*_ಭಾರತದ ಸಂವಿಧಾನ_*
👇🏿👇🏿👇🏿
1) _ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?_
*ಎಂ.ಎನ್.ರಾಯ್*
2) _1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?_
*ಜವಹಾರ್ ಲಾಲ್ ನೆಹರು*
3) _1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?_
*1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ*
4) _ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?_
*_ಸಂವಿಧಾನದ ಭಾಗಗಳು - 22*
*ಸಂವಿಧಾನದ ಅನುಚ್ಛೇದಗಳು- 395*
*ಸಂವಿಧಾನದ ಅನುಸೂಚಿಗಳು- 8*_
5) _ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?_
*ಭಾರತ ಸಂವಿಧಾನ*
6) _ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು_ ?
*"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ*
7) _ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು_ ?
*1773 ರ ರೆಗ್ಯುಲೇಟಿಂಗ್ ಆಕ್ಟ್*
8) _ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು_ ?
*1853ರ ಚಾರ್ಟರ್ ಆಕ್ಟ್*
9) _ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ_ ?
*1858 ರ ಮ್ಯಾಗ್ನಕಾರ್ಟ ನ್ನು.*
9) _ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ_ ?
*1858ರ ಭಾರತ ಸರ್ಕಾರ ಕಾಯಿದೆ*
10) _ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು_ ?
*ಭಾರತ ಸರ್ಕಾರ ಕಾಯಿದೆಯ ಮೂಲಕ*
11)" _ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು_ ?
*ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)*
*ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ*
12) _ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು_ ?
*1909 ರ ಮಿಂಟೋ ಮಮಾರ್ಲೇ ಸುಧಾರಣೆ ಕಾಯ್ದೆ*
13) _ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ_ ?
*1919.*
14) _ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು_ ?
*ಸಂವಿಧಾನ.*
15) _ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ_ ?
*ಪ್ರಜೆಗಳ.*
16) _ಸಂವಿಧಾನದ ಹೃದಯ ಯಾವುದು_ ?
*ಪ್ರಸ್ತಾವನೆ.*
17) _ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?_
*ಭಾರತ.*
18) _ಭಾರತದ ಸಂವಿಧಾನದ ಆದರ್ಶವೇನು?_
*ಸುಖೀ ರಾಜ್ಯವನ್ನು ಸ್ಥಾಪಿಸುವುದು.*
19) " _ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ_ ?
*ನವೆಂಬರ್ 26.*
20) _ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು_ ?
*ಕ್ಯಾಬಿನೆಟ್ ಆಯೋಗ*
21) _ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ_ ?
*1946 ರಲ್ಲಿ.*
22) _ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?_
*ಡಾ.ಬಾಬು ರಾಜೇಂದ್ರ ಪ್ರಸಾದ್*
23) _ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ_ ?
*1946, ಡಿಸೆಂಬರ್ 9.*
24) _ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?_
*ಡಾ.ಸಚ್ಚಿದಾನಂದ ಸಿನ್ಹಾ*.
25) _ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?_
*ಬಿ.ಎನ್.ರಾಯ್.*
26) _ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?_
*ಬೆನಗಲ್ ನರಸಿಂಹರಾವ್.*
27) _ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?_
*ಪ್ರೊ.ಎಚ್.ಸಿ. ಮುಖರ್ಜಿ*.
28) _ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು_ ?
*22.*
29) _ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?_
*ಡಾ.ಬಿ.ಆರ್.ಅಂಬೇಡ್ಕರ್ ರವರನ್ನು*
30) _ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು_ ?
*ಡಾ.ಬಿ.ಆರ್.ಅಂಬೇಡ್ಕರ್*
31) _ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?_
*ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್*
32) _1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ
ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?_
*ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ*
33) _ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?_
*2 ವರ್ಷ 11 ತಿಂಗಳು 18 ದಿನ.*
34) _ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?_
*1951 ರಲ್ಲಿ.*
35) _ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?_
*ಸುಕುಮಾರ ಸೇನ್.*
36) _ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?_
*26 ನವೆಂಬರ್ 2015.*
37) _ಭಾರತದ ಸಂವಿಧಾನವು_ ?
*ದೀರ್ಘ ಕಾಲದ ಸಂವಿಧಾನ*
38) _ಭಾರತ ಸಂವಿಧಾನದ ಸ್ವರೂಪವು_
*ಸಂಸದೀಯ ಪದ್ದತಿ*
39) _ಭಾರತದ ಸಂವಿಧಾನವು ಒಂದು_
*ಭಾಗಶಃ ಕಠಿಣ.ಭಾಗಶಃಸರಳವಾದ ಸಂವಿಧಾನ*
40) _ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ_ ?
*ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ*
41) _ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?_
*ಸರ್ವೋಚ್ಚ ನ್ಯಾಯಾಲಯ.*
42) _ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?_
*ಕಾನೂನುಗಳು.*
43) _ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?_
*ಭಾಗ-3*(TET-2020)
44) _ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ_ ?
*ಐರಿಷ್ ಸಂವಿಧಾನದಿಂದ*
45) _ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?_
*ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ*
=====================
No comments:
Post a Comment