲ್ಲಿ ಗ್ರಾಮೀಣ ಜನರು ಕಲೆತು ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು.

ವಿರಾಮ ವೇಳೆಯಲ್ಲಿ ಜನರು ಇಲ್ಲಿ ಸಭೆ ಸೇರುತ್ತಿದ್ದು, ಪುರಾಣ ಶ್ರವಣ ಅಥವಾ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಹೀಗಾಗಿ ದೇವಾಲಯಗಳು ಸಾಮಾಜಿಕ, ಶೈಕ್ಷಣಿಕ ಕೇಂದ್ರಗಳಾಗಿದ್ದವು.

ಪಲ್ಲವರು ಒಳ್ಳೆಯ ನೌಕಾಬಲವನ್ನು ಹೊಂದಿದ್ದರು. ಇಲ್ಲಿನ ವರ್ತಕರು ಮಲಯ, ಇಂಡೋನೇಷಿಯಾ ಹಾಗೂ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಡನೆ ವಾಣಿಜ್ಯ ಸಂಬಂಧಗಳನ್ನು ಹೊಂದಿದ್ದರು.

ಭಾರತೀಯ ಭಾಷೆ ಮತ, ಸಂಪ್ರದಾಯ, ಸಂಸ್ಕøತಿಗಳು ಆ ದೇಶಗಳಲ್ಲಿಯೂ ಪ್ರಭಾವ ಬೀರಿರುವುದನ್ನು ಕಾಣಬಹುದು.
logoblog

Thanks for reading The Badami Chalukyas and the Pallavi of Kanchi

Previous
« Prev Post

No comments:

Post a Comment