Monday 22 March 2021

6th to 8th Senior Primary School Teachers (B.Ed.) (GPSTR) Recruitment Competitive Exam 2018

  MahitiVedike Com       Monday 22 March 2021


6 ರಿಂದ 8 ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ(B.Ed.) (GPSTR ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ 2018 

ಸಂವಿಧಾನ 


 ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಜಾಗತೀಕರಣವನ್ನು ಘೋಷಿಸಿದ್ದು :
10 ನೇ ಡಿಸೆಂಬರ್ 1948

ನೀತಿ ಆಯೋಗ ಯಾವುದರ ಬದಲಾಗಿ ರಚನೆಗೊಂಡಿದೆ :
ಯೋಜನಾ ಆಯೋಗ 

 ಸಾಗರೋತ್ತರ ಭಾರತ ಪೌರತ್ವ ಪತ್ರವು ಒಂದು ವಿಷೇಶ ವೀಸಾ. ಇದನ್ನು ಹೊಂದಿರುವ ವ್ಯಕ್ತಿಗೆ :
ಭಾರತದ್ಲಲಿ ಆಸ್ತಿ ಹೊಂದುವ ಅವಕಾಶವಿರುತ್ತದೆ 

ಒಬ್ಬ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು :
62 ನೇ ವರ್ಷ

 ಭಾರತದ ಒಕ್ಕೂಟದಲ್ಲಿ ಪ್ರತ್ಯೇಕ ಸಂವಿಧಾನವನ್ನು ಹೊಂದಿರುವ ಪ್ರಾಂತ್ಯ :
ಜಮ್ಮು ಮತ್ತು ಕಾಶ್ಮೀರ 


ಇತಿಹಾಸ 


 1857ರ ಮಹಾದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದವರು :.
ವಿ. ಡಿ. ಸಾರ್ವಕರ್ 

1930 ರಲ್ಲಿ ಮಹಾತ್ಮಗಾಂಧೀಜಿಯವರು ಕಾನೂನು ಭಂಗ ಚಳುವಳಿಯನ್ನು ಪ್ರಾರಂಭಿಸಿದ್ದು ಇಲ್ಲಿಂದ :
ಪಚೌಲಿ 


ಸಾಮಾನ್ಯ ಜ್ಞಾನ 

 ಆಯುರ್ವೇದ ಶಾಸ್ತ್ರದ ಪಿತಾಮಹ ಯಾರು? 
ಚರಕ 

ಭಾರತ ರಾಷ್ತ್ರೀಯ ವರಮಾನವನ್ನು ಅಂದಾಜಿಸುವ ಕಾರ್ಯಭಾರವನ್ನು ನಿರ್ವಹಿಸುವುದು :
ಕೇಂದ್ರ ಅಂಕಿ -ಅಂಶ ಸಂಸ್ಥೆ (CSO)

 ಹಿಂದೂ ಮಹಾಸಾಗರವನ್ನು ಸುತ್ತುವರೆದಿರುವ ಒಟ್ಟು ದೇಶಗಳು 
67 ದೇಶಗಳು 

ಮೊಹರಂ ಕಾಲದಲ್ಲಿ ಮುಸಲ್ಮಾನರು ಹಾಡುವುದು :
ಸೋಜ್ ಕ್ವಾನಿ



 ಪ್ರಚಲಿತ

 ಮಾಜಿ ಗಗನಯಾತ್ರಿ ಬಿಲ್ ನೆಲ್ಸನ್‌ರನ್ನು ನಾಸಾ ಮುಖ್ಯಸ್ಥರನ್ನಾಗಿ ನೇಮಿಸಿದ ಜೋ ಬಿಡೆನ್!

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ನೂತನ ಮುಖ್ಯಸ್ಥರನ್ನಾಗಿ ಮಾಜಿ ಗಗನಯಾತ್ರಿ ಬಿಲ್ ನೆಲ್ಸನ್‌ರನ್ನು ನೇಮಿಸಿ, ಅಧ್ಯಕ್ಷ ಜೋ ಬಿಡೆನ್ ಆದೇಶ ಹೊರಡಿಸಿದ್ದಾರೆ.

ಫ್ಲೋರಿಡಾದ ಡೆಮಾಕ್ರೆಟಿಕ್ ಪಕ್ಷದಿಂದ ಮೂರು ಬಾರಿ ಸೆನೆಟರ್ ಆಗಿ ಆಯ್ಕೆಯಾಗಿರುವ ಬಿಲ್ ನೆಲ್ಸನ್, 1986ರಲ್ಲಿ ಬಾಹ್ಯಾಕಾಶ ಪ್ರಯಾಣ ಮಾಡಿದ ಗಗನಯಾತ್ರಿಯೂ ಹೌದು.

1986ರಲ್ಲಿ ನಾಸಾದ ಕೋಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ್ದ ಬಿಲ್ ನೆಲ್ಸನ್, ಪ್ರಸ್ತುತವಾಗಿ ನಾಸಾದ ಸಲಹಾ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಾಸಾ ತನ್ನ ಮಹತ್ವಕಾಂಕ್ಷಿ ಮಾನವಸಹಿತ ಚಂದ್ರಯಾನ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಲ್ ನೆಲ್ಸನ್ ನಾಸಾದ ಮುಖ್ಯಸ್ಥರಾಗುತ್ತಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಒಪ್ಪಿಗೆ ಪಡೆದಿದ್ದ ಚಂದ್ರನತ್ತ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಯನ್ನು ಮುಂದುವರೆಸಲು ಹಾಲಿ ಅಧ್ಯಕ್ಷ ಜೋ ಬಿಡೆನ್ ಕೂಡ ಒಪ್ಪಿಗೆ ನೀಡಿದ್ದಾರೆ.

ಸದ್ಯ ಬಿಲ್ ನೆಲ್ಸನ್ ಅವರನ್ನು ನಾಸಾ ಮುಖ್ಯಸ್ಥರಾಗಿ ನೇಮಿಸಿರುವ ಜೋ ಬಿಡೆನ್ ಆದೇಶಕ್ಕೆ ಯುಎಸ್ ಸೆನೆಟ್ ಅಂಕಿತ ನೀಡಬೇಕಿದೆ


 Update CA

 Samia Suluhu Hassan Sworn In As Tanzania’s First Woman President 
 
Nigeria’s Okonjo-Iweala Set To Become First Female Chief Of WTO 
 
Kaja Kallas To Become Estonia’s First Female Prime Minister

  ಪ್ರಚಲಿತ

ಬಲಿಷ್ಠ ಸೇನೆ: ಚೀನಾ ಮೊದಲು, ಭಾರತಕ್ಕೆ ನಾಲ್ಕನೇ ಸ್ಥಾನ

ಜಗತ್ತಿನಲ್ಲೇ ಚೀನಾ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ ಎಂದು ‘ಮಿಲಿಟರಿ ಡೈರೆಕ್ಟ್‌’ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ಅಧ್ಯಯನ ವರದಿ ತಿಳಿಸಿದೆ.

ಅಮೆರಿಕ ಸೇನೆಗಾಗಿಯೇ ಬಜೆಟ್‌ನಲ್ಲಿ ಅಪಾರ ಮೊತ್ತವನ್ನು ಮೀಸಲಿಟ್ಟಿದ್ದರೂ ಎರಡನೇ ಸ್ಥಾನದಲ್ಲಿದೆ. ರಷ್ಯಾ ಮೂರನೇ ಹಾಗೂ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ ಒಂಬತ್ತನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಬಜೆಟ್‌ನಲ್ಲಿನ ಮೊತ್ತ, ಕ್ರಿಯಾಶೀಲವಾಗಿರುವ ಸೇನಾ ಸಿಬ್ಬಂದಿ, ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಯ ಸಾಮರ್ಥ್ಯ ಪರಮಾಣು ಸಂಪನ್ಮೂಲಗಳು, ಸರಾಸರಿ ವೇತನ ಮತ್ತು ಉಪಕರಣಗಳ ತೂಕ ಮುಂತಾದ ಹಲವಾರು ಅಂಶಗಳನ್ನು ಪರಿಗಣಿಸಿ ‘ಮಿಲಿಟರಿ ಶಕ್ತಿ ಸೂಚ್ಯಂಕ’ ಸಿದ್ಧಪಡಿಸಲಾಗಿದೆ. ಈ ಸೂಚ್ಯಂಕದ ಅನ್ವಯ ರಾಷ್ಟ್ರಗಳಿಗೆ ಅಂಕಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಸೂಚ್ಯಂಕದ ಅನ್ವಯ ಚೀನಾ 100 ಅಂಕಗಳಿಗೆ 82 ಗಳಿಸಿದೆ. ಪ್ರತಿ ವರ್ಷ 732 ಶತಕೋಟಿ ಡಾಲರ್‌ (₹53.02 ಲಕ್ಷ ಕೋಟಿ) ಖರ್ಚು ಮಾಡುವ ಅಮೆರಿಕ, ಜಗತ್ತಿನಲ್ಲೇ ಮಿಲಿಟರಿಗಾಗಿ ಅತಿ ಹೆಚ್ಚು ವೆಚ್ಚ ಮಾಡುವ ದೇಶವಾಗಿದೆ. ಚೀನಾ 261 ಶತಕೋಟಿ ಡಾಲರ್‌ (₹18.90 ಲಕ್ಷ ಕೋಟಿ) ಮತ್ತು ಭಾರತ 71 ಶತಕೋಟಿ ಡಾಲರ್‌ (₹5.143 ಲಕ್ಷ ಕೋಟಿ)ವೆಚ್ಚ ಮಾಡುತ್ತದೆ.

ಒಂದು ವೇಳೆ ಸಂಘರ್ಷ ನಡೆಯಬಹುದು ಎಂದು ಭಾವಿಸಿಕೊಂಡರೆ, ಚೀನಾ ನೌಕಾಪಡೆ ಮೂಲಕ ಜಯಸಾಧಿಸುತ್ತದೆ. ಅಮೆರಿಕ ವಾಯು ಪಡೆಯ ಮೂಲಕ ಮತ್ತು ರಷ್ಯಾ ಭೂಸೇನೆ ಮೂಲಕ ಜಯ ಸಾಧಿಸುತ್ತವೆ.

ಅಮೆರಿಕ ಬಳಿ ಒಟ್ಟು 14,141 ‘ಏರ್‌ಶಿಪ್‌’ಗಳಿವೆ. ರಷ್ಯಾ ಬಳಿ 4,682 ಹಾಗೂ ಚೀನಾ ಬಳಿ 3,587 ‘ಏರ್‌ಶಿಪ್‌’ಗಳಿವೆ ಎಂದು ವರದಿ ವಿವರಿಸಿದೆ.

  ಈ ದಿನದ ವಿಶೇಷತೆ

 ವಿಶ್ವ ಜಲ ದಿನ
(World Water Day)

ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1993ರಲ್ಲಿ ಬ್ರೆಜಿಲ್‌ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು ಹಾಗೂ ಪ್ರತಿ ವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಪ್ರತಿವರ್ಷ ಒಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. 
 ಈ ವರ್ಷದ ಧ್ಯೇಯವಾಕ್ಯ
"Valuing Wate"
(ಜಲ ಮೌಲ್ಯವನ್ನು ಗೌರವಿಸುವುದು).

logoblog

Thanks for reading 6th to 8th Senior Primary School Teachers (B.Ed.) (GPSTR) Recruitment Competitive Exam 2018

Previous
« Prev Post

No comments:

Post a Comment