Wednesday, 24 March 2021

BIG NEWS: Changed CBSE 6th - 10th Class Learning Method

  MahitiVedike Com       Wednesday, 24 March 2021
Subject : Big News 
Subject Language : Kannada
Which Department : all
Place : Karnataka
Announcement Date : 25/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

BIG NEWS: ಬದಲಾಯ್ತು CBSE 6 - 10 ನೇ ತರಗತಿ ಕಲಿಕಾ ವಿಧಾನ, ವಿದ್ಯಾರ್ಥಿಗಳು, ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ


ಸಿಬಿಎಸ್‌ಇ ಇಂದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) - 2020 ರ ಆಧಾರದ ಮೇಲೆ 6-10 ತರಗತಿಗಳಿಗೆ ಸೂಚಿಸಲಾದ ಸಾಮರ್ಥ್ಯ-ಆಧಾರಿತ ಮೌಲ್ಯಮಾಪನ ವಿಧಾನ ಪ್ರಕಟಿಸಿದೆ.

ಅಸ್ತಿತ್ವದಲ್ಲಿರುವ ಲರ್ನಿಂಗ್ ಮಾದರಿಯನ್ನು ಮತ್ತು ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ಬದಲಾವಣೆ ಮಾಡಿದ್ದು, ಮಕ್ಕಳ ಸಾಮರ್ಥ್ಯ ಆಧಾರದ ಮೇಲೆ ಗಮನ ಕೇಂದ್ರೀಕರಿಸಲಾಗುವುದು.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೌಲ್ಯಮಾಪನ ಮುಖ್ಯವಾಗಿ ಇಂಗ್ಲಿಷ್ (ಓದುವಿಕೆ), ವಿಜ್ಞಾನ ಮತ್ತು ಗಣಿತ ಎಂಬ ಮೂರು ವಿಷಯಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಒಟ್ಟಾರೆ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಕಾರ್ಯಗತಗೊಳಿಸಲು ಕ್ರಮಕೈಗೊಂಡಿದ್ದು, ಪ್ರಶ್ನೆ ಪತ್ರಿಕೆಗಳು ಮತ್ತು ಮೌಲ್ಯಮಾಪನ ವಿಧಾನಗಳನ್ನು ಮೂರರಿಂದ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಬದಲಾಯಿಸಲಾಗುತ್ತದೆ.

ಮೊದಲ ಹಂತದಲ್ಲಿ ಆಯ್ಕೆಯಾದ ಕೇಂದ್ರ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಖಾಸಗಿ ಶಾಲೆಗಳು ಭಾಗವಹಿಸಲಿದ್ದು, 2024 ರ ವೇಳೆಗೆ ಭಾರತದ ಎಲ್ಲಾ 25 ಸಾವಿರ ಸಿಬಿಎಸ್‌ಇ ಶಾಲೆಗಳಲ್ಲಿ ಬದಲಾವಣೆ ತರಲಾಗುವುದು.

ಪ್ರಸ್ತುತ ಕಲಿಕಾ ವಿಧಾನ ಆಧಾರವಾಗಿಟ್ಟುಕೊಂಡು 40 ಮೌಲ್ಯಮಾಪನ ವಿನ್ಯಾಸಕರು, 180 ಪರೀಕ್ಷಾ ವಿಧಾನ ಬರಹಗಾರರು ಮತ್ತು 360 ಮಾಸ್ಟರ್ ಟ್ರೈನರ್ ಮಾರ್ಗದರ್ಶಕರಿಗೆ ವಿಧಾನ ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ. ಇವರು ಮಾದರಿ ಪ್ರಶ್ನೆ ಬ್ಯಾಂಕ್ ಮತ್ತು ಆದರ್ಶ ಪಾಠ ಯೋಜನೆಗಳ ಸಂಗ್ರಹದ ಬಗ್ಗೆ ತರಬೇತಿ ನೀಡಲಿದ್ದಾರೆ.

ಸಿಬಿಎಸ್‌ಇ ಪ್ರಕಾರ, ಈ ಯೋಜನೆಯು ನೇರವಾಗಿ 15 ಶಿಕ್ಷಣ ಮುಖಂಡರು, 2,000 ಶಾಲಾ ಪ್ರಾಂಶುಪಾಲರನ್ನು ಒಳಗೊಳ್ಳಲಿದೆ. 180 ಪರೀಕ್ಷಾ ವಿಧಾನ ಬರಹಗಾರರು, 360 ಮಾಸ್ಟರ್ ತರಬೇತುದಾರರು 2024 ರ ವೇಳೆಗೆ 2,000 ಜೆಎನ್‌ವಿ ಮತ್ತು ಕೆವಿ, 132,000 ಶಿಕ್ಷಕರು ಮತ್ತು 20 ಮಿಲಿಯನ್ ಕಲಿಯುವ ಮಕ್ಕಳನ್ನು ಒಳಗೊಂಡ 25,000 ಸಿಬಿಎಸ್‌ಇ ಶಾಲೆಗಳ ಮೇಲೆ ಪರಿಣಾಮ ಬೀರಲಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ -2020 ರಲ್ಲಿ ಶಿಫಾರಸು ಮಾಡಲಾದ ಬದಲಾವಣೆಗಳ ಬೋಧನೆ ಮತ್ತು ಅನುಷ್ಠಾನವನ್ನು ಸುಧಾರಿಸಲು ಸೂಚಿಸಲಾದ ವಿಧಾನ ಪರಿಚಯಿಸಲಾಗಿದೆ. ಜ್ಞಾನ ಪಾಲುದಾರ ಯುಕೆ ಆಲ್ಫಾಪ್ಲಸ್ ಬ್ರಿಟಿಷ್ ಕೌನ್ಸಿಲ್ ಜೊತೆಗೆ, ಭಾರತೀಯದಲ್ಲಿ ಪ್ರಸ್ತುತ ಕಲಿಕೆ ಮತ್ತು ಮೌಲ್ಯಮಾಪನ ಮಾದರಿಯನ್ನು ವಿಶ್ಲೇಷಿಸಿದ ನಂತರ ಈ ವಿಧಾನ(ಫ್ರೇಮ್) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.

 
logoblog

Thanks for reading BIG NEWS: Changed CBSE 6th - 10th Class Learning Method

Previous
« Prev Post

No comments:

Post a Comment