Saturday 27 March 2021

The Night Curfew, Week and Lockdowns are not regulated by Corona - Union Health Minister

  MahitiVedike Com       Saturday 27 March 2021
Subject : night curfew related 
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ನೈಟ್​​ ಕರ್ಫ್ಯೂ, ವೀಕ್ ಎಂಡ್  ಲಾಕ್​​ಡೌನ್​ಗಳು ಕೊರೊನಾ ನಿಯಂತ್ರಣ ಮಾಡಲ್ಲ - ಕೇಂದ್ರ ಆರೋಗ್ಯ ಸಚಿವ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣ ಮಾಡಲು ನೈಟ್​​ ಕರ್ಫ್ಯೂ ಹಾಗೂ ವಾರಾಂತ್ಯಗಳಲ್ಲಿ ಲಾಕ್​​ಡೌನ್​ ಮಾಡುವುದರಿಂದ ಫಲಿತಾಂಶವನ್ನು ನಿರೀಕ್ಷೆ ಮಾಡಲು ಆಗಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಹಾಗೂ ಲಸಿಕೆ ಪಡೆದುಕೊಳ್ಳುವುದರಿಂದ ಸೋಂಕಿನ ನಿಯಂತ್ರಣ ಸಾಧ್ಯ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವ ವರ್ಧನ್ ಹೇಳಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ ಐದು ತಿಂಗಳ ಬಳಿಕ ಮೊದಲ ಬಾರಿಗೆ 62 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರ ನಡುವೆಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೊರೊನಾ ಆರಂಭವಾದ ಮೊದಲ ದಿನದಿಂದಲೂ ನಾವು ವೈಜ್ಞಾನಿಕ ಆಧಾರಗಳೊಂದಿಗೆ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ನಮ್ಮ ನಿರ್ಧಾರಗಳ ಕುರಿತು ವಿಶ್ವ ಸಮುದಾಯವೇ ಮೆಚ್ಚುಗೆ ಸೂಚಿಸಿದೆ ಎಂದು ಸಚಿವರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ತಡೆಯಲು ಟೆಸ್ಟ್‌-ಟ್ರ್ಯಾಕ್‌-ಟ್ರೀಟ್‌ 3 ಟಿ ಸೂತ್ರ ಪಾಲನೆ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ದೇಶದಲ್ಲಿ ಇನ್ನು ಆರು ಸ್ವದೇಶಿ ಕೊರೊನಾ ವ್ಯಾಕ್ಸಿನ್​​ಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ ಎಂದು ಹೇಳಿದರು.
 
logoblog

Thanks for reading The Night Curfew, Week and Lockdowns are not regulated by Corona - Union Health Minister

Previous
« Prev Post

No comments:

Post a Comment