Monday 8 March 2021

Full information about the "Bagalkot" district today

  MahitiVedike Com       Monday 8 March 2021


 ಇವತ್ತು "ಬಾಗಲಕೋಟೆ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ 

 
ಬಾಗಲಕೋಟೆ ಜಿಲ್ಲೆಯ ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು

 ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು

 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು 

 ಜಿಲ್ಲೆಯ ಹನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ಮೇಗುತಿ ಎಂಬ ದೇವಾಲಯದಲ್ಲಿ ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿಯ 'ಐಹೊಳೆ ಶಾಸನ' ( ಸಂಸ್ಕೃತ ಭಾಷೆಯಲ್ಲಿ) ಇದೆ. ಈ ಶಾಸನವು 'ನರ್ಮದಾ ನದಿ' ಕದನಕ್ಕೆ ಸಂಬಂಧಿಸಿದೆ . ನರ್ಮದಾ ನದಿ ಕದನವು :- 'ಇಮ್ಮಡಿ ಪುಲಕೇಶಿ' ಮತ್ತು 'ಹರ್ಷವರ್ಧನ' ನಡುವೆ ನಡೆಯಿತು
 
 ಜಿಲ್ಲೆಯಲ್ಲಿ "ಕಪ್ಪೆ ಆರ್ಭಟ್ಟನ" ಶಾಸನವು ತ್ರಿಪದಿಯಲ್ಲಿದೆ ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ 
ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ , ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ.

 ಜಿಲ್ಲೆಯ "ಇಳಕಲ್" ಸ್ಥಳವು ಪಿಂಕ್ ಗ್ರಾನೆಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ

 ಮುಧೋಳ ತಾಲ್ಲೂಕಿನ ಹಗಲಿಗೆ ( ಊರಿ)ನಲ್ಲಿ 1857ರಲ್ಲಿ "ಬೇಡರ ಸಶಸ್ತ್ರ" ದಂಗೆ ನಡೆಯಿತು

 ಮುಧೋಳದಲ್ಲಿ ಹುಂಡ್ಸ್ ಎಂಬ ನಾಯಿಯ ತಳಿಯು ಪ್ರಸಿದ್ಧಿ ಮತ್ತು ಇಲ್ಲಿ ರನ್ನ ಉತ್ಸವ ನಡೆಯುತ್ತದೆ

 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಎಂಬ ಹಳ್ಳಿಯ ಹೆಸರಾಂತ ವ್ಯಕ್ತಿ ಬಿ.ಡಿ.ಜತ್ತಿ ಅಥವಾ "ಬಸಪ್ಪ ದಾನಪ್ಪ ಜತ್ತಿ"
> ಇವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಹಂಗಾಮಿ ರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಒಡಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

 ಈ ಜಿಲ್ಲೆಯ 'ನವನಗರ' ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ

 ಬಾಗಲಕೋಟೆ ಜಿಲ್ಲೆಯ ಬಾದಾಮಿಯು ಚಾಲುಕ್ಯರು ರಾಜಧಾನಿಯಾಗಿತ್ತು, ಇಲ್ಲಿ "ಚಾಲುಕ್ಯ ಉತ್ಸವ" ನಡೆಯುತ್ತದೆ

 ಈ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿ ದಂಡೆಗಳ ಮೇಲೆ "ಕೂಡಲಸಂಗಮ" ಇದೆ

 ಬಾದಾಮಿಯು ನವಶಿಲಾಯುಗದ ತಾಣವಾಗಿದ್ದು, ಪಟ್ಟದಕಲ್ಲಿನ ದೇವಾಲಯವು ಭಾರತದ ಸಂಸತ್ತಿನ( ಪಾರ್ಲಿಮೆಂಟ್) ಆಕಾರವನ್ನು ಹೊಂದಿದೆ.

 ಬಾದಾಮಿ ಹಳೆಯ ಹೆಸರು :- ವಾತಾಪಿ

 ಯಡಹಳ್ಳಿ ವನ್ಯಜೀವಿ ಧಾಮವು ಜಿಂಕಾರ ( ಇಂಡಿಯನ್ ಗೆಝೆಲ್ ) ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ. ಯಡಹಳ್ಳಿ ಚಿಂಕಾರ ವನ್ಯಧಾಮವಾಗಿ ರಾಜ್ಯ ಸರ್ಕಾರ 2015ರಲ್ಲಿ ಘೋಷಿಸಿತ್ತು 

 ಬಾಗಲಕೋಟೆ ಜಿಲ್ಲೆಯ "ಪಟ್ಟದಕಲ್ಲು" 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿದೆ

logoblog

Thanks for reading Full information about the "Bagalkot" district today

Previous
« Prev Post

No comments:

Post a Comment