ದಕ್ಷಿಣ ಕನ್ನಡ/ ಮಂಗಳೂರು ಜಿಲ್ಲೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ,
ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿದ ಜಿಲ್ಲೆಯಾಗಿದೆ,
ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುವ ಜಿಲ್ಲೆಯಾಗಿದೆ,
ದಕ್ಷಿಣ ಕನ್ನಡ ಜಿಲ್ಲೆಯ ನವ ಮಂಗಳೂರಿನಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಘಟಕ ಇದೆ,
ದಕ್ಷಿಣ ಕನ್ನಡ ಜಿಲ್ಲೆಯ ನವಮಂಗಳೂರು ಬಂದರು ಭಾರತದ 9ನೇ ಪ್ರಧಾನ ಬಂದರ ವಾಗಿದೆ,
ನವ ಮಂಗಳೂರು ಬಂದರು ಕರ್ನಾಟಕದ ಅತಿ ದೊಡ್ಡ ಬಂದರು,
ನವ ಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುತ್ತಾರೆ,
ನವ ಮಂಗಳೂರು ಬಂದರನ್ನು 1974 ಮೇ 4ರಂದು ಭಾರತದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಯವರು ಉದ್ಘಾಟಿಸಿದರು,
ಭಾರತದಲ್ಲಿ ಮೊಟ್ಟಮೊದಲು ಮೀನುಗಾರಿಕಾ ಕಾಲೇಜನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಯಿತು,
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವಿದೆ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತರಾದನೆ ಸಂಪ್ರದಾಯ ಕಂಡುಬರುತ್ತದೆ,
ದಕ್ಷಿಣ ಕನ್ನಡ ಜಿಲ್ಲೆಯು 1956 ಕ್ಕಿಂತ ಮುಂಚೆ ಮದ್ರಾಸ್ ಪ್ರಾಂತ್ಯವಾಗಿತ್ತು,
ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ಯಾಂಕುಗಳ ತವರು ಎಂದು ಕರೆಯುತ್ತಾರೆ,
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಸ್ಥಳದಲ್ಲಿ ಬಿಸಿ ನೀರಿನ ಬುಗ್ಗೆಗಳು ಕಂಡುಬಂದಿವೆ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ಇದೆ, ಅಲ್ಲಿ ಮೂಲದೈವ ಅಣ್ಣಪ್ಪಸ್ವಾಮಿ
ಧರ್ಮಸ್ಥಳವು ನೇತ್ರಾವತಿ ನದಿ ದಂಡೆ ಮೇಲೆ ಕಂಡುಬರುತ್ತದೆ,
ಎತ್ತಿನಹೊಳೆ ಯೋಜನೆಯ ನೇತ್ರಾವತಿ ನದಿಗೆ ಸಂಬಂಧಿಸಿದೆ,
ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ಡಿ, ವೀರೇಂದ್ರ ಹೆಗಡೆ,
ಧರ್ಮಸ್ಥಳದಲ್ಲಿ ಮಂಜೊಷ ವಸ್ತುಸಂಗ್ರಹಾಲಯ ಇದೆ
ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಸೋಲಿಸಿದಳು.
ಉಲ್ಲಾಳದ ರಾಣಿ ಅಬ್ಬಕ್ಕ ಚೌಟಾ ರಾಜಮನೆತನಕ್ಕೆ ಸಂಬಂಧಿಸಿದವಳು
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಎಂಬಲ್ಲಿ ಸಾವಿರ ಕಂಬಗಳ ಜೈನರ ಬಸದಿ ಇದೆ,
ಮೂಡಬಿದರಿ ಯನ್ನು *ಜೈನರ ಕಾಶಿ ಎಂದು ಕರೆಯುತ್ತಾರೆ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿದೆ,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುಭಾಷೆಯನ್ನು ಅತಿ ಹೆಚ್ಚು ಮಾತನಾಡುತ್ತಾರೆ ,
ಇತ್ತೀಚಿಗೆ ತುಳುಭಾಷೆಯನ್ನು ಸಂವಿಧಾನದ 8ನೇ ಅನುಸೂಚಿ ಗೆ ಸೇರಿಸಲು ಹೋರಾಟ ನಡೆಯುತ್ತಿದೆ,
ಮಂಗಳೂರಿನಲ್ಲಿ ರಾಷ್ಟ್ರೀಯ ಶಾಲೆಯನ್ನು ಕಾರ್ನಾಡ್ ಸದಾಶಿವ ರಾವ್ ಸ್ಥಾಪಿಸಿದರು,
ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ,
ಸ್ವಾತಂತ್ರ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯರವರು ಮಂಗಳೂರಿನವರು,
ಕೇಂದ್ರ ಸರ್ಕಾರವು ಭಾರತದ ಪ್ರಥಮ ಸ್ಮಾರ್ಟ್ ಆಫ್ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ ಮೊದಲ ಜಿಲ್ಲೆದಕ್ಷಿಣ ಕನ್ನಡ,
ಕರ್ನಾಟಕ ಬ್ಯಾಂಕಿನ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ,
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ= ಕಂಬಳ( "ಕೋಣವನ್ನು" ಸ್ಪರ್ಧೆಗೆ ಬಳಸುವರು)
ಮಂಗಳೂರು ಪೊಲೀಸ್ ಪಶ್ಚಿಮ ವಲಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಗೆ ಬಂಡಾಜೆ ಜಲಪಾತವು ಸೃಷ್ಟಿಯಾಗಿದೆ,
No comments:
Post a Comment