Saturday 27 February 2021

General knowledge

  MahitiVedike Com       Saturday 27 February 2021
ಸಾಮಾನ್ಯ ಜ್ಞಾನ 
👇👇👇👇👇

☘  ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
 - ಲೋಥಾಲ್ 

☘ ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು 
- ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್ 

☘ ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ 
-ತಾಮ್ರ 

☘ ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
 - ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು.

☘  ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿರುವ ಸಿಂಧೂ ನಾಗರಿಕತೆಯ ನಗರ
 - ಮೊಹೆಂಜೋದಾರೋ 

☘ ಪಾಕಿಸ್ತಾನದ ಪಂಜಾಬಿನ ಮಾಂಟೆಗೊಮರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ನೈರುತ್ಯಕ್ಕೆ ಸುಮಾರು 25 ಕಿ.ಮೀ. ದೂರದಲ್ಲಿರುವ ನಗರ 
- ಹರಪ್ಪಾ 

☘ ಕಾಲಿಬಂಗನ್ ನೆಲೆಯನ್ನು ಕಂಡುಹಿಡಿದ ವರ್ಷ 
 -1953

☘ ಗುಜರಾತ್‌ನ ಕಛ್ ಜಿಲ್ಲೆಯ ಬಚೌ ತಾಲೂಕಿನಲ್ಲಿರುವ ನಗರ 
- ದೊಲವೀರ 

☘ ದೋಲವೀರ ನಗರವನ್ನು ಶೋಧಿಸಿದವರು
 - ಡಾ ಜೆ ಪಿ ಜೋಷಿ

☘  2019-20 ನೇ ಸಾಲಿನ ರಣಜಿ ಟ್ರೋಫಿಯ ವಿಜೇತ ತಂಡ ? 
ಸೌರಾಷ್ಟ್ರ ತಂಡ 

☘ 2021 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಪ್ರಾಯೋಜಕತ್ವ ವಹಿಸಲಿರುವ ಸಂಸ್ಥೆ ?
-  ಐನಾಕ್ಸ್ ಗ್ರೂಪ್ 

☘ ಪ್ರವಾಹ ಮೂನ್ಸೂಚನೆ ಉಪಕ್ರಮಗಳಿಗಾಗಿ ಭಾರತದ ಕೇಂದ್ರ ಜಲ ಆಯೋಗದೊಂದಿಗೆ ಕೈಜೋಡಿಸಿದ ಕಂಪನಿ
-  ಗೂಗಲ್ 

☘ ಇತ್ತೀಚೆಗೆ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದವರು ? 
- ಎಂ.ಎಸ್.ಮಹೇಂದ್ರಸಿಂಗ್ ಧೋನಿ ಮತ್ತು ಸುರೇಶ್ ರೈನಾ

☘ ಇತ್ತೀಚೆಗೆ ನರೇಂದ್ರ ಮೋದಿಯವರು ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಪ್ರಾರಂಭಿಸುವುದಕ್ಕಾಗಿ ಘೋಷಣೆ ಮಾಡಿದ್ದು ಇದನ್ನು ಕಾರ್ಯಗತಗೊಳಿಸುವ ನೋಡಲ್ ಏಜೆನ್ಸಿ 
- ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ 

☘ ಇತ್ತೀಚೆಗೆ ಭಾರತ ಯಾವ ದೇಶದೊಂದಿಗೆ ಸಾಂಸ್ಕೃತಿಕ ಒಪ್ಪಂದಕ್ಕೆ ಸಹಿ ಹಾಕಿದೆ ?
 - ಇಸ್ರೇಲ್ 

☘ ಖಾಸಗಿ ವಲಯದ ಕಂಪನಿ ಎಕನಾಮಿಕ್ ಎಕ್ಸ್ ಪೋಸಿವ್ಸ್ ಲಿಮಿಟೆಡ್ ಸಂಪೂರ್ಣವಾಗಿ ತಯಾರಿಸಿದ ಯಾವ ಮೊದಲ ರಾಕೆಟನ್ನು ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷಿಸಲಾಯಿತು ? 
- ಪಿನಾಕಾ

☘ ಯಾವ ಕುಬ್ಜ ಗ್ರಹಕ್ಕೆ ಸಂಶೋಧಕರು ಓಷನ್ ವರ್ಲ್ಡ್ ಸ್ಥಾನಮಾನ ನೀಡಿದರು ?
 - ಸೆರೆಸ್

☘ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 
- 2030 

☘ ಇತ್ತೀಚಿಗೆ ಮೋದಿಯವರು ಎಲ್ಲಿ ಸೌರ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು
-  ಮಧ್ಯಪ್ರದೇಶ ರೇವಾ ಸೌರ್ ವಿದ್ಯುತ್ ಕೇಂದ್ರ 

☘ ದೇಶದ ಅತೀ ಉದ್ದದ ಮತ್ತು ಸಮುದ್ರದ ಮೇಲೆ ನಿರ್ಮಾಣಗೊಂಡಿರುವ ದೇಶದ ಮೊದಲ ರೋಪ್ ವೇ ಎಲ್ಲಿದೆ ? 
- ಮುಂಬೈ - ಎಲಿಫೆಂಟಾ ಗುಹೆ ನಡುವೆ 

☘ ಜಮ್ಮು ಕಾಶ್ಮೀರದಲ್ಲಿ ಚಿನಾಬ್ ನದಿಗೆ ನಿರ್ಮಿಸಲಾಗುತ್ತಿರುವ ಜಗತ್ತಿನ ಎತ್ತರದ ರೈಲ್ವೇ ಸೇತುವೆ ಯಾವಾಗ ಪೂರ್ಣಗೊಳ್ಳಲಿದೆ ? 
- 2022

☘ ಇತ್ತೀಚೆಗೆ ಅಧಿಕೃತವಾಗಿ ಗಿನ್ನಿಸ್ ದಾಖಲೆಗೆ ಸೇರಿದ ಮಾನವ ಕಂಪ್ಯೂಟರ್ ಎಂದು ಹೆಸರು ವಾಸಿಯಾದವರು ಯಾರು
-  ಶಕುಂತಲಾದೇವಿ 

☘ 2020 ರ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮೋದಿಯವರು ಯಾವ ಅಭಿಯಾನಕ್ಕೆ ಚಾಲನೆ ನೀಡಿದರು 
- ಕಸ ಮುಕ್ತ ಭಾರತ ಅಭಿಯಾನ 

☘ 10 ಸಾವಿರ ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಯಾವ ಸುರಂಗ ರಸ್ತೆಯನ್ನು ಮೋದಿ ಉದ್ಘಾಟಿಸಲಿದ್ದಾರೆ
 - ರೋಹ್ವಾಂಗ್ ಸುರಂಗ ಮಾರ್ಗ

☘ ಹೊಸ ಕಾಯ್ದೆ ಅನ್ವಯ ಆಂಧ್ರಪ್ರದೇಶದ 3 ರಾಜಧಾನಿಗಳು 
ಎ . ವಿಶಾಖಪಟ್ಟಣಂ - ಕಾರ್ಯಾಂಗ ರಾಜಧಾನಿ 
ಬಿ . ಅಮರಾವತಿ - ಶಾಸಕಾಂಗ ರಾಜಧಾನಿ
 ಸಿ . ಕರ್ನೂಲ್ - ನ್ಯಾಯಾಂಗ ರಾಜಧಾನಿ

logoblog

Thanks for reading General knowledge

Previous
« Prev Post

No comments:

Post a Comment