Thursday 18 March 2021

Brief Information on Raichur District

  MahitiVedike Com       Thursday 18 March 2021


ರಾಯಚೂರು ಜಿಲ್ಲೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ

 
ರಾಯಚೂರು ಜಿಲ್ಲೆಯಲ್ಲಿ 2016ರಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.( ಅಧ್ಯಕ್ಷರು= "ಬರಗೂರು ರಾಮಚಂದ್ರಪ್ಪ")

 ರಾಯಚೂರು ಜಿಲ್ಲೆಯಲ್ಲಿ ಹಟ್ಟಿ ಚಿನ್ನದ ಗಣಿ ಇದೆ

 ರಾಯಚೂರು ಜಿಲ್ಲೆಯು ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಯಾಗಿದೆ

 ರಾಯಚೂರು ಜಿಲ್ಲೆಯು ದಾಸಸಾಹಿತ್ಯದ ತವರು ಜಿಲ್ಲೆಯಾಗಿದೆ, 

 ರಾಯಚೂರು ಜಿಲ್ಲೆಯಲ್ಲಿರುವ ಉಷ್ಣವಿದ್ಯುತ್ ಸ್ಥಾವರವು ಕರ್ನಾಟಕದ ಪ್ರಥಮ ಉಷ್ಣವಿದ್ಯುತ್ ಸ್ಥಾವರ ವಾಗಿದೆ,(1985 ರಲ್ಲಿ ಸ್ಥಾಪನೆ)

 ರಾಯಚೂರು ಜಿಲ್ಲೆಯಲ್ಲಿ ಮಸ್ಕಿ ಶಾಸನ ಕಂಡು ಬರುತ್ತದೆ, 

 ಈ ಮಸ್ಕಿ ಶಾಸನದಲ್ಲಿ ಮೌರ್ಯ ಸಾಮ್ರಾಜ್ಯದ ಅರಸನಾದ  ಅಶೋಕನ ಹೆಸರು ಕಂಡುಬರುತ್ತದೆ,

 ಈ ಮಸ್ಕಿ ಶಾಸನವನ್ನು
 ಸಿ ಬೇಡನ್ ಎಂಬ ವ್ಯಕ್ತಿ 1915ರಲ್ಲಿ ಪತ್ತೆಹಚ್ಚಿದನು. 
(TET-2020)

 ಕರ್ನಾಟಕದಲ್ಲಿ ಅತಿ ಹೆಚ್ಚು ಅಶೋಕನ ಶಾಸನಗಳು ದೊರಕಿದ್ದು ಮಸ್ಕಿಯಲ್ಲಿ ದೊರೆತಿವೆ, 

 ಅಶೋಕನ 14 ಶಾಸನಗಳು ಕರ್ನಾಟಕ ರಾಜ್ಯದಲ್ಲಿ ದೊರಕಿವೆ

 ರಾಯಚೂರು ಜಿಲ್ಲೆಯಲ್ಲಿ Yarmarus Thermal power station ಅನ್ನು  2016 ರಲ್ಲಿ ಸ್ಥಾಪಿಸಲಾಯಿತು,

 ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ನದಿಗೆ ಮಲ್ಲಾಪುರ ಜಲವಿದ್ಯುತ್ ಯೋಜನೆ ಕಂಡುಬರುತ್ತದೆ,  

 ವಿಜಯನಗರ ಸಾಮ್ರಾಜ್ಯವು 1336 ಏಪ್ರಿಲ್ 18ರಂದು ತುಂಗಭದ್ರಾನದಿಯ ದಂಡೆ ಮೇಲೆ ಸ್ಥಾಪಿಸಿದರು.(DAR-2020)

 ರಾಯಚೂರು ಜಿಲ್ಲೆಯಲ್ಲಿರುವ ಪಿಕ್ಲಿಹಾಳ್ ಎಂಬುವುದು ನವಶಿಲಾಯುಗದ ತಾಣವಾಗಿದೆ,  

 ರಾಯಚೂರು ಜಿಲ್ಲೆಯಲ್ಲಿ ಐ.ಐ.ಐ.ಟಿ ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ, 

 ರಾಯಚೂರು ಜಿಲ್ಲೆಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಿ ಅದಕ್ಕೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲು ಉದ್ದೇಶಿಸಲಾಗಿದೆ,

 ರಾಯಚೂರು ಜಿಲ್ಲೆಯಲ್ಲಿ ಕೋಣಗಲ್  ಎಂಬ ಯುದ್ಧಭೂಮಿ ಇದೆ, ಈ ಕೋಣಗಲ್  ಕದನವು ಕ್ರಿ.ಶ 1800 ರಲ್ಲಿ ದೊಂಡಿಯ ವಾಗ್ ಮತ್ತು ವೆಲ್ಲಸ್ಲಿ ಯವರ ಮದ್ಯ ನಡೆಯಿತು,  ( ಇದು ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಹೋರಾಟ ವಾಗಿದೆ,)

logoblog

Thanks for reading Brief Information on Raichur District

Previous
« Prev Post

No comments:

Post a Comment